LatestMain PostNational

ಯಾರಾದ್ರೂ ಹತ್ರ ಬಂದ್ರೆ ಶೂಟ್ ಮಾಡ್ತೀನಿ – ಮನೆಯವರನ್ನ ಕೂಡಿ ಹಾಕಿಕೊಂಡು ಕಾನ್‍ಸ್ಟೇಬಲ್ ಹುಚ್ಚಾಟ

Advertisements

ಜೈಪುರ: ಮನೆಯವರೊಂದಿಗೆ ತನ್ನನ್ನು ತಾನೇ ಕೂಡಿ ಹಾಕಿಕೊಂಡು ಕಾನ್‍ಸ್ಟೇಬಲ್ ಓರ್ವ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹುಚ್ಚಾಟ ಮೆರೆದಿದ್ದಾನೆ.

ಜೋಧ್‍ಪುರದ ಸಿಆರ್‌ಪಿಎಫ್ ತರಬೇತಿ ಕೇಂದ್ರದ ಆವರಣದಲ್ಲಿರುವ ಸಿಆರ್‍ಪಿಎಫ್ ಕಾನ್‍ಸ್ಟೇಬಲ್ ತನ್ನ ಕುಟುಂಬಸ್ಥರೊಂದಿಗೆ ತನ್ನನ್ನು ಸೇರಿಸಿ ಮನೆಯೊಳಗೆ ಬೀಗ ಹಾಕಿಕೊಂಡಿದ್ದಾನೆ. ನಂತರ ನನ್ನ ಬಳಿ ಯಾರಾದರೂ ಬಂದರೆ ಗುಂಡು ಹಾರಿಸುತ್ತೇನೆ ಎಂದು ಗಾಳಿಯಲ್ಲಿ ಗುಂಡು ಹಾರಿಸಲು ಆರಂಭಿಸಿದ್ದಾನೆ. ಇದನ್ನೂ ಓದಿ: ನಾಳೆ ಚಾಮರಾಜಪೇಟೆ ಬಂದ್- ಜಮೀರ್ ಕಚೇರಿಗೆ ತೆರಳಿ ಹಿಂದೂ ಸಂಘಟನೆ ಮನವಿ

ಇದರಿಂದಾಗಿ ಕುಟುಂಬಸ್ಥರು ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಸಿಆರ್‍ಪಿಎಫ್‍ನ ಉನ್ನತ ಅಧಿಕಾರಿಗಳು ವ್ಯಕ್ತಿಯನ್ನು ಮಾತನಾಡಿಸಲು ಪ್ರಯತ್ನಿಸಿದಾಗ, ಕಾನ್‍ಸ್ಟೇಬಲ್ ಮಾತನಾಡಲು ನಿರಾಕರಿಸಿದ್ದಾನೆ. ವ್ಯಕ್ತಿಯ ಪತ್ನಿ ಹಾಗೂ ಮಗಳು ಆತನೊಂದಿಗೆ ಇದ್ದಿದ್ದರಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮವಹಿಸುತ್ತಿದ್ದಾರೆ. ಕಾನ್‍ಸ್ಟೇಬಲ್ ಯಾವುದಾದರೂ ವಿಚಾರವಾಗಿ ಅಸಮಾಧಾನಗೊಂಡಿದ್ದು, ಈ ರೀತಿ ವರ್ತಿಸುತ್ತಿರಬಹುದು ಎಂದು ಜೋಧ್‍ಪುರ ಪೂರ್ವ ಡಿಸಿಪಿ ಅಮೃತ ದುಹಾನ್ ಹೇಳಿದ್ದಾರೆ. ಇದನ್ನೂ ಓದಿ: ಮೂಲ ಕಾಂಗ್ರೆಸ್ಸಿಗರಿಗೆ ಚಾಕರಿ ಮಾಡುವ ಸುಯೋಗ ಸಿದ್ದರಾಮಯ್ಯಗೆ ಬಂದಿದೆ – ಕಾಲೆಳೆದ ಬಿಜೆಪಿ

ಪೇದೆಯನ್ನು ನರೇಶ್ ಎಂದು ಗುರುತಿಸಲಾಗಿದೆ. ಸದ್ಯ ಕಾನ್‍ಸ್ಟೇಬಲ್ ಕೋಪಮಾಡಿಕೊಳ್ಳಲು ಕಾರಣವೇನಿರಬಹುದು ಎಂಬುವುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button