ಕೇರಳದಲ್ಲಿ ತಲೈವಾ- ನೆಚ್ಚಿನ ನಟನನ್ನು ನೋಡಿ ಫ್ಯಾನ್ಸ್ ಜೈಕಾರ

Public TV
1 Min Read
rajinikanth

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ‘ಜೈಲರ್ 2’ (Jailer 2) ಚಿತ್ರೀಕರಣಕ್ಕಾಗಿ ಕೇರಳದ ಅಟ್ಟಪ್ಪಾಡಿಯಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ಅಭಿಮಾನಿಗಳಿಗೆ ರಜನಿಕಾಂತ್ ದರ್ಶನ ನೀಡಿದ್ದಾರೆ. ಕೇರಳದಲ್ಲಿ ಅಭಿಮಾನಿಗಳತ್ತ ಕೈ ಬೀಸುತ್ತಿರುವ ವಿಡಿಯೋವೊಂದು ಭಾರಿ ವೈರಲ್ ಆಗಿದೆ. ಇದನ್ನೂ ಓದಿ:‘ನಾಗ್‌ಜಿಲ್ಲಾ’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್- ಪೋಸ್ಟರ್ ಔಟ್

rajanikanth

‘ಕೂಲಿ’ ಸಿನಿಮಾ ಮುಗಿಯುತ್ತಿದ್ದಂತೆ ‘ಜೈಲರ್ 2’ ಸಿನಿಮಾವನ್ನು ರಜನಿಕಾಂತ್ ಕೈಗೆತ್ತಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಕೇರಳದ ಅಟ್ಟಪ್ಪಾಡಿಯಲ್ಲಿ ಭರದಿಂದ ನಡೆಯುತ್ತಿದೆ. ತಮ್ಮ ಶೂಟಿಂಗ್ ಬಿಡುವಿನ ಸಮಯದಲ್ಲಿ ಅಭಿಮಾನಿಗಳಿಗೆ ತಲೈವಾ ಸಮಯ ಕೊಟ್ಟಿದ್ದಾರೆ. ಕಾರಿನಲ್ಲಿ ಸಿಟಿ ರೌಂಡ್ ಹೊಡೆದಿದ್ದಾರೆ. ಕಾರ್‌ನ ಸನ್‌ರೂಫ್ ತೆಗೆದು ನಟ ಜನರತ್ತ ಕೈಬೀಸಿ ದರ್ಶನ ನೀಡಿದ್ದಾರೆ. ಆಗ ಫ್ಯಾನ್ಸ್ ನಟನಿಗೆ ಜೈಕಾರ ಹಾಕಿದ್ದಾರೆ. ಹತ್ತಿರದಿಂದ ನಟನನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಆಗಿ 2 ತಿಂಗಳಲ್ಲಿ ಖ್ಯಾತ ಕಿರುತೆರೆ ನಟಿಯ ಮಾಜಿ ಪತಿ ವಿಧಿವಶ

ಮೂಲಗಳ ಪ್ರಕಾರ, ಕೆಲವು ದಿನಗಳಿಂದ ರಜನಿಕಾಂತ್ ‘ಜೈಲರ್ 2’ಗಾಗಿ ಕೇರಳದಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲ ದಿನಗಳ ಕಾಲ ಶೂಟಿಂಗ್‌ ನಡೆಯಲಿದೆ. ಅವರೊಂದಿಗೆ ರಮ್ಯಾ ಕೃಷ್ಣನ್ ಮತ್ತು ಮಿರ್ನಾ ಮೆನನ್ ಕೂಡ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಕನ್ನಡದ ನಟ ಶಿವಣ್ಣ (Shivarajkumar) ಕೂಡ ನಟಿಸಲಿದ್ದಾರೆ. ಈ ಹಿಂದೆ ‘ಜೈಲರ್ 1’ರಲ್ಲಿ ನಟಿಸಿದ್ದರು. ಇದೀಗ ಭಾಗ 2ರಲ್ಲಿ ಅವರು ನಟಿಸಲಿದ್ದಾರೆ.

Share This Article