ಮುಂಬೈ: ಕಳೆದ ಐಪಿಎಲ್ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಸ್ಟಾರ್ ಆಟಗಾರರಿಗೆ ಗೇಟ್‌ಪಾಸ್ ನೀಡಿದೆ. ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಮೊದಲ ಆಯ್ಕೆಯ ಆಟಗಾರನಾಗಿ ಉಳಿಸಿಕೊಂಡಿದೆ.
RAJASTHAN ROYALS RETENTIONS. 📢 pic.twitter.com/xV0MpiUMPF
— Mufaddal Vohra (@mufaddal_vohra) October 31, 2024
Advertisement
ಇನ್ನುಳಿದಂತೆ ಜೋಸ್ ಬಟ್ಲರ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್ ಅವರಂತಹ ಸ್ಟಾರ್‌ಗಳನ್ನು ಬಿಡುಗಡೆ ಮಾಡಿದೆ. ಸಂಜು ಸ್ಯಾಮ್ಸನ್ ಜೊತೆಗೆ ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಸಂದೀಪ್ ಶರ್ಮಾ, ಧ್ರುವ್ ಜುರೆಲ್, ಶಿಮ್ರನ್ ಹೆಟ್ಮೇಯರ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. 2025ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ರಾಹುಲ್ ದ್ರಾವಿಡ್ ಕೋಚಿಂಗ್ ನೇತೃತ್ವದಲ್ಲಿ ಮುನ್ನಡೆಯಲಿದೆ. ಆದ್ರೆ ಈಗಾಗಲೇ 6 ಆಟಗಾರರನ್ನು ಆರ್‌ಆರ್ ರಿಟೇನ್ ಮಾಡಿಕೊಂಡಿರುವುದರಿಂದ ಆರ್‌ಟಿಎಂ ಕಾರ್ಡ್ ಆಯ್ಕೆಯನ್ನು ಕಳೆದುಕೊಂಡಿದೆ. ಇದನ್ನೂ ಓದಿ: IPL Retention | ಹೊಸ ಮುಖಗಳಿಗೆ ಪಂಜಾಬ್ ಕಿಂಗ್ಸ್ ಮಣೆ – ಸ್ಟಾರ್ ಆಟಗಾರರು ಹೊರಕ್ಕೆ
Advertisement
Advertisement
ರಾಜಸ್ಥಾನ್ ರಾಯಲ್ಸ್‌ನಲ್ಲಿ ಯಾರ ಸಂಭಾವನೆ ಎಷ್ಟು?
* ಸಂಜು ಸ್ಯಾಮ್ಸನ್ – 18 ಕೋಟಿ ರೂ.
* ಯಶಸ್ವಿ ಜೈಸ್ವಾಲ್ – 18 ಕೋಟಿ ರೂ.
* ರಿಯಾನ್ ಪರಾಗ್ – 14 ಕೋಟಿ ರೂ.
* ಧ್ರುವ್ ಜುರೆಲ್ – 14 ಕೋಟಿ ರೂ.
* ಶಿಮ್ರನ್ ಹೆಟ್ಮೇಯರ್ – 11 ಕೋಟಿ ರೂ.
* ಸಂದೀಪ್ ಶರ್ಮಾ – 4 ಕೋಟಿ ರೂ.
Advertisement
2025 ರಿಂದ 2027ರ ಐಪಿಎಲ್ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ. ಇದನ್ನೂ ಓದಿ: IPL Retention | ಸಂಭಾವನೆ ಹೆಚ್ಚಿಸಿಕೊಂಡ ಕ್ಲಾಸೆನ್ – ಬರೋಬ್ಬರಿ 23 ಕೋಟಿ ರೂ.ಗೆ ರೀಟೆನ್