ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ‘ಜೈಲರ್’ ಸಿನಿಮಾದ ಗೆಲುವಿನ ಬೆನ್ನಲ್ಲೇ ಮಲೇಷ್ಯಾದ (Malaysia) ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ಅವರು ರಜನಿಯನ್ನು ಭೇಟಿ ಮಾಡಿದ್ದಾರೆ. ತಮ್ಮಿಬ್ಬರ ಭೇಟಿಯ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಭೇಟಿಯ ಕುರಿತು ಅಚ್ಚರಿಯ ಸಂಗತಿಗಳನ್ನು ಹೊರ ಹಾಕಿದ್ದಾರೆ.
Advertisement
ಜೈಲರ್ ಸಿನಿಮಾ ಬಿಡುಗಡೆಗೂ ಮುನ್ನ ರಜನಿಕಾಂತ್ ಉತ್ತರ ಪ್ರದೇಶದ ಪ್ರವಾಸ ಮಾಡಿದ್ದರು. ಹಿಮಾಲಯದ ಪ್ರವಾಸ ಮುಗಿದ ನಂತರ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದರು. ಜೊತೆಗೆ ಜಾರ್ಖಂಡ್ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರನ್ನು ಭೇಟಿಯಾಗಿದ್ದರು. ಇದೀಗ ಮಲೇಷ್ಯಾದ ಪ್ರಧಾನಿಯನ್ನೇ ತಲೈವ ಮುಖಾಮುಖಿಯಾಗಿದ್ದಾರೆ. ಹಾಗಾಗಿ ರಜನಿ ಬಗ್ಗೆ ಹಲವಾರು ಚರ್ಚೆಗಳು ನಡೆದಿವೆ.
Advertisement
Advertisement
ರಜನಿಕಾಂತ್ ರಾಜಕಾರಣಕ್ಕೆ ಬರುವ ವಿಚಾರ ಇಂದು ನೆನ್ನೆಯದಲ್ಲ. ಹಲವು ವರ್ಷಗಳಿಂದ ಈ ವಿಷಯ ಚಾಲ್ತಿಯಲ್ಲಿದೆ. ರಜನಿ ಕೂಡ ಹಲವಾರು ಬಾರಿ ರಾಜಕಾರಣಕ್ಕೆ ಬರುವ ಆಸೆಯನ್ನೂ ವ್ಯಕ್ತ ಪಡಿಸಿದ್ದಾರೆ. ಆದರೆ, ಇದೀಗ ಅವರಿಗೆ ರಾಜಕಾರಣದ ಬಗ್ಗೆ ಆಸಕ್ತಿ ಇಲ್ಲವೆಂದು ಹೇಳಲಾಗುತ್ತಿದೆ. ಆದರೆ, ರಾಜ್ಯಪಾಲರ ಹುದ್ದೆಯು ಅವರನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:‘ಛೂಮಂತರ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದ ರವಿಚಂದ್ರನ್
Advertisement
ರಜನಿಕಾಂತ್ ಅವರನ್ನು ರಾಜ್ಯಪಾಲರನ್ನು ಮಾಡುವ ಯೋಜನೆಯೊಂದು ಸಿದ್ಧವಾಗಿದ್ದು, ರಜನಿಕಾಂತ್ ಅದಕ್ಕಾಗಿ ಹಲವಾರು ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಹಾಗಾಗಿ ರಾಜಕಾರಣಿಗಳನ್ನು ರಜನಿ ಭೇಟಿ ಮಾಡುತ್ತಿದ್ದಾರೆ ಎನ್ನುವುದು ಕೆಲವರ ವಾದ. ಮಲೇಷ್ಯಾದಲ್ಲಿ ಸಾಕಷ್ಟು ಸಂಖ್ಯೆಯ ತಮಿಳರೂ ಇರುವುದರಿಂದ ಪ್ರಧಾನಿ ಭೇಟಿ ಮಹತ್ವ ಪಡೆದುಕೊಂಡಿದೆ.
ಅಲ್ಲದೇ, ಮಲೇಷ್ಯಾದ ಪ್ರಧಾನಿ ಭೇಟಿಯ ಸಂಗತಿಗಳು ಮುಂದಿನ ಸಿನಿಮಾದಲ್ಲೂ ಇರಲಿವೆ ಎಂದು ಪ್ರಧಾನಿ ಆಡಿದ್ದಾರೆ ಎನ್ನಲಾದ ಮಾತುಗಳು ಕೂಡ ಮಹತ್ವ ಪಡೆದುಕೊಂಡಿವೆ. ಅವರ ಮಾತುಕತೆ ಯಾವುದು? ಏನೆಲ್ಲ ಮಾತನಾಡಿದ್ದಾರೆ ಎನ್ನುವುದು ಮಾತ್ರ ಸಸ್ಪೆನ್ಸ್.
Web Stories