ಚೆನ್ನೈ: ತಮಿಳುನಾಡಿನಲ್ಲಿ ರಾಜಕೀಯ ಪ್ರವೇಶದ ಬಗ್ಗೆ ರಜನಿಕಾಂತ್ ಅಧಿಕೃತವಾಗಿ ಘೋಷಣೆ ಮಾಡಿದ್ದು, ಇದ್ದಕ್ಕೆ ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಮಾಧ್ಯಮ ಪ್ರಚಾರಕ್ಕಾಗಿ ರಜಿನಿಕಾಂತ್ ರಾಜಕೀಯ ಪ್ರವೇಶಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೇವಲ ಪ್ರಚಾರಕ್ಕಾಗಿ ರಜಿನಿಕಾಂತ್ ರಾಜಕೀಯ ಪ್ರವೇಶಿಸಿದ್ದಾರೆ. ತಮಿಳುನಾಡು ಜನರು ಬುದ್ಧಿವಂತರು. ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದು, ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.
Advertisement
ರಜನಿಕಾಂತ್ ಅನಕ್ಷರಸ್ಥರಾಗಿದ್ದು, ಗೊತ್ತು ಗುರಿ ಇಲ್ಲದ ವ್ಯಕ್ತಿ. ಅವರು ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದು, ಅದರ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ. ತಮಿಳುನಾಡಿನ ಜನ ಬುದ್ಧಿವಂತರು ಯಾರಿಗೆ ಮತ ಹಾಕಬೇಕೆಂದು ಗೊತ್ತಿದೆ ಎಂದು ಟೀಕಿಸಿದ್ರು.
Advertisement
ಚೆನ್ನೈನ ರಾಘವೇಂದ್ರ ಹಾಲ್‍ನಲ್ಲಿ ನಡೆದ ಅಭಿಮಾನಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಜನಿಕಾಂತ್, ಸ್ವಂತ ಪಕ್ಷ ಸ್ಥಾಪಿಸುತ್ತಿರುವುದಾಗಿ ಘೋಷಿಸಿದ್ರು. ಬಾಬಾನ ಮುದ್ರೆ ಪ್ರದರ್ಶಿಸಿ, ಭಗವದ್ಗೀತೆಯ ಶ್ಲೋಕ ಪಠಿಸಿದ್ರು.
Advertisement
Advertisement
ಬಳಿಕ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕಾಗಿರುವ ಕಾರಣ, ತಮಿಳರಿಗಾಗಿ ನನ್ನ ಹೋರಾಟ ಮುಂದುವರೆಸುವುದಾಗಿ ಹೇಳಿದ್ರು. ಪಕ್ಷದ ಹೆಸರನ್ನ ಲೋಕಸಭಾ ಚುನಾವಣೆ ಹೊತ್ತಲ್ಲಿ ಬಹಿರಂಗಗೊಳಿಸುತ್ತೇನೆ. ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದಾಗಿ ತಿಳಿಸಿರುವ ರಜನಿ, ನಿಮ್ಮೆಲ್ಲರ ಸಹಕಾರ ನನಗೆ ಅಗತ್ಯವಾಗಿ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ನಮ್ಮ ಜನರೇ ನಮ್ಮ ಶಕ್ತಿ. ಸರ್ಕಾರ ರಚನೆ ಅಷ್ಟು ಸುಲಭವಲ್ಲ. ಕಳೆದ ಒಂದು ವರ್ಷದಿಂದ ತಮಿಳುನಾಡು ಜನ ರೋಸಿ ಹೋಗಿದ್ದಾರೆ. ನಿಮ್ಮೆಲ್ಲರ ಆಶಿರ್ವಾದ ಇದ್ದರೆ ಉತ್ತಮ ಆಡಳಿತ ನಡೆಸುತ್ತೇನೆ ಅಂದ್ರು.
ಇತ್ತ ರಜಿನಿಕಾಂತ್ ಗೆಳೆಯ ಕಮಲ್ ಹಾಸನ್ ಅವರ ನಿರ್ಧಾರವನ್ನು ಸ್ವಾಗತಿಸಿ ಶುಭಾಶಯ ತಿಳಿಸಿದ್ದರು.