‘ಜೈಲರ್’ (Jailer) ಸಿನಿಮಾ ಸಕ್ಸಸ್ ನಂತರ ರಜನಿಕಾಂತ್ (Rajanikanth) ತಮ್ಮ 170ನೇ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ಚಿತ್ರತಂಡ ಕಡೆಯಿಂದ ಬೇಸರದ ಸುದ್ದಿಯೊಂದು ಸಿಕ್ಕಿದೆ. ‘ತಲೈವರ್ 170’ ಚಿತ್ರದ ನಟಿ ರಿತಿಕಾ ಸಿಂಗ್‌ಗೆ (Ritika Singh) ಚಿತ್ರೀಕರಣದ ವೇಳೆ ಕೈಗೆ ಪೆಟ್ಟಾಗಿದೆ.
ತಲೈವರ್ 170 ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಅದರಲ್ಲಿ ರಿತಿಕಾ ಸಿಂಗ್‌ಗೆ ಶೂಟಿಂಗ್ ವೇಳೆ ಕೈಗೆ ಗಾಯವಾಗಿದೆ. ಈ ಬಗ್ಗೆ ಸ್ವತಃ ನಟಿ ರಿತಿಕಾ ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಶ್ರೀಲೀಲಾ ಜೊತೆ ಆ್ಯಕ್ಟ್ ಮಾಡೋದೇ ದೊಡ್ಡ ಚಾಲೆಂಜ್ ಎಂದ ನಿತಿನ್
ತಲೈವರ್ 170 ಚಿತ್ರದ ಸೆಟ್ ನಡೆದಿರುವ ಘಟನೆನಾ? ಎಂಬುದರ ಬಗ್ಗೆ ನಟಿ ರಿವೀಲ್ ಮಾಡಿಲ್ಲ. ಆದರೆ ಈ ಸಿನಿಮಾದ ಸೆಟ್‌ನಲ್ಲೇ ನಡೆದ ಘಟನೆ ಎನ್ನಲಾಗುತ್ತಿದೆ. ಮೊದಲು ತಮ್ಮ ಕೈಮೇಲೆ ಆಗಿರುವ ಗಾಯದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಾನು ತೋಳದೊಂದಿಗೆ ಜಗಳ ಮಾಡಿಕೊಂಡಂತೆ ಕಾಣುತ್ತಿದೆ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮೂಲಗಳ ಪ್ರಕಾರ, ತಲೈವರ್ 170 ಸಿನಿಮಾ ಚಿತ್ರೀಕರಣ ವೇಳೆ ನಟಿಗೆ ಕೈಗೆ ಸಣ್ಣ ಪುಟ್ಟ ಏಟಾಗಿದೆ. ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಿತಿಕಾ ಸಿಂಗ್ ಇದೀಗ ವಿಶ್ರಾಂತಿ ಪಡೆಯುತ್ತಿದ್ದಾರೆ.