ನವದೆಹಲಿ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ತಲೈವಾ ರಜನಿಕಾಂತ್ ಅವರ ಭಾವಚಿತ್ರದ ಟ್ಯಾಟುವನ್ನು ತಮ್ಮ ಎದೆಯ ಮೇಲೆ ಹಾಕಿಸಿಕೊಂಡಿದ್ದಾರೆ.
- Advertisement 2
ಹರ್ಭಜನ್ ಸಿಂಗ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಟ್ಟಾ ಅಭಿಮಾನಿ. ಭಾನುವಾರದಂದು ರಜನಿಕಾಂತ್ ಅವರ 71ನೇ ಹುಟ್ಟುಹಬ್ಬದಂದು, ಹರ್ಭಜನ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಪೆಷಲ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಇದನ್ನೂ ಓದಿ: ನಾನು ಬಿಜೆಪಿ ಸೇರುವುದು Fake News: ಹರ್ಭಜನ್ ಸಿಂಗ್
- Advertisement 3
View this post on Instagram
- Advertisement 4
ಹರ್ಭಜನ್ ಸಿಂಗ್ ಅವರು ತಮ್ಮ ಎದೆಯ ಎಡಭಾಗದಲ್ಲಿ ಮಾಡಿದ ರಜನಿಕಾಂತ್ ಅವರ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿ, ನೀವು ನನ್ನ ಹೃದಯದ ಸೂಪರ್ಸ್ಟಾರ್. ನೀವು ಎಂಬತ್ತರ ದಶಕದ ಬಿಲ್ಲಾ. ನೀವು ತೊಂಬತ್ತರ ಬಾಷಾ. ನೀವು 2ಕೆ ಅಣ್ಣಾತ್ತೆ. ಒಬ್ಬನೇ ಸೂಪರ್ಸ್ಟಾರ್ಗೆ ನನ್ನ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದಿದ್ದರು. ಈ ಫೋಸ್ಟ್ ಇದೀಗ ವೈರಲ್ ಆಗುತ್ತಿದೆ. ಒಬ್ಬ ಸೆಲೆಬ್ರಿಟಿ ಮತ್ತೊಬ್ಬ ಸೆಲೆಬ್ರಿಟಿ ಸ್ಟಾರ್ ಕುರಿತಾಗಿ ಅಭಿಮಾನವನ್ನು ಹೊಂದಿರುವುದಕ್ಕಾಗಿ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?
ರಜನಿಕಾಂತ್ ಅವರಿಗೆ 71 ವರ್ಷ. ನಟ ತನ್ನ ಅಸಾಧಾರಣ ನಟನಾ ಶೈಲಿ ಮತ್ತು ವಿಶಿಷ್ಟವಾದ ಆನ್-ಸ್ಕ್ರೀನ್ ಮ್ಯಾನರಿಸಂಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರ ಅಭಿಮಾನಿಗಳ ಬಳಗ ಸಾಕಷ್ಟು ದೊಡ್ಡದಾಗಿದೆ. ಇವರ ಅಭಿಮಾನಿಗಳ ಸಾಲಿನಲ್ಲಿ ಹರ್ಭಜನ್ ಸಿಂಗ್ ಮೊದಲನೇಯ ಸ್ಥಾನದಲ್ಲಿದ್ದಾರೆ.