ತಮಿಳು ಚಿತ್ರದ ರಂಗದ ಸೂಪರ್ ಸ್ಟಾರ್ ರಜನಿಕಾಂತ್ ಇಂದು ತಮಿಳು ನಾಡಿನ (Tamil Nadu) ಸುಪ್ರಸಿದ್ಧ ಅಣ್ಣಾಮಲೈಯಾರ್ (Annamalaiyar) ದೇವಸ್ಥಾನಕ್ಕೆ ಭೇಟಿ ನೀಡಿದರು. ಸದ್ಯ ರಜನಿ ಲಾಲ್ ಸಲಾಮ್ (Lal Salaam)ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣ ನಡುವೆ ಕೊಂಚ ಸಮಯ ಮಾಡಿಕೊಂಡು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಯಾವುದೇ ಭಾಗದಲ್ಲಿ ಚಿತ್ರೀಕರಣ ಆಗುತ್ತಿರಲಿ, ಆ ಭಾಗದಲ್ಲಿರುವ ಸುಪ್ರಸಿದ್ಧ ದೇವಸ್ಥಾನಗಳಿಗೆ (Temple) ಭೇಟಿ ನೀಡಿ ಪೂಜೆ ಸಲ್ಲಿಸುವುದು ರಜನಿ ವಾಡಿಕೆ. ಅದರಂತೆ ಲಾಲ್ ಸಲಾಮ್ ಚಿತ್ರೀಕರಣ ಸಮಯದಲ್ಲೇ ಪೂಜೆ ಸಲ್ಲಿಸಿ ಸ್ವಲ್ಪ ಹೊತ್ತು ದೇವಸ್ಥಾನದಲ್ಲೇ ಕಳೆದಿದ್ದಾರೆ. ರಜನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದ್ದಂತೆ ಅವರ ಅಭಿಮಾನಿಗಳು ಜಾತ್ರೆ ರೀತಿಯಲ್ಲಿ ಸೇರಿದ್ದರು. ಇದನ್ನೂ ಓದಿ:ಕೋಟಿ ಕೊಟ್ರೂ ಸಿನಿಮಾದಲ್ಲಿ ಕಿಸ್ ಮಾಡಲ್ಲ- ಪ್ರಿಯಾಮಣಿ ಖಡಕ್ ಉತ್ತರ
ತೀರಾ ಸರಳ ಉಡುಪಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ರಜನಿ, ಟೀ ಶರ್ಟ್ ಮತ್ತು ಬಿಳಿ ಪಂಚಿಯಲ್ಲಿ ಇದ್ದರು. ರಜನಿಯನ್ನು ಸರಳವಾಗಿ ನೋಡಿದ ಅಭಿಮಾನಿಗಳು ಘೋಷಣೆ ಕೂಗಿ ಶುಭ ಹಾರೈಸಿದರು. ಅಲ್ಲದೇ ಸೆಲ್ಫಿಗಾಗಿ ಮುಗಿ ಬಿದ್ದರು. ಅವರನ್ನು ದೇವಸ್ಥಾನದಿಂದ ಕಾರ್ ಹತ್ತಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಸದ್ಯ ರಜನಿ (Rajinikanth) ಜೈಲರ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಜೊತೆಗೆ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಲಾಲ್ ಸಲಾಮ್ ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ಮಾಡುತ್ತಿದ್ದಾರೆ. ಸದ್ಯ ಲಾಲ್ ಸಲಾಮ್ ಸಿನಿಮಾದ ಶೂಟಿಂಗ್ ನಡೆದಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]