ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 75ನೇ ವಸಂತಕ್ಕೆ ಕಾಲಿಟ್ಟಿರುವ ರಜನಿಕಾಂತ್ ಸದ್ಯ ಜೈಲರ್- 2( Jailer 2) ಸಿನಿಮಾದ ಶೂಟಿಂಗ್‌ನಲ್ಲಿ ಇದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ತಲೈವಾ ಹುಟ್ಟುಹಬ್ಬವನ್ನು (Birth Day) ಇಡೀ ಚಿತ್ರತಂಡ ಆಚರಿಸಿದೆ.
ಸೆಟ್‌ನಲ್ಲಿಯೇ ಕೇಕ್(Cake) ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಸೂಪರ್‌ಸ್ಟಾರ್. ಈಗಾಗಲೇ 170ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ರಜನಿಕಾಂತ್ ಜೈಲರ್ ಚಿತ್ರದ ಸಿಕ್ವೇಲ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಸನ್ ಪಿಕ್ಚರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ.
Happy Birthday Superstar @rajinikanth! 🎉 From the sets of #Jailer2 💥#HBDSuperstarRajinikanth #HappyBirthdaySuperstarRajinikanth pic.twitter.com/Y46tUK8H7u
— Sun Pictures (@sunpictures) December 12, 2025
ರಜನಿಕಾಂತ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವರ್ಷವಾಗಿದೆ. ಅಭಿಮಾನಿಗಳ ಸಂಭ್ರಮ ಕೂಡಾ ದುಪ್ಪಟ್ಟಾಗಿದೆ. 1975ರಲ್ಲಿ ತೆರೆಕಂಡ `ಅಪೂರ್ವ ರಾಗಂಗಳ್’ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಜನಿಕಾಂತ್ ಬಹುಭಾಷೆಯಲ್ಲಿ ಮಿಂಚುತ್ತಿದ್ದಾರೆ.
ರಜನಿಕಾಂತ್ ಭಾರತೀಯ ಚಿತ್ರರಂಗದಲ್ಲೇ ವಿಶಿಷ್ಟ ಹಾಗೂ ವಿಶೇಷ ಅಭಿನಯದಿಂದ ತಮ್ಮದೇ ಛಾಪು ಮೂಡಿಸಿದ್ದಾರೆ. ತಮಿಳು ಚಿತ್ರರಂಗದಿಂದ ಬಣ್ಣದ ಬದುಕಿಗೆ ಕಾಲಿಟ್ಟ ರಜನಿಕಾಂತ್ ಕನ್ನಡ, ತೆಲುಗು, ಹಿಂದಿ ಮರಾಠಿ, ಬೆಂಗಾಲಿ, ಮಲಯಾಳಂ ಸಿನಿಮಾರಂಗದಲ್ಲಿ ಖ್ಯಾತಿ ಹೊಂದಿದ್ದಾರೆ. ತಮ್ಮ ಹುಟ್ಟುಹಬ್ಬದ ಪ್ರಯುಕ್ತ ತಾವೇ ನಟಿಸಿ, ನಿರ್ಮಿಸಿದ ಪಡೆಯಪ್ಪ ಸಿನಿಮಾ ರಿ-ರಿಲೀಸ್ ಆಗಿದೆ. ರಜನಿಕಾಂತ್ ತಮ್ಮ ಹುಟ್ಟುಹಬ್ಬವನ್ನ ಮತ್ತಷ್ಟು ವಿಶೇಷಗೊಳಿಸಿದ್ದಾರೆ.

