ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಹುಟ್ಟುಹಬ್ಬದ ವಿಶೇಷವಾಗಿ ಡಿಸೆಂಬರ್ 12ರಂದು ಪಡೆಯಪ್ಪ (Padayappa) ಸಿನಿಮಾ ರಿ-ರಿಲೀಸ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ರಜನಿಕಾಂತ್ ಪಡೆಯಪ್ಪ ಪಾರ್ಟ್-2 ಸಿನಿಮಾ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. 1999ರಲ್ಲಿ ತೆರೆಕಂಡ ಪಡೆಯಪ್ಪ ಭಾರತೀಯ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆದ ಸಿನಿಮಾ. ಈ ಸಿನಿಮಾದ ಕಥೆಯನ್ನ ಬರೆಯುವುದರ ಜೊತೆಗೆ ನಟನೆ ಮಾಡಿ, ನಿರ್ಮಾಣ ಕೂಡಾ ಮಾಡಿದ್ದರು ನಟ ರಜನಿಕಾಂತ್.
ಈ ಕಾರಣದಿಂದ ಪಡೆಯಪ್ಪ ಸಿನಿಮಾದ ಹಕ್ಕುಗಳನ್ನು ಯಾರಿಗೂ ಕೊಟ್ಟಿಲ್ಲ. ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳು ಈಗಲೂ ರಜನಿಕಾಂತ್ ಅವರ ಬಳಿಯೇ ಇವೆ. ಸನ್ ಟಿವಿಗೆ ಕೇವಲ ಎರಡು ಬಾರಿ ಮಾತ್ರ ಪ್ರಸಾರಕ್ಕೆ ಅವಕಾಶ ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಈಗ 25 ವರ್ಷಗಳ ಬಳಿಕ ಈ ಸಿನಿಮಾವನ್ನು ಮರುಬಿಡುಗಡೆ ಮಾಡುತ್ತಿದ್ದಾರೆ ತಲೈವ. ಇನ್ನು ಈ ಸಿನಿಮಾದಲ್ಲಿ ಮೊದಲು ಐಶ್ವರ್ಯ ರೈ ಅವರನ್ನು ವಿಲನ್ ಪಾತ್ರದಲ್ಲಿ ನಟಿಸುವುದಕ್ಕೆ ಅಪ್ರೋಚ್ ಮಾಡಲಾಗಿತ್ತಂತೆ. ಅವರು ಒಪ್ಪದೇ ಇದ್ದಾಗ ರಮ್ಯಾಕೃಷ್ಣ (Ramya Krishna) ಅವರನ್ನ ಆ ಪಾತ್ರಕ್ಕಾಗಿ ಆಯ್ಕೆ ಮಾಡಲಾಯ್ತು ಎಂದಿದ್ದಾರೆ. ಇದನ್ನೂ ಓದಿ: ನಟಿ ಜಯಶ್ರೀಯಾದ ತಮನ್ನಾ ಭಾಟಿಯಾ

