ಚೆನ್ನೈ: ಮಲಯಾಳಂ ಸಿನಿ ರಂಗದಲ್ಲಿ ಸಂಚಲನ ಸೃಷ್ಟಿ ಮಾಡಿರೋ ಹೇಮಾ ವರದಿ (Hema Committee report), ಇದೀಗ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯ (Sexual Assault) ಕುರಿತಂತೆ ಬಹಿರಂಗವಾಗಿ ನಟಿಯರು ಮಾತಾಡುತ್ತಿದ್ದಾರೆ. ಜೊತೆಗೆ ದೂರುಗಳು ದಾಖಲಾಗುತ್ತಿವೆ.
ಈ ನಡುವೆ ನಟ ರಜನಿಕಾಂತ್ (Rajinikanth) ಸಹ ಪ್ರತಿಕ್ರಿಯೆ ನೀಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಕುರಿತಂತೆ ಜಸ್ಟೀಸ್ ಹೇಮಾ ಸಮಿತಿ ಸಲ್ಲಿಸಿರುವ ವರದಿ ಬಗ್ಗೆ ನನಗೆ ಗೊತ್ತಿಲ್ಲ. ತಮಿಳುನಾಡಿನಲ್ಲಿ ಅಂತಹ ಸಮಿತಿ ರಚಿಸಬೇಕೆಂಬ ಬೇಡಿಕೆಯ ಬಗ್ಗೆಯೂ ನನಗೆ ಮಾಹಿತಿ ಇಲ್ಲ, ಕ್ಷಮಿಸಿ ಎಂದು ನಟ ಹೇಳಿದ್ದಾರೆ. ಇದನ್ನೂ ಓದಿ: ದರ್ಶನ್‌ಗಾಗಿ ಬಟ್ಟೆ, ಡ್ರೈಪ್ರೂಟ್ಸ್ ತಂದ ವಿಜಯಲಕ್ಷ್ಮಿ – ನಿಮ್ಮೊಂದಿಗೆ ನಾನಿದ್ದೇನೆ ಎಂದು ದರ್ಶನ್‌ಗೆ ಅಭಯ
ಮಲಯಾಳ ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಶೋಷಣೆ, ತಾರತಮ್ಯ ಮತ್ತು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಇತ್ತೀಚೆಗೆ ಬಿಡುಗಡೆಯಾಗಿತ್ತು. ವರದಿ ಬಹಿರಂಗಗೊಂಡ ಬೆನ್ನಲ್ಲೇ ಕಲಾವಿದರ ಸಂಘಕ್ಕೆ ಅಧ್ಯಕ್ಷ ನಟ ಮೋಹನ್‌ಲಾಲ್, ಇತರ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: ನಾನು ಪವರ್ ಗ್ರೂಪ್‌ನಲ್ಲಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ – ಹೇಮಾ ಕಮಿಷನ್ ವರದಿಗೆ ಮೋಹನ್‌ಲಾಲ್ ರಿಯಾಕ್ಷನ್
ಕಳೆದ ಒಂದು ದಿನದ ಹಿಂದೆಯಷ್ಟೇ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ (Mohanlal) ಮೌನ ಮುರಿದು ಮಾತನಾಡಿದ್ದರು. ಮಲಯಾಳಂ ಚಿತ್ರರಂಗದ ಯಾವುದೇ ಪವರ್ ಗ್ರೂಪ್‌ನಲ್ಲಿ (ಶಕ್ತಿ ಬಣ) ನಾನು ಗುರುತಿಸಿಕೊಂಡಿಲ್ಲ. ಅಂತಹ ಬಣಗಳ ಅಸ್ತಿತ್ವದ ಬಗ್ಗೆ ನನಗೆ ಮಾಹಿತಿಯೂ ಇಲ್ಲ ಅಂತ. ಹೇಮಾ ಸಮಿತಿ ವರದಿ ಬಿಡುಗಡೆ ಮಾಡಿರುವುದು ಸರ್ಕಾರ ಉತ್ತಮ ನಿರ್ಧಾರವಾಗಿದೆ ಅಂತ ಹೇಳಿದ್ದರು. ಇದನ್ನೂ ಓದಿ: ಕೇರಳ ಚಿತ್ರರಂಗ ಆಯ್ತು, ಟಾಲಿವುಡ್‌ನಲ್ಲೂ ಕಂಪನ; ʻದಿ ವಾಯ್ಸ್ ಆಫ್ ವುಮನ್ʼ ವರದಿ ಬಹಿರಂಗಕ್ಕೆ ಸಮಂತಾ ಒತ್ತಾಯ!
ಅಲ್ಲದೇ ರಾಜೀನಾಮೆ ನೀಡಲು ಕಾರಣವೇನು ಎಂಬ ಪ್ರಶ್ನೆಗೆ, ವರದಿ ಬಿಡುಗಡೆಯಾದ ಬೆನ್ನಲ್ಲೇ ಕಲಾವಿದರ ಸಂಘದ ವಿರುದ್ಧ ಆರೋಪಗಳು ಕೇಳಿಬಂದಿದ್ದು, ಈ ಹಿನ್ನೆಲೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಯಿತು. ಸಂಘದ ಕೆಲವು ಸದಸ್ಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಪ್ಪು ಮಾಡಿದವರ ವಿರುದ್ಧ ಸರಿಯಾದ ಸಾಕ್ಷಿಗಳಿದ್ದರೆ ಶಿಕ್ಷಿಸಲಿ ಎಂದು ಸಹ ಆಗ್ರಹಿಸಿದ್ದರು.