ನವೆಂಬರ್ 1ರಂದು ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ತಮಿಳು ಸಿನಿಮಾ ರಂಗದ ಖ್ಯಾತ ನಟ, ಕನ್ನಡಿಗ ರಜನಿಕಾಂತ್ ಹಾಗೂ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಅತಿಥಿಗಳಾಗಿ ಆಗಮಿಸುವ ಸಾಧ್ಯತೆ ಇದೆ. ಈಗಾಗಲೇ ಇಬ್ಬರೂ ನಟರಿಗೆ ಆಹ್ವಾನ ನೀಡಲಾಗಿದೆಯಂತೆ.
Advertisement
ರಜನಿಕಾಂತ್ (Rajinikanth) ಬೆಂಗಳೂರಿನಲ್ಲಿ ಹುಟ್ಟು ಬೆಳೆದವರು. ತಮಿಳು ಸಿನಿಮಾ ರಂಗದಲ್ಲಿ ಹೆಸರು ಮಾಡಿದರೂ, ಇವತ್ತಿಗೂ ಕರ್ನಾಟಕದೊಂದಿಗೆ ನಂಟು ಇಟ್ಟುಕೊಂಡಿದ್ದಾರೆ. ಆಗಾಗ್ಗೆ ಬೆಂಗಳೂರಿಗೂ ಬಂದು ಹೋಗುತ್ತಾರೆ. ಜ್ಯೂನಿಯರ್ ಎನ್.ಟಿ.ಆರ್ (Jr. N.T.R) ತಾಯಿ ಕೂಡ ಕರ್ನಾಟಕದವರು. ಹಾಗಾಗಿ ಈ ಇಬ್ಬರನ್ನೂ ಅತಿಥಿಯಾಗಿ ಕರೆದಿದ್ದಾರಂತೆ. ಬರುವ ಕುರಿತು ಈಗಲೇ ಖಚಿತತೆ ಇಲ್ಲದಿದ್ದರೂ, ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದನ್ನೂ ಓದಿ: ʻಹೆಡ್ ಬುಷ್ʼ ವಿವಾದ – ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಯ್ತು #WeStandWithDhananjaya ಹ್ಯಾಷ್ ಟ್ಯಾಗ್
Advertisement
Advertisement
ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದ್ದು, ಇಂಥದ್ದೊಂದು ಗೌರವಕ್ಕೆ ಈ ಮೊದಲು ಡಾ.ರಾಜ್ ಕುಮಾರ್ ಕೂಡ ಪಾತ್ರರಾಗಿದ್ದಾರೆ. ಕನ್ನಡ ಸಿನಿಮಾ ರಂಗದ ಸೇವೆಗಾಗಿ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ತಂದೆ-ಮಗ ಎಂಬ ಖ್ಯಾತಿಗೂ ಈ ಇಬ್ಬರೂ ಪಾತ್ರರಾಗಿದ್ದಾರೆ.