ಇಸ್ಲಾಮಾಬಾದ್: ಹಿಂದೂ (Hindu) ವ್ಯಕ್ತಿಯೊಬ್ಬರು ಪಾಕಿಸ್ತಾನದ (Pakistan) ಪೊಲೀಸ್ ಅಧಿಕಾರಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬಾಡಿನ್ ಗ್ರಾಮಾಂತರ ಮತ್ತು ಹಿಂದುಳಿದ ಜಿಲ್ಲೆಯವರಾದ ರಾಜೇಂದರ್ ಮೇಘವಾರ್ (Rajender Meghwar) ಅವರು ದೇಶದ ಮೊದಲ ಹಿಂದೂ ಪೊಲೀಸ್ (Hindu Police) ಅಧಿಕಾರಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪ್ರಧಾನವಾಗಿ ಮುಸ್ಲಿಂ ರಾಷ್ಟ್ರದಲ್ಲಿ ಅಡೆತಡೆಗಳನ್ನು ಮುರಿದು, ಮೇಘವರ್ ಅವರನ್ನು ಪಾಕಿಸ್ತಾನದ ಪೊಲೀಸ್ ಸೇವೆ (ಪಿಎಸ್‌ಪಿ) ಅಡಿಯಲ್ಲಿ ಫೈಸಲಾಬಾದ್‌ನಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್‌ಪಿ) ನೇಮಿಸಲಾಗಿದೆ. ಇದನ್ನೂ ಓದಿ: ಬಂಡುಕೋರರು ರಾಜಧಾನಿ ಡಮಾಸ್ಕಸ್ ಪ್ರವೇಶಿಸುತ್ತಿದ್ದಂತೆ ಸಿರಿಯಾ ತೊರೆದ ಅಧ್ಯಕ್ಷ ಅಸ್ಸಾದ್
ಪಾಕಿಸ್ತಾನದ ಪ್ರತಿಷ್ಠಿತ ಸೆಂಟ್ರಲ್ ಸುಪೀರಿಯರ್ ಸರ್ವೀಸಸ್ (CSS) ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ. ಇದು ಉನ್ನತ ಮಟ್ಟದ ಆಡಳಿತ ಮತ್ತು ಸರ್ಕಾರಿ ಪಾತ್ರಗಳಿಗೆ ಬಾಗಿಲು ತೆರೆಯುವ ಅತ್ಯಂತ ಸ್ಪರ್ಧಾತ್ಮಕ ನಾಗರಿಕ ಸೇವಾ ಪರೀಕ್ಷೆಯಾಗಿದೆ.
ಪಾಕಿಸ್ತಾನ ಹಿಂದೂ ಮಂದಿರ ನಿರ್ವಹಣಾ ಸಮಿತಿಯ ಕ್ರಿಶನ್ ಶರ್ಮಾ, ಮೇಘವಾರ್ ಅವರ ಯಶಸ್ಸು ವೈಯಕ್ತಿಕ ಮೈಲಿಗಲ್ಲು ಮಾತ್ರವಲ್ಲದೆ ಪಾಕಿಸ್ತಾನದ ಹಿಂದೂ ಅಲ್ಪಸಂಖ್ಯಾತರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಇಸ್ಕಾನ್ ಮಂದಿರಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು – ದೇವರ ಮೂರ್ತಿಗೆ ಹಾನಿ
ಪೊಲೀಸ್ ಪಡೆಗಳಲ್ಲಿ ಎಎಸ್ಪಿ ರಾಜೇಂದರ್ ಮೇಘವಾರ್ ಅವರ ಪಾತ್ರವು ಸಮುದಾಯದ ಸಮಸ್ಯೆಗಳನ್ನು ನೇರವಾಗಿ ಪರಿಹರಿಸಲು ಅನುವು ಮಾಡಿಕೊಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.