ಜೈಪುರ: 30 ವರ್ಷದ ಸ್ವಯಂಘೋಷಿತ ದೇವಮಾನವನೊಬ್ಬ ತನ್ನ ಗುಪ್ತಾಂಗವನ್ನು ತಾನೇ ಕತ್ತರಿಸಿಕೊಂಡ ವಿಚಿತ್ರ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ.
ಈ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ತಾರಾ ನಗರ್ ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದ್ದು, ಮಂಗಳವಾರ ಸಂಜೆ ವೇಳೆ ಬೆಳಕಿಗೆ ಬಂದಿದೆ. ಕೃತ್ಯ ಎಸಗಿಕೊಂಡಿರೋ ಸ್ವಾಮೀಜಿಯನ್ನು ಸಂತೋಷ್ ದಾಸ್ ಎಂದು ಗುರುತಿಸಲಾಗಿದೆ.
Advertisement
ಇದನ್ನೂ ಓದಿ: ರೇಪಿಸ್ಟ್ ಕಾಮಿ ಸ್ವಾಮೀಜಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು ಯುವತಿ!
Advertisement
ಘಟನೆಗೆ ಕಾರಣವೇನು?: ಸ್ವಾಮೀಜಿ ಸಂತೋಷ್ ದಾಸ್ ತಾರ ನಗರ್ ಪ್ರದೇಶದಲ್ಲಿರುವ ತನ್ನ ಹರಿದಾಸ್ ಆಶ್ರಮದ ಪಕ್ಕದ ಮನೆಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಆರೋಪದಿಂದಲೇ ಸ್ವಾಮೀಜಿ ಈ ಕೃತ್ಯ ಎಸಗಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.
Advertisement
ಇದನ್ನೂ ಓದಿ: ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ
Advertisement
ಮಂಗಳವಾರ ಬೆಳಗ್ಗೆ ಸ್ಥಳೀಯರ ಆರೋಪವನ್ನು ಸ್ವಾಮೀಜಿ ಒಪ್ಪಿಕೊಂಡಿದ್ದಾನೆ. ಈ ಅವಮಾನವನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಸ್ವಾಮೀಜಿ ಆಶ್ರಮಕ್ಕೆ ಬಂದು ತನ್ನ ಗುಪ್ತಾಂಗವನ್ನು ತಾನೇ ಕತ್ತರಿಸಿಕೊಂಡಿದ್ದಾನೆ. ಬಳಿಕ ನೋವಿನಿಂದ ಚೀರಾಡಿಕೊಂಡಿದ್ದಾನೆ. ಈ ವೇಳೆ ಆಶ್ರಮದಲ್ಲಿದ್ದ ಇತರ ಸ್ವಾಮೀಜಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ದಾಸ್ ನನ್ನು ತಾರಾ ನಗರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬಿಕನೇರ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಸದ್ಯ ಸ್ವಾಮೀಜಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ.
ಇದನ್ನೂ ಓದಿ: ಕೇರಳದ ಸ್ವಾಮೀಜಿಯ ಮರ್ಮಾಂಗ ಕತ್ತರಿಸಿದ್ದು ಮಗಳ ಬಾಯ್ ಫ್ರೆಂಡ್ – ತಾಯಿಯಿಂದ ದೂರು
ಘಟನೆಗೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ವಾಮೀಜಿಯಿಂದ ಹೇಳಿಕೆಯನ್ನು ಇನ್ನಷ್ಟೇ ಪಡೆದುಕೊಳ್ಳಬೇಕಾಗಿದೆ. ಕೆಲ ತಿಂಗಳ ಹಿಂದೆ ತೇರಳದ ತಿರುವನಂತಪುರಂನಲ್ಲಿ ಸ್ವಾಮೀಜಿಯೊಬ್ಬರ ಗುಪ್ತಾಂಗವನ್ನು ಕತ್ತರಿಸಿದ್ದು ಸುದ್ದಿಯಾಗಿತ್ತು. ಆರಂಭದಲ್ಲಿ ವಿದ್ಯಾರ್ಥಿನಿಯೊಬ್ಬಳು ಈ ಕೃತ್ಯ ಎಸಗಿದ್ದಾಳೆ ಎಂದಿದ್ದರೂ ನಂತರ ಸ್ವಾಮೀಜಿ ನಾನೇ ಗುಪ್ತಾಂಗವನ್ನು ಕತ್ತರಿಸಿಕೊಂಡೆ ಎಂದು ಸ್ಪಷ್ಟನೆ ನೀಡಿದ್ದರು. ಈ ಪ್ರಕರಣದ ಸತ್ಯಾಸತ್ಯತೆ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.
https://www.youtube.com/watch?v=Oul2v2F1DEM