’ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಗ್ರ‍್ಯಾಂಡ್ ಫಿನಾಲೆ ಇನ್ನೇನು ಸಮೀಪಿಸುತ್ತಿದೆ. ಮನೆಯ ಸ್ಪರ್ಧಿಗಳು ಫುಲ್ ಅಲರ್ಟ್ ಆಗಿ ಆಡುತ್ತಿದ್ದಾರೆ. ಇಂದಿನ ಪ್ರೋಮೋ ರಿಲೀಸ್ ಆಗಿದ್ದು, ಚೈತ್ರಾ ಹಾಗೂ ಕ್ಯಾಪ್ಟನ್ ರಜತ್ (Rajath) ಮಧ್ಯೆ ಸಖತ್ ಟಾಕ್ ವಾರ್ ನಡೆದಿದೆ. ಈ ವೇಳೆ, ಚೈತ್ರಾಗೆ ಸುಳ್ಳಿ ಎಂದು ರಜತ್ ಗುಡುಗಿದ್ದಾರೆ.
ಬಿಗ್ ಬಾಸ್ ಕೊಟ್ಟಿರುವ ಟಾಸ್ಕ್‌ನಲ್ಲಿ ರಜತ್ ಅವರು ಖಳನಾಯಕ ಆಗಿ ಆಡುತ್ತಿದ್ದಾರೆ. ಫಿನಾಲೆಗೆ ತಲುಪಲು ಅರ್ಹತೆ ಇಲ್ಲದ 5 ಸ್ಪರ್ಧಿಗಳಿಗೆ ಟಿಕೆಟ್ ಟು ಹೋಮ್ ಫಲಕ ಕೊರಳಿಗೆ ಹಾಕಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದ್ದಾರೆ. ಇದಕ್ಕೆ ಹನುಮಂತು, ಚೈತ್ರಾ, ಗೌತಮಿ, ಭವ್ಯಾ ಹಾಗೂ ಮೋಕ್ಷಿತಾ ಅವರ ಕೊರಳಿಗೆ ರಜತ್ ಬೋರ್ಡ್ ಹಾಕಿದ್ದಾರೆ. ಅಂದರೆ, ಈ ಐವರಲ್ಲಿ ಈ ವಾರ ಒಬ್ಬರು ಹೊರ ಬರುವುದು ಪಕ್ಕಾ ಆಗಿದೆ.
View this post on Instagram
ಇನ್ನು ಈ ವೇಳೆ ರಜತ್ ಹಾಗೂ ಚೈತ್ರಾ ಮಧ್ಯೆ ಮಾತಿನ ಸಮರ ನಡೆದಿದ್ದು ಎಲ್ಲರ ಗಮನ ಸೆಳೆದಿದೆ. ರಜತ್ ಹಾಗೂ ಚೈತ್ರಾ ಇಬ್ಬರು ಪರಸ್ಪರ ಬೈದಾಡಿಕೊಳ್ಳುವಾಗ ಉಳಿದ ಸ್ಪರ್ಧಿಗಳು ಕುಳಿತು ನಕ್ಕು ಎಂಜಾಯ್ ಮಾಡಿದ್ದಾರೆ. ಚೈತ್ರಾ ಟಾಸ್ಕ್‌ನಲ್ಲಿ ಜೀರೋ ನೀವು ಮಾತನಾಡುತ್ತಲೇ ಮನೆಗೆ ಹೋಗಿ, ಇರೋರು ಆಟ ಆಡಿಕೊಂಡು ಗೆಲ್ಲಲ್ಲಿ ಎಂದಿದ್ದಾರೆ ರಜತ್. ಅದಕ್ಕೆ ನೀವು ಮನೆಗೆ ಮೊದಲನೇ ದಿನ ಬಂದಿದ್ರೆ ಲಗೇಜ್ ಹಿಡಿಕೊಂಡು ಮನೆಗೆ ಹೋಗುತ್ತಿದ್ರಿ. ಆದರೆ 50 ದಿನ ಆದ್ಮೇಲೆ ಬಂದಿದ್ದೀರಿ. ಅದಕ್ಕೆ ಅದೃಷ್ಟ ಮಾಡಿದ್ದೀರಾ ಎಂದು ರಜತ್‌ಗೆ ಚೈತ್ರಾ ಕೌಂಟರ್ ಕೊಟ್ಟಿದ್ದಾರೆ.
50 ದಿನ ಆದ್ಮೇಲೆ ಬಂದಿರೋದು ನಿಮ್ಮ ಅದೃಷ್ಟ, ಮೊದಲೇ ಬಂದಿದ್ರೆ 4ನೇ ವಾರಕ್ಕೆ ಕಳುಹಿಸಿ ಬಿಡುತ್ತಿದ್ದೆ ಎಂದು ತಿರುಗೇಟು ಕೊಟ್ಟಿದ್ದಾರೆ ರಜತ್. ನೀವು ಟಾಸ್ಕ್ ಆಡೋರು ಮಾತ್ರ ಬರಬೇಕು ಅಂದೆಲ್ಲಾ ಬೇಡ ಎಂದ ಚೈತ್ರಾಗೆ ನಾನು ಯಾವಾಗ ಹಾಗೇ ಅಂದೆ. ಸುಳ್ಳು ಹೇಳಬೇಡ ಹೇ ಸುಳ್ಳಿ ನಿಜ ಮಾತನಾಡು ಪೆಟ್ಟು ಕೊಡುತ್ತೇನೆ ಅಂತ ರಜತ್ ಗರಂ ಆಗಿದ್ದಾರೆ.