ಕಾಲಿವುಡ್ (Kollywood) ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಜೈಲರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶೂಟಿಂಗ್‌ಗೆ ಬ್ರೇಕ್ ಹಾಕಿ, ಪುತ್ರಿ ಐಶ್ವರ್ಯ ಜೊತೆ ತಿರುಪತಿ ದೇವಸ್ಥಾನಕ್ಕೆ ರಜನಿಕಾಂತ್ ಭೇಟಿ ನೀಡಿದ್ದಾರೆ.
ರಜನಿಕಾಂತ್ ಗುರುವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಪುತ್ರಿ ಐಶ್ವರ್ಯಾ (Aishwarya) ಜೊತೆ ಬೆಳಗಿನ ಜಾವ ತಿರುಪತಿ (Tirupathi) ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬುಧವಾರ ತಿರುಪತಿಗೆ ಧಾವಿಸಿ, ವಿಶ್ರಾಂತಿ ನಂತರ ಮರುದಿನ ದೇವರ ದರ್ಶನ ಪಡೆದರು. ಇದನ್ನೂ ಓದಿ: ನಟ ವಿರೇನ್ ಕೇಶವ್‌ಗೆ ಚಲನಚಿತ್ರೋತ್ಸವದ ‘ಅತ್ಯುತ್ತಮ ನಟ’ ಪ್ರಶಸ್ತಿ
Super star @rajinikanth along with daughter @ash_rajinikanth visited Thirumala devasthanam and participated in Suprabatha seva. ✨#Rajinikanth???? pic.twitter.com/vk9pIFmWpg
— ???????????????????????????????????????????? (@UrsVamsiShekar) December 15, 2022
ರಜನಿಕಾಂತ್ `ಜೈಲರ್’ನಲ್ಲಿ ಹೊಸ ಅವತಾರ, ಪಾತ್ರದ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಇನ್ನೂ ಕನ್ನಡದ ಸ್ಟಾರ್ ನಟ ಶಿವಣ್ಣ ಕೂಡ ರಜನಿಕಾಂತ್ ಚಿತ್ರದಲ್ಲಿ ನಟಿಸುತ್ತಿರೋದು ವಿಶೇಷ.