ತಮಿಳು ಸಿನಿಮಾ ರಂಗದಿಂದ ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಇಬ್ಬರು ಹೆಸರಾಂತ ಸ್ಟಾರ್ ನಟರು ಒಂದೇ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ಈ ಸುದ್ದಿ ಅಭಿಮಾನಿಗಳ ಪಾಲಿಗೆ ಹಬ್ಬದಂತಿದೆ. ಹೌದು, ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಹಾಗೂ ಹೆಸರಾಂತ ಸ್ಟಾರ್ ನಟ ಕಮಲ್ ಹಾಸನ್ (Kamal Haasan) ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಒಬ್ಬರು ನಟರಾಗಿದ್ದರೆ ಮತ್ತೊಬ್ಬರು ನಿರ್ಮಾಪಕರಾಗಲಿದ್ದಾರೆ.
Advertisement
ಹೌದು, ಮೊನ್ನೆಯಷ್ಟೇ ಇಂಥದ್ದೊಂದು ಸಿಹಿ ಸುದ್ದಿಯನ್ನು ಕಮಲ್ ಹಾಸನ್ ಹಂಚಿಕೊಂಡಿದ್ದು, ರಜನಿಕಾಂತ್ ಆಗಿ ಸಿನಿಮಾವೊಂದನ್ನು ನಿರ್ಮಾಣ ಮಾಡಬೇಕಿದೆ. ಈ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದಾರೆ. ತಲೈವ ಸದ್ಯ ಜೈಲರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ 170ನೇ ಸಿನಿಮಾ ಅನೌನ್ಸ್ ಕೂಡ ಆಗಿದೆ. ಈ ಸಂಭ್ರಮದಲ್ಲಿ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ ಕಮಲ್.
Advertisement
Advertisement
ಒಂದು ಕಡೆ ಕಮಲ್ ಹಾಸನ್ ಮತ್ತು ರಜನಿಕಾಂತ್ ಒಂದು ಗೂಡುತ್ತಿದ್ದರೆ, ಮತ್ತೊಂದು ಕಡೆ ಕಾಲಿವುಡ್ ಸೂಪರ್ ಸ್ಟಾರ್ ತಲೈವಾ ಮುಂದೆ ಅಬ್ಬರಿಸಲು ಸ್ಟಾರ್ ನಟನಿಗೆ ಮಣೆ ಹಾಕಿದ ಸುದ್ದಿಯೂ ಬಂದಿದೆ. ರಜನಿ 170ನೇ ಚಿತ್ರಕ್ಕೆ ಚಿಯಾನ್ ವಿಕ್ರಮ್ (Vikram Chian) ಎಂಟ್ರಿ ಕೊಡುತ್ತಿದ್ದಾರೆ. ತಲೈವಾಗೆ ವಿಲನ್ ಆಗಿ ಖಡಕ್ ಆಗಿ ನಟಿಸಲಿದ್ದಾರೆ. ಇದನ್ನೂ ಓದಿ:ಪಿಎಚ್ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್
Advertisement
ವಿಕ್ರಮ್ ಅವರು ಕಾಲಿವುಡ್ನ ಬೇಡಿಕೆಯ ಹೀರೋ. ವೃತ್ತಿ ಜೀವನದಲ್ಲಿ ಅವರು ಹಲವು ಡಿಫರೆಂಟ್ ರೋಲ್ಗಳನ್ನು ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಹಾಗಾಗಿ ವಿಲನ್ (Villain) ಪಾತ್ರ ಮಾಡಲು ತಲೈವಾ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಕ್ಕಾಗಿ 50 ಕೋಟಿ ರೂಪಾಯಿ ಪೇಮೆಂಟ್ ಪಡೆದಿದ್ದಾರೆ ಎನ್ನಲಾಗುತ್ತಿದೆ.
‘ತಲೈವರ್ 170’ನೇ ಚಿತ್ರಕ್ಕೆ ಟಿಜಿ ಜ್ಞಾನವೇಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಲೈಕಾ ಪ್ರೊಡಕ್ಷನ್ (Lyca Productions) ಬಂಡವಾಳ ಹೂಡುತ್ತಿದೆ. ತಮಿಳುನಾಡಿನಲ್ಲಿ ಹಲವು ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿದ ಖ್ಯಾತಿ ಲೈಕಾ ಈಗ ರಜನಿಕಾಂತ್ 170ನೇ ಚಿತ್ರ ನಿರ್ಮಾಣ¨ ಮಾಡ್ತಿದ್ದಾರೆ.