– ತಾಲೂಕು ಬಿಟ್ಟು ಒಡಿಸ್ತೀನಿ ಅಂತಾದನೇ ಊರೂರು ಅಲೆದಾಟ
ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿರೋ ಪುಡಾರಿ ರಾಜೀವ್ ಗೌಡ (Rajeev Gowda) ಬಂಧನ ಭೀತಿಯಿಂದ ಈಗ ಊರೂರು ಅಲೆಯುವಂತಾಗಿದೆ.
ಕಚೇರಿಗೆ ಬೆಂಕಿ ಹಾಕಿಸ್ತೀನಿ, ಚಪ್ಪಯಲ್ಲಿ ಹೊಡೆಸ್ತೀನಿ, ತಾಲೂಕು ಬಿಟ್ಟು ಒಡಿಸ್ತೀನಿ ಅಂತ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ್ದ ರಾಜೀವ್ ಗೌಡನೇ ಈಗ ಊರು ಬಿಟ್ಟು ದಿಕ್ಕಾಪಾಲಾಗಿ ಓಡುವಂತಾಗಿದೆ. ಆದ್ರೆ 12 ದಿನ ಕಳೆದ್ರೂ ಪುಡಾರಿ ವೀರನನ್ನ ಬಂಧಿಸೋಕೆ ಚಿಕ್ಕಬಳ್ಳಾಪುರ ಪೊಲೀಸರು (Chikkaballapura Police) ಫೇಲ್ ಆಗಿದ್ದು, ರಾಜೀವ್ ಗೌಡ ಬಂಧನ ಯಾವಾಗ ಅಂತ ಪೊಲೀಸರ ಕಾರ್ಯವೈಖರಿಗೆ ಜನ ಛೀಮಾರಿ ಹಾಕುವಂತಾಗಿದೆ. ಇದನ್ನೂ ಓದಿ: ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ ಕೇಸ್; ಆರೋಪಿ ರಾಜೀವ್ ಗೌಡ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಅನಧಿಕೃತ ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ (Shidlaghatta) ನಗರಸಭೆ ಪೌರಾಯುಕ್ತೆಗೆ ಕರೆ ಮಾಡಿ ಧಮ್ಕಿ ಹಾಕಿದ್ದ ಪುಡಾರಿ ವೀರ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡನೇ ಈಗ ರಾಜ್ಯ ಬಿಟ್ಟು ಪರಾರಿಯಾಗಿದ್ದಾನೆ. ಒಂದಲ್ಲ ಎರಡಲ್ಲ ಅಂತ ಬರೋಬ್ಬರಿ 12 ದಿನಗಳಿಂದ ರಾಜೀವ್ ಗೌಡನೇ ಬಂಧನದ ಭೀತಿಯಂದ ಊರೂರು ಅಲೆಯುವಂತಾಗಿದೆ. ಜಾಮೀನು ಪಡೆದು ಬಂದು ಅಬ್ಬರಿಸೋಣ ಅಂದುಕೊಂಡಿದ್ದ ರಾಜೀವ್ ಗೌಡನಿಗೆ ನ್ಯಾಯಾಲಯ ಜಾಮೀನು ಅರ್ಜಿ ವಜಾ ಮಾಡಿ ಮುಖಕ್ಕೆ ಮಂಗಳಾರತಿ ಮಾಡಿದೆ.
ಧಮ್ಕಿ ವೀರನಿಗೆ ಶಾಕ್ ಮೇಲೆ ಶಾಕ್
ಇನ್ನೂ ಕೆಪಿಸಿಸಿ ಸಹ ಪಕ್ಷದಿಂದ ಅಮಾನತು ಮಾಡಿ ಶಾಕ್ ಕೊಟ್ಟಿದೆ. ಮತ್ತೊಂದೆಡೆ ಹೈಕೋರ್ಟ್‍ನಲ್ಲೂ ಎಫ್‌ಐಆರ್ ರದ್ದು ಕೋರಿ ಹಾಕಿದ್ದ ಅರ್ಜಿ ಸಹ ವಜಾಗೊಂಡಿದೆ. ಹೀಗೆ ಶಾಕ್ ಮೇಲೆ ಶಾಕ್‌ಗೆ ರಾಜೀವ್ ಗೌಡ ಇಂಗು ತಿಂದ ಮಂಗನಂತಾಗಿರೋ ರಾಜೀವ್ ಗೌಡ ಈಗ ರಾಜ್ಯವೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ರಾಜೀವ್ ಗೌಡ ನಟೋರಿಯಸ್ ಕ್ರಿಮಿನಲ್, 16 ಕೇಸ್ ಇದೆ – ಶೀಘ್ರ ಬಂಧನ: ಎಸ್ಪಿ
ಮಂಗಳೂರಿನಿಂದ ಪರಾರಿ
ಒಂದಲ್ಲ ಎರಡಲ್ಲ ಅಂತ 12 ದಿನಗಳಿಂದಲೂ ಹತ್ತಾರು ತಂಡಗಳನ್ನ ಮಾಡಿಕೊಂಡು ಚಿಕ್ಕಬಳ್ಳಾಪುರ ಪೊಲೀಸರು ಹಗಲು ರಾತ್ರಿ ಅನ್ನದೇ ನಿದ್ದೆ, ಊಟ ಬಿಟ್ಟು ರಾಜೀವ್ ಗೌಡನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದ್ರೆ ರಾಜೀವ್ ಗೌಡ ಮಾತ್ರ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಲೇ ಇದ್ದಾನೆ. ಕಳೆದ ಮೂರು ದಿನಗಳಿಂದಲೂ ಮಂಗಳೂರಿನಲ್ಲೇ ಇದ್ದ ಮಾಹಿತಿ ಮೇರೆಗೆ ಮಂಗಳೂರಿಗೆ ಪೊಲೀಸರು ಹೋಗುವಷ್ಟರಲ್ಲಿ ಮಂಗಳೂರಿನ ರೈಲ್ವೆ ಸ್ಟೇಷನ್ ನಲ್ಲಿ ರಾಜೀವ್ ಗೌಡ ಕಾರು ಬಿಟ್ಟು ರಾಜ್ಯ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಹೀಗಾಗಿ ಮಂಗಳೂರಿನ ರೈಲ್ವೈ ನಿಲ್ದಾಣ ಸೇರಿದಂತೆ ಹೋಟೆಲ್ ರೆಸಾರ್ಟ್, ಕಾರು ಓಡಾಟ ನಡೆಸಿರುವ ಕಡೆ ಸಿಸಿಟಿವಿಗಳ ಪರಿಶೀಲನೆಯಲ್ಲಿ ಪೊಲೀಸರು ನಿರತರಾಗಿದ್ದಾರೆ. ಇದನ್ನೂ ಓದಿ: ನಗರಸಭೆ ಪೌರಾಯುಕ್ತೆಗೆ ಬೆದರಿಕೆ – ರಾಜೀವ್ ಗೌಡ ನಿವಾಸದ ಮೇಲೆ ಪೊಲೀಸರ ದಾಳಿ



