ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಒಂದು ವಾರಕ್ಕೂ ಮೊದಲೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕುಟುಂಬದ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ರಜನಿಕಾಂತ್ ಅವರ ಫೋಟೋಗಳು ರಿವೀಲ್ ಆಗಿವೆ.
ರಜನಿಕಾಂತ್ ಬರ್ತ್ ಡೇ ಆಚರಣೆಗೆ ಪ್ಲಾನ್ ಮಾಡಿಕೊಂಡಿದ್ದ ಅಭಿಮಾನಿಗಳು ಫೋಟೋ ನೋಡಿ ಶಾಕ್ ಆಗಿದ್ದಾರೆ. ಡಿಸೆಂಬರ್ 12ರಂದು ಹುಟ್ಟುಹಬ್ಬವನ್ನ ಆಚರಿಸಲ್ವಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಸದ್ಯ ಈ ಪ್ರಶ್ನೆಗೆ ಉತ್ತರವನ್ನು ರಜನಿಕಾಂತ್ ಆಪ್ತರು ನೀಡಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ರಜನಿಕಾಂತ್ ಡಿಸೆಂಬರ್ 12ರಂದು ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲಿದ್ದಾರೆ.
ಯಾಕಿಷ್ಟು ಬೇಗ?: ಪಂಚಾಂಗದ ಪ್ರಕಾರ ರಜನಿಕಾಂತ್ ಅವರ ಹುಟ್ಟುಹಬ್ಬವನ್ನು ಕುಟುಂಬಸ್ಥರು ವಿಶೇಷ ಪೂಜೆ ಮೂಲಕ ಆಚರಣೆ ಮಾಡುತ್ತಾರೆ. ಪಂಚಾಂಗದಂತೆ ಡಿಸೆಂಬರ್ 2ರಂದು ಹುಟ್ಟುಹಬ್ಬ ಆಚರಿಸಲಾಗಿದೆ. ಪ್ರತಿವರ್ಷವೂ ರಜನಿಕಾಂತ್ ಖಾಸಗಿಯಾಗಿ ಪಂಚಾಂಗದ ಪ್ರಕಾರ ಬರ್ತ್ ಡೇ ಪೂಜೆ ಸಲ್ಲಿಸುತ್ತಾರೆ.
ಡಿಸೆಂಬರ್ 12ರಂದು ಅಭಿಮಾನಿಗಳು ರಜನಿಕಾಂತ್ ಅವರ ಬರ್ತ್ ಡೇಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಡಿಸೆಂಬರ್ 12ರಂದು ಅಭಿಮಾನಿಗಳು ಹುಟ್ಟುಹಬ್ಬವನ್ನು ಸಿಹಿ ವಿನಿಮಯ ಮಾಡಿಕೊಂಡು ಹಬ್ಬದಂತೆ ಆಚರಣೆ ಮಾಡುತ್ತಾರೆ. ಆದರೆ ರಜನಿಕಾಂತ್ 10 ದಿನಗಳ ಮುಂಚೆಯೇ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬರ್ತ್ ಡೇ ಆಚರಣೆ ಮಾಡಿಕೊಂಡಿದ್ದಾರೆ.