ಜೈಪುರ: ಪಾಪಿ ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗಳನ್ನು ಕೊಂದು ಆಕೆಯ ಶವವನ್ನು ಚಲಿಸುತ್ತಿರುವ ರೈಲಿನಿಂದ ಎಸೆದ ಘಟನೆ ರಾಜಸ್ಥಾನ (Rajasthan) ದ ಶ್ರೀಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ.
ಕ್ರೂರಿ ತಾಯಿ ತನ್ನ ಪ್ರಿಯಕರನ ಜೊತೆ ಸೇರಿ ಈ ಕೃತ್ಯ ಎಸಗಿದ್ದಾಳೆ. ಪ್ರಕರಣ ಸಂಬಂಧ ಇದೀಗ ತಾಯಿ ಸುನಿತಾ ಹಾಗೂ ಸನ್ನಿ ಅಲಿಯಾಸ್ ಮಲ್ತಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಸೋಮವಾರ ಮತ್ತು ಮಂಗಳವಾರದ ನಡುವೆ ತಾಯಿ (Mother Killed Daughter) ತನ್ನ ಮಗಳು ಕಿರಣ್ಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ತನ್ನ ಪ್ರಿಯತಮನ ಸಹಾಯದಿಂದ ಆಕೆಯ ಶವವನ್ನು ಬೆಡ್ಶೀಟ್ನಿಂದ ಸುತ್ತಿ ಬಿಸಾಕಲೆಂದು ಶ್ರೀಗಂಗಾನಗರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಅಂತೆಯೇ ಬೆಳಗ್ಗೆ 6.10ಕ್ಕೆ ಹೊರಟ ರೈಲಿನಲ್ಲಿ ಇಬ್ಬರೂ ಶವ ಸಮೇತ ಪ್ರಯಾಣ ಬೆಳೆಸಿದ್ದಾರೆ. ರೈಲು (Train) ಬ್ರಿಡ್ಜ್ ಮೇಲೆ ತೆರಳುತ್ತಿದ್ದಂತೆಯೇ ಶವವನ್ನು ಕಾಲುವೆಗೆಂದು ಎಸೆದಿದ್ದಾರೆ. ಆದರೆ ಅದು ಕಾಲುವೆಗೆ ಬೀಳದೆ ರೈ;ವೆ ಹಳಿಯ ಮೇಲೆ ಬಿದ್ದಿದೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಶ್ರೀಗಂಗಾನಗರ ಎಸ್ಪಿ ಆನಂದ್ ಶರ್ಮಾ ತಿಳಿಸಿದ್ದಾರೆ.
Advertisement
Advertisement
ಐದು ಮಕ್ಕಳನ್ನು ಹೊಂದಿರುವ ಸುನೀತಾ, ಸನ್ನಿ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಶಾಸ್ತ್ರಿ ನಗರದಲ್ಲಿ ವಾಸಿಸುತ್ತಿದ್ದರೆ, ಮೂವರು ಮಕ್ಕಳು ಪತಿಯೊಂದಿಗೆ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೆಳ ಮನೆಯಲ್ಲಿದ್ದ ವಿವಾಹಿತೆ, ಮೇಲಿನ ಮನೆಯಲ್ಲಿದ್ದ ವಿವಾಹಿತನ ಜೊತೆಗೆ ಎಸ್ಕೇಪ್!
ಬಾಲಕಿಯ ಶವದ ಗುರುತು ಪತ್ತೆ ಮಾಡಿದ ಬಳಿಕ ಸುನಿತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಈ ವೇಳೆ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಬಳಿಕ ಇಬ್ಬರೂ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k