ಚೆನ್ನೈ: ನನ್ನನ್ನು ಕೇಸರೀಕರಣಗೊಳಿಸುವ ಪ್ರಯತ್ನ ನಡೆದಿದೆ. ಆದರೆ ನಾನು ಸಿಕ್ಕಿಹಾಕಿಕೊಳ್ಳುವುದಿಲ್ಲ ಎಂದು ದಕ್ಷಿಣದ ಸೂಪರ್ ಸ್ಟಾರ್ ಹಾಗೂ ರಾಜಕಾರಣಿ ರಜನಿಕಾಂತ್ ತಿಳಿಸಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ರಜನಿಕಾಂತ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಐದನೇ ಶತಮಾನದ ತಮಿಳು ಕವಿ ತಿರುವಳ್ಳುವರ್ ಅವರು ಕೇಸರಿ ಬಟ್ಟೆ ಧರಿಸಿದ ಫೋಟೋಗಳನ್ನು ಟ್ವೀಟ್ ಮಾಡುವ ಮೂಲಕ ತಮಿಳುನಾಡು ಬಿಜೆಪಿ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೇ ಉದಾಹರಣೆಯಾಗಿ ನೀಡಿದ 68 ವರ್ಷದ ನಟ ರಜನಿಕಾಂತ್, ತಿರುವಳ್ಳುವರ್ ಅವರಂತೆ ನಾನು ಸಿಕ್ಕಿಹಾಕಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
#Correction Rajinikanth: Attempts being made by some to paint me in BJP colours like the same way Thiruvalluvar (Tamil poet) is being saffronised. Fact remains that neither Thiruvalluvar nor I will fall into their trap. pic.twitter.com/bezX4iBsJw
— ANI (@ANI) November 8, 2019
Advertisement
ತಮಿಳುನಾಡು ಬಿಜೆಪಿ ನಾಯಕ ಪೊನ್ನು ರಾಧಾಕೃಷ್ಣನ್ ಅವರು ನಿಮ್ಮನ್ನು ಪಕ್ಷಕ್ಕೆ ಆಹ್ವಾನಿಸಿರುವ ಕುರಿತು ಮಾತುಗಳು ಕೇಳಿಬರುತ್ತಿವೆ ಎಂಬ ಪ್ರಶ್ನೆಗೆ, ಬಿಜೆಪಿ ಸೇರುವ ಕುರಿತು ನನಗೆ ಯಾವುದೇ ರೀತಿಯ ಆಫರ್ ಬಂದಿಲ್ಲ. ಸುಖಾಸುಮ್ಮನೆ ನನ್ನನ್ನು ಬಿಜೆಪಿ ಬಣ್ಣದಿಂದ ಚಿತ್ರಿಸಲಾಗುತ್ತಿದೆ. ತಿರುವಳ್ಳುವರ್ ಅವರಂತೆ ನನ್ನನ್ನೂ ಕೇಸರೀಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ನಾನು ಸಿಕ್ಕಿಹಾಕಿಕೊಳ್ಳುವುದಿಲ್ಲ ಎಂದು ತಿಳಿಸಿದರು.
Advertisement
ಈ ತಿಂಗಳ ಕೊನೆಯಲ್ಲಿ ಗೋವಾದಲ್ಲಿ ಭಾರತದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಜನಿಕಾಂತ್ ಅವರಿಗೆ ಐಕಾನ್ ಆಫ್ ಗೋಲ್ಡನ್ ಜುಬಿಲಿ ಪ್ರಶಸ್ತಿ ನೀಡುವ ಕುರಿತು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ರಜನಿಕಾಂತ್ ಈ ಹೇಳಿಕೆ ನೀಡಿದ್ದಾರೆ.
Advertisement
ರಜನಿಕಾಂತ್ ಹೇಳಿಕೆ ಕುರಿತು ಬಿಜೆಪಿ ಪ್ರತಿಕ್ರಿಯಿಸಿದ್ದು, ಬಿಜೆಪಿ ಸೇರಲು ನಟ ರಜನಿಕಾಂತ್ ಅವರಿಗೆ ಆಸಕ್ತಿ ಇದೆ ಎಂದು ನಾವು ಎಂದೂ ಹೇಳಿಲ್ಲ. ರಜನಿಕಾಂತ್ ಪಕ್ಷ ಸೇರಿದ್ದಾರೆ ಅಥವಾ ಸೇರಲು ಬಯಸಿದ್ದಾರೆ ಎಂದು ನಾವು ಎಲ್ಲೂ ಹೇಳಿಲ್ಲ. ಈ ರೀತಿಯ ಊಹಾಪೋಹಗಳಿಗೆ ಬಿಜೆಪಿ ಒತ್ತು ನೀಡುವುದಿಲ್ಲ. ನಮ್ಮ ಗಮನ ಈಗ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ ನಡೆಸುತ್ತಿರುವುದರ ಮೇಲಿದೆ ಎಂದು ಪಕ್ಷದ ಮುಖಂಡ ಮುರಳೀಧರ್ ರಾವ್ ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ನಟ-ರಾಜಕಾರಣಿ ರಜನಿಕಾಂತ್ ಅವರು ದೇವರು ಬಯಸಿದರೆ ರಾಜಕೀಯ ಪ್ರವೇಶಿಸುವುದಾಗಿ ಹೇಳಿದ್ದರು. ಅಲ್ಲದೆ ಮುಂದಿನ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮ ಪಕ್ಷವನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದರು. ಮತ್ತೆ ದಿನಾಂಕ ಮುಂದೂಡಿ 2021ಕ್ಕೆ ಪಕ್ಷ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಆಡಳಿತಾರೂಢ ಎಐಎಡಿಎಂಕೆ ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಒ ಪನೀರ್ ಸೆಲ್ವಂ ಅವರ ಮಧ್ಯೆ ಅಧಿಕಾರದ ಘರ್ಷಣೆ ನಡೆಯುತ್ತಿರುವ ಬೆನ್ನಲ್ಲೇ ರಜನಿಕಾಂತ್ ಈ ಹೇಳಿಕೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಹಾಗೂ ಜಯಲಲಿತಾ ಅವರು ಸಾವನ್ನಪ್ಪಿದ ನಂತರ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳಾಗುತ್ತಿವೆ. ನಟರಾದ ರಜನಿಕಾಂತ್ ಹಾಗೂ ಕಮಲ್ ಹಸನ್ ಅವರು ಇದೀಗ ರಾಜಕೀಯದಲ್ಲಿ ಮುನ್ನೆಲೆ ಬಂದಿದ್ದಾರೆ. ಇಬ್ಬರು ನಟರು ಸಹ ರಾಜ್ಯ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.