ರಜನಿಕಾಂತ್ ಲುಕ್ ಚೆನ್ನಾಗಿಲ್ಲ: ನೇರವಾಗಿ ಕಾಮೆಂಟ್ ಮಾಡಿದ ಫ್ಯಾನ್ಸ್

Public TV
1 Min Read
Rajani

ನಿನ್ನೆಯಷ್ಟೇ ಐಶ್ವರ್ಯ ರಜನಿಕಾಂತ್ (Rajinikanth) ನಿರ್ದೇಶನದಲ್ಲಿ ಮೂಡಿ ಬಂದ ಲಾಲ್ ಸಲಾಮ್ (Lal Salam) ಸಿನಿಮಾದ ರಜನಿಕಾಂತ್ ಅವರ ಫಸ್ಟ್ ಲುಕ್ ರಿಲೀಸ್ ಆಗಿದೆ. ಫಸ್ಟ್ ಲುಕ್ ನೋಡಿದ ರಜನಿ ಅಭಿಮಾನಿಗಳು ನಿರಾಸೆ ವ್ಯಕ್ತ ಪಡಿಸಿದ್ದಾರೆ. ಸೂಪರ್ ಸ್ಟಾರ್ ತೋರಿಸಿದ ರೀತಿಯೇ ಚೆನ್ನಾಗಿಲ್ಲ ಎಂದು ರಜನಿ ಮಗಳ ವಿರುದ್ಧವೇ ಕಾಮೆಂಟ್ ಮಾಡಿದ್ದಾರೆ.

rajinikanth aishwarya 2

ಐಶ್ವರ್ಯ ರಜನಿಕಾಂತ್ (Aishwarya Rajinikanth) ನಿರ್ದೇಶನದಲ್ಲಿ ಮೂಡಿಬರ್ತಿರುವ ಬಹುನಿರೀಕ್ಷಿತ ಸಿನಿಮಾ ಲಾಲ್ ಸಲಾಂ. ಈ ಚಿತ್ರದಲ್ಲಿ ತಲೈವ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಮಗಳು ಐಶ್ವರ್ಯ ನಿರ್ದೇಶನದ ಲಾಲ್ ಸಲಾಂ ಚಿತ್ರದಲ್ಲಿ ರಜನಿಕಾಂತ್ ಮೊಹಿದ್ದೀನ್ ಭಾಯ್ (Mohiddin Bhai) ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಶೇರ್ವಾನಿ ಉಡುಪು ಧರಿಸಿ ಸನ್‌ಗ್ಲಾಸ್ ತೊಟ್ಟು  ತಲೆಗೆ ಟೋಪಿ ಹಾಕಿ ಎಂಟ್ರಿಕೊಟ್ಟಿದ್ದಾರೆ ಸೂಪರ್ ಸ್ಟಾರ್. ಇದನ್ನೂ ಓದಿ:ಶಿವಣ್ಣ ಅಭಿಮಾನಿಗಳ ಆಕ್ರೋಶಕ್ಕೆ ಮಣಿದು, ಹೇಳಿದ ಮಾತು ಹಿಂಪಡೆದ ಸಂಬರ್ಗಿ

rajinikanth aishwarya 6

ವಿಷ್ಣು ವಿಶಾಲ್ ಮತ್ತು ವಿಕ್ರಾಂತ್  ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಜೀವಿತಾ ರಾಜಶೇಖರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆಸ್ಕರ್ ವಿಜೇತ ಎ ಆರ್ ರೆಹಮಾನ್ ಸಂಗೀತ, ವಿಷ್ಣು ರಂಗಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ.  ಲಾಲ್ ಸಲಾಂ’ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.

rajinikanth aishwarya 1

ಇಂಡಿಯನ್, ಕೈದಿ ನಂಬರ್-150, ೨.೦, ದರ್ಬಾರ್, ಪೊನ್ನಿಯಿನ್ ಸೆಲ್ವನ್ ಸರಣಿ ಸಿನಿಮಾ ನಿರ್ಮಿಸಿರುವ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಹೌಸ್ ಲಾಲ್ ಸಲಾಂ ಚಿತ್ರ ನಿರ್ಮಾಣ ಮಾಡುತ್ತಿದೆ. ಸದ್ಯ ಮುಂಬೈನಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ.

Share This Article