‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ದೊಡ್ಮನೆ ಆಟ ಶುರುವಾದ ದಿನದಿಂದ ಒಂದಲ್ಲಾ ಒಂದು ಕಿರಿಕ್‌ನಿಂದಲೇ ಹೈಲೆಟ್ ಆಗುತ್ತಲೇ ಇದೆ. ಈಗ ಟಾಸ್ಕ್‌ವೊಂದರಲ್ಲಿ ರಜತ್ (Rajath) ಮತ್ತು ತ್ರಿವಿಕ್ರಮ್ (Trivikram) ನಡುವೆ ಕಿರಿಕ್ ಆಗಿದೆ. ಇದರಿಂದ ಆಟವೇ ರದ್ದಾಗುವ ಹಂತಕ್ಕೆ ಬಂದಿದೆ.
ಇತ್ತೀಚೆಗೆ ಬಿಗ್ ಬಾಸ್ ಕೊಟ್ಟ ಟಾಸ್ಕ್‌ಗಳು ಸಾಕಷ್ಟು ಅರ್ಧಕ್ಕೆ ನಿಂತು ಹೋಗಿದ್ದು ಇದೆ. ಇದೀಗ ಟಾಸ್ಕ್ ಆಡುತ್ತಿದ್ದಾಗ ಉಸ್ತುವಾರಿಗಳು ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಇಬ್ಬರ ನಡೆಗೆ ಮನೆ ಮಂದಿ ಗರಂ ಆಗಿದ್ದಾರೆ. ಇದನ್ನೂ ಓದಿ:ಯಾರನ್ನೂ ದ್ವೇಷಿಸಲಿಲ್ಲ – ಎಸ್.ಎಂ ಕೃಷ್ಣ ಅಗಲಿಕೆಯ ಕುರಿತು ನೋವು ಹಂಚಿಕೊಂಡ ನಟಿ ರಮ್ಯಾ
View this post on Instagram
ಒಂದು ತಂಡಕ್ಕೆ ರಜತ್ ಉಸ್ತುವಾರಿಯಾದರೇ, ಮತ್ತೊಂದು ತಂಡದಲ್ಲಿ ತ್ರಿವಿಕ್ರಮ್ ಉಸ್ತುವಾರಿಯಾಗಿದ್ದಾರೆ. ಡ್ರಮ್ ಅನ್ನು ಉರುಳಿಸುತ್ತಾ ಚೀಲಗಳನ್ನು ಸಂಗ್ರಹಿಸಿ, ಬಾರದ ವಸ್ತುವನ್ನು ಮೇಲೆ ಏರಿಸುವ ತಂಡ ಗೆಲ್ಲುತ್ತದೆ. ಇದೇ ಟಾಸ್ಕ್ ಆಡುತ್ತಿದ್ದಾಗ ತ್ರಿವಿಕ್ರಮ್ ತಂಡದವರು ಡ್ರಮ್‌ನಿಂದ ಆಚೆ ಬರುತ್ತಾರೆ. ಆಗ ಉಸ್ತುವಾರಿ ರಜತ್ ಟಾಸ್ಕ್ ಆಡುತ್ತಿದ್ದವರನ್ನು ತಡೆಯುತ್ತಾರೆ. ಹೀಗಾಗಿ ಇದೇ ವಿಚಾರಕ್ಕೆ ಇಬ್ಬರು ಉಸ್ತುವಾರಿಗಳ ಮಧ್ಯೆ ಗಲಾಟೆ ನಡೆದಿದೆ. ಆದರೆ ಈ ಬಾರಿಯೂ ಕೂಡ ಬಿಗ್ ಬಾಸ್ ಕೊಟ್ಟ ಟಾಸ್ಕ್ ರದ್ದಾಗುತ್ತಾ? ಎಂಬ ಕುತೂಹಲದಲ್ಲಿದ್ದಾರೆ ವೀಕ್ಷಕರು.
ಅಂದಹಾಗೆ, ಈ ಬಾರಿ ಮನೆಯಿಂದ ಹೊರ ಹೋಗಲು 8 ಮಂದಿ ನಾಮಿನೇಟ್ ಆಗಿದ್ದಾರೆ. ಮೋಕ್ಷಿತಾ, ಭವ್ಯಾ, ಧನರಾಜ್, ಚೈತ್ರಾ, ತ್ರಿವಿಕ್ರಮ್, ಶಿಶಿರ್, ರಜತ್, ಹನುಮಂತ ನಾಮಿನೇಟ್ ಹಾಟ್ ಸೀಟ್‌ನಲ್ಲಿದ್ದಾರೆ. ಕಳೆದ ಎಲಿಮಿನೇಷನ್ ನಡೆಯದ ಹಿನ್ನೆಲೆ ಈ ಬಾರಿ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಎಲ್ಲದ್ದಕ್ಕೂ ವಾರಾಂತ್ಯ ಉತ್ತರ ಸಿಗಲಿದೆ.