ಜೈಪುರ: ಕಳೆದ ಕೆಲ ದಿನಗಳಿಂದ ಸಚಿನ್-ಸೀಮಾ, ಅಂಜು-ನಸ್ರುಲ್ಲಾ ಜೋಡಿಗಳು ಭಾರತ-ಪಾಕಿಸ್ತಾನದ (India-Pakistan) ಗಡಿಯಾಚೆಗಿನ ಸಂಬಂಧಕ್ಕಾಗಿ ಭಾರೀ ಸುದ್ದಿಯಾಗಿದ್ದಾರೆ. ಇದೀಗ ಭಾರತದ ವ್ಯಕ್ತಿಯೊಬ್ಬ ಪಾಕಿಸ್ತಾನದ ವಧುವನ್ನು ವರಿಸಿರುವ ಘಟನೆ ಸದ್ದುಮಾಡುತ್ತಿದೆ. ವಿಶೇಷವೇನೆಂದರೆ ಜೋಡಿ ಮದುವೆಯಾಗಿರುವುದು ಆನ್‌ಲೈನ್‌ನಲ್ಲಿ.
ರಾಜಸ್ಥಾನದ (Rajasthan) ಜೋಧ್‌ಪುರದ (Jodhpur) ನಿವಾಸಿ ಅರ್ಬಾನ್ ಪಾಕಿಸ್ತಾನದ ಅಮೀನಾಳನ್ನು ಮದುವೆಯಾಗಿದ್ದಾನೆ. ವಧುವಿಗೆ ಮದುವೆಗಾಗಿ ಭಾರತಕ್ಕೆ ಬರಲು ವೀಸಾ ಸಿಗದ ಹಿನ್ನೆಲೆ ಆನ್‌ಲೈನ್ ವೀಡಿಯೋ ಕಾನ್ಫರೆನ್ಸ್ ಮೂಲಕವೇ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ವರದಿಗಳ ಪ್ರಕಾರ ಮದುವೆ ಕಾರ್ಯಕ್ರಮ ಎಲ್ಲಾ ಬುಧವಾರ ನೆರವೇರಿದೆ. ಎರಡೂ ಕಡೆಯ ಕುಟುಂಬದ ಸದಸ್ಯರು ವೀಡಿಯೋ ಕಾನ್ಫರೆನ್ಸ್ ಮೂಲಕವೇ ಶುಭ ಸಮಾರಂಭದಲ್ಲಿ ಭಾಗವಹಿಸಿ, ನವ ವಧು ಹಾಗೂ ವರರಿಗೆ ಶುಭಹಾರೈಸಿದ್ದಾರೆ. ವರನ ಸಂಬಂಧಿಕರು ನಿಖಾವನ್ನು ಕಣ್ತುಂಬಿಕೊಳ್ಳಲು ಇಡೀ ಸಮಾರಂಭವನ್ನು ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: 20 ನಿಮಿಷದಲ್ಲಿ 2 ಲೀಟರ್ ನೀರು ಕುಡಿಯಲು ಹೋಗಿ ಮಹಿಳೆ ಸಾವು
ಸಿವಿಲ್ ಗುತ್ತಿಗೆದಾರ ಮೊಹಮ್ಮದ್ ಅಫ್ಜಲ್ ಅವರ ಕಿರಿಯ ಮಗ ಅರ್ಬಾಜ್, ನವವಿವಾಹಿತ ವಧುವಿನ ಭಾರತ ಪ್ರವೇಶಕ್ಕಾಗಿ ಶೀಘ್ರದಲ್ಲೇ ವೀಸಾಕ್ಕಾಗಿ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. ಪ್ರಸ್ತುತ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವ ಕಾರಣ ನಾವು ಮದುವೆಯನ್ನು ಆನ್‌ಲೈನ್‌ನಲ್ಲಿ ನಡೆಸುವಂತೆ ಒತ್ತಾಯಿಸಿದ್ದೇವೆ. ವೀಸಾ ಪಡೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿಯೇ ನಾವು ಅದನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ನಿರ್ಧರಿಸಿದ್ದಾಗಿ ಅರ್ಬಾಜ್ ಹೇಳಿದ್ದಾರೆ. ಇದನ್ನೂ ಓದಿ: ಅಮೃತ್ ಭಾರತ್; ರಾಜ್ಯದ 13 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ – ಮೋದಿಯಿಂದ ಇಂದು ಚಾಲನೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]