ಜೈಪುರ: ಮನೆಯವರೊಂದಿಗೆ ತನ್ನನ್ನು ತಾನೇ ಕೂಡಿ ಹಾಕಿಕೊಂಡು ಕಾನ್‍ಸ್ಟೇಬಲ್ ಓರ್ವ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹುಚ್ಚಾಟ ಮೆರೆದಿದ್ದಾನೆ.
ಜೋಧ್‍ಪುರದ ಸಿಆರ್‌ಪಿಎಫ್ ತರಬೇತಿ ಕೇಂದ್ರದ ಆವರಣದಲ್ಲಿರುವ ಸಿಆರ್‍ಪಿಎಫ್ ಕಾನ್‍ಸ್ಟೇಬಲ್ ತನ್ನ ಕುಟುಂಬಸ್ಥರೊಂದಿಗೆ ತನ್ನನ್ನು ಸೇರಿಸಿ ಮನೆಯೊಳಗೆ ಬೀಗ ಹಾಕಿಕೊಂಡಿದ್ದಾನೆ. ನಂತರ ನನ್ನ ಬಳಿ ಯಾರಾದರೂ ಬಂದರೆ ಗುಂಡು ಹಾರಿಸುತ್ತೇನೆ ಎಂದು ಗಾಳಿಯಲ್ಲಿ ಗುಂಡು ಹಾರಿಸಲು ಆರಂಭಿಸಿದ್ದಾನೆ. ಇದನ್ನೂ ಓದಿ: ನಾಳೆ ಚಾಮರಾಜಪೇಟೆ ಬಂದ್- ಜಮೀರ್ ಕಚೇರಿಗೆ ತೆರಳಿ ಹಿಂದೂ ಸಂಘಟನೆ ಮನವಿ
Advertisement
Rajasthan | A CRPF constable has locked himself in his house inside the CRPF training centre premises in Jodhpur along with his family and started firing in the air when anyone approached him: Amrita Duhan, DCP Jodhpur East (10.07) pic.twitter.com/5YC0psVh6S
— ANI MP/CG/Rajasthan (@ANI_MP_CG_RJ) July 10, 2022
Advertisement
ಇದರಿಂದಾಗಿ ಕುಟುಂಬಸ್ಥರು ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಸಿಆರ್‍ಪಿಎಫ್‍ನ ಉನ್ನತ ಅಧಿಕಾರಿಗಳು ವ್ಯಕ್ತಿಯನ್ನು ಮಾತನಾಡಿಸಲು ಪ್ರಯತ್ನಿಸಿದಾಗ, ಕಾನ್‍ಸ್ಟೇಬಲ್ ಮಾತನಾಡಲು ನಿರಾಕರಿಸಿದ್ದಾನೆ. ವ್ಯಕ್ತಿಯ ಪತ್ನಿ ಹಾಗೂ ಮಗಳು ಆತನೊಂದಿಗೆ ಇದ್ದಿದ್ದರಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮವಹಿಸುತ್ತಿದ್ದಾರೆ. ಕಾನ್‍ಸ್ಟೇಬಲ್ ಯಾವುದಾದರೂ ವಿಚಾರವಾಗಿ ಅಸಮಾಧಾನಗೊಂಡಿದ್ದು, ಈ ರೀತಿ ವರ್ತಿಸುತ್ತಿರಬಹುದು ಎಂದು ಜೋಧ್‍ಪುರ ಪೂರ್ವ ಡಿಸಿಪಿ ಅಮೃತ ದುಹಾನ್ ಹೇಳಿದ್ದಾರೆ. ಇದನ್ನೂ ಓದಿ: ಮೂಲ ಕಾಂಗ್ರೆಸ್ಸಿಗರಿಗೆ ಚಾಕರಿ ಮಾಡುವ ಸುಯೋಗ ಸಿದ್ದರಾಮಯ್ಯಗೆ ಬಂದಿದೆ – ಕಾಲೆಳೆದ ಬಿಜೆಪಿ
Advertisement
Advertisement
ಪೇದೆಯನ್ನು ನರೇಶ್ ಎಂದು ಗುರುತಿಸಲಾಗಿದೆ. ಸದ್ಯ ಕಾನ್‍ಸ್ಟೇಬಲ್ ಕೋಪಮಾಡಿಕೊಳ್ಳಲು ಕಾರಣವೇನಿರಬಹುದು ಎಂಬುವುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.