ತುಮಕೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ (R Rajendra) ಕೊಲೆಗೆ ಸಂಚು ರೂಪಿಸಿದ ಪ್ರಕರಣದ ಪ್ರಮುಖ ಆರೋಪಿ, ರೌಡಿಶೀಟರ್ ಸೋಮ, ಎ-3 ಅಮಿತ್ ಬುಧವಾರ ಕ್ಯಾತ್ಸಂದ್ರ (Kyathasandra) ಠಾಣೆ ಪೊಲೀಸರಿಗೆ ಶರಣಾಗಿದ್ದಾರೆ.
ಕೊಲೆ ಸಂಚಿನ ವಿಷಯ ಹೊರಬಂದ ನಂತರ ಪ್ರಮುಖ ಆರೋಪಿ ಸೋಮ ತಲೆ ಮರೆಸಿಕೊಂಡಿದ್ದ. ಪ್ರಕರಣದ ತನಿಖೆಗೆ ರಚಿಸಿದ ವಿಶೇಷ ತಂಡ ಆರೋಪಿಗಳಾದ ಭರತ್, ಯತೀಶ್, ಪುಷ್ಪಾ ಮತ್ತು ಯಶೋದ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿತ್ತು. ಇದೀಗ ಸೋಮ ಹಾಗೂ ಅಮಿತ್ ಕ್ಯಾತ್ಸಂದ್ರ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಕೋವಿಡ್ ಮಾದರಿ ನಿಗೂಢ ವೈರಸ್!
ಪ್ರಮುಖ ಆರೋಪಿ ಸೋಮನಿಗೆ 5 ಲಕ್ಷ ರೂ. ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಮನು ಎಂಬವನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ನಿಮ್ಮ ವಕ್ಫ್‌ಗೆ ಒಬ್ಬ ಮುಸ್ಲಿಮೇತರರೂ ಬರುವುದಿಲ್ಲ – ಅಮಿತ್ ಶಾ
ನನ್ನನ್ನು ಕೊಲೆ ಮಾಡಲು 70 ಲಕ್ಷ ಹಣಕ್ಕೆ ಸುಪಾರಿ ನೀಡಲಾಗಿದೆ. ಮುಂಗಡವಾಗಿ 5 ಲಕ್ಷ ರೂ. ಕೊಡಲಾಗಿದೆ. ಈ ಬಗ್ಗೆ ಆಡಿಯೊ ಲಭ್ಯವಾಗಿದ್ದು, ಪರಿಶೀಲಿಸಿ ತನಿಖೆ ನಡೆಸಬೇಕು ಎಂದು ಕೋರಿ ಆರ್.ರಾಜೇಂದ್ರ ಮಾರ್ಚ್ 29ರಂದು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದನ್ನೂ ಓದಿ: ನ್ಯಾಯಾಧೀಶರ ಮನೆಯಲ್ಲಿಯೇ 7 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ