ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ‘ಜೈಲರ್ 2’ (Jailer 2) ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕೆಲಸದ ನಡುವೆ ಕೊಯಮತ್ತೂರು ಬಳಿಯ ಅನೈಕಟ್ಟಿ ಬಳಿಯಿರುವ ಮಾಥೇಶ್ವರನ್ ಶಿವನ ದೇವಸ್ಥಾನಕ್ಕೆ ತಲೈವಾ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಹೊಸ ಚಿತ್ರಕ್ಕಾಗಿ ಕುಮಟಾದಲ್ಲಿ ಬೀಡುಬಿಟ್ಟ ಜ್ಯೂ.ಎನ್‌ಟಿಆರ್, ಪ್ರಶಾಂತ್ ನೀಲ್
400 ವರ್ಷಗಳ ಹಿಂದಿನ ಮಾಥೇಶ್ವರನ್ ಶಿವನ ದೇಗುಲಕ್ಕೆ ರಜನಿಕಾಂತ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ತಲೈವಾ ಜೊತೆಗಿನ ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಇದನ್ನೂ ಓದಿ:1.12 ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸಿದ್ಧಾರ್ಥ್ ಮಲ್ಹೋತ್ರಾ
Superstar Rajinikanth visits a temple🛕 on his way to Jailer2️⃣ shoot. pic.twitter.com/4b0VJCIB3Z
— Manobala Vijayabalan (@ManobalaV) April 25, 2025
ಅಂದಹಾಗೆ, ‘ಕೂಲಿ’ ಸಿನಿಮಾದ ಕೆಲಸ ಮುಗಿಯುತ್ತಿದ್ದಂತೆ ರಜನಿಕಾಂತ್ (Rajinikanth) ಈಗ ‘ಜೈಲರ್ 2’ (Jailer 2) ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರೊಂದಿಗೆ ಶಿವಣ್ಣ ಹಾಗೂ ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.