ಕೊನೆಯ ಓವರಿನಲ್ಲಿ ತ್ಯಾಗಿ ಜಾದೂ – ರಾಜಸ್ಥಾನಕ್ಕೆ 2 ರನ್‍ಗಳ ರೋಚಕ ಜಯ

Public TV
2 Min Read
Kartik Tyag 1 e1632248656944

ದುಬೈ: ಕಾರ್ತಿಕ್ ತ್ಯಾಗಿಯ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ರಾಜಸ್ಥಾನ ರಾಯಲ್ಸ್  2 ರನ್‍ಗಳಿಂದ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿದೆ.

ಕೊನಯ ಓವರಿನವರೆಗೂ ಪಂದ್ಯ ಪಂಜಾಬ್ ಪರವಾಗಿಯೇ ಇತ್ತು. 19 ನೇ ಓವರಿನಲ್ಲಿ 4 ರನ್ ಬಂದ ಹಿನ್ನೆಲೆಯಲ್ಲಿ ಕೊನೆಯ ಓವರಿನಲ್ಲಿ 4 ರನ್‍ಗಳ ಅಗತ್ಯವಿತ್ತು.

Kartik Tyag

ಕಾರ್ತಿಕ್ ತ್ಯಾಗಿ ಎಸೆದ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಎರಡನೇ ಎಸೆತದಲ್ಲಿ ಏಡನ್ ಮಾಕ್ರಮ್ 1 ರನ್ ಓಡಿದರು. ಮೂರನೇ ಎಸೆತದಲ್ಲಿ ಪೂರನ್ ಕೀಪರ್ ಸ್ಯಾಮ್ಸನ್ ಕೈಗೆ ಕ್ಯಾಚ್ ನೀಡಿ ಹೊರ ನಡೆದಾಗ ಪಂದ್ಯ ರೋಚಕ ತಿರುವು ಪಡೆದುಕೊಂಡಿತು.

4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5 ಎಸೆತದಲ್ಲಿ ದೀಪಕ್ ಹೂಡ ಕೀಪರ್ ಕೈಗೆ ಕ್ಯಾಚ್ ನೀಡಿದರು. ಕೊನೆಯ ಎಸೆತದಲ್ಲಿ ಮೂರು ರನ್ ಬೇಕಿತ್ತು, ಸ್ಟ್ರೈಕ್ ನಲ್ಲಿದ್ದ ಎಲೆನ್ ಯಾವುದೇ ರನ್ ತೆಗೆಯಲಿಲ್ಲ. ಹೀಗಾಗಿ ರಾಜಸ್ಥಾನ ಕೊನೆಯ ಓವರಿನಲ್ಲಿ 2 ರನ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಗೆಲ್ಲಲು 186 ರನ್‍ಗಳ ಗುರಿಯನ್ನು ಪಡೆದಿದ್ದ ಪಂಜಾಬ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ರನ್ 183 ರನ್ ಹೊಡೆಯಿತು.

mayank agarwal kl rahul

ಪಂಜಾಬ್ ಪರ ನಾಯಕ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್‍ವಾಲ್ ಮೊದಲ ವಿಕೆಟಿಗೆ 11.5 ಓವರ್ ಗಳಲ್ಲಿ 120 ರನ್ ಜೊತೆಯಾಟವಾಡಿದರು. ರಾಹುಲ್ 49 ರನ್(33 ಎಸೆತ, 4 ಬೌಂಡರಿ, 6 ಸಿಕ್ಸರ್), ಮಯಾಂಕ್ 67 ರನ್(43 ಎಸೆತ, 7 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.

ಏಡನ್ ಮಾಕ್ರಮ್ ಮತ್ತು ನಿಕೂಲಸ್ ಪೂರನ್ ಮೂರನೇ ವಿಕೆಟಿಗೆ 39 ಎಸೆತಗಳಲ್ಲಿ 57 ರನ್ ಚಚ್ಚಿದರು. ಪೂರನ್ 32 ರನ್(1 ಬೌಂಡರಿ, 2 ಸಿಕ್ಸರ್) ಹೊಡೆದರೆ ಮಾಕ್ರಮ್ ಔಟಾಗದೇ 26 ರನ್(20 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದರು.

Arshdeep Singh

ಅತ್ಯುತ್ತಮ ಬೌಲಿಂಗ್ ಮಾಡಿದ ಕಾರ್ತಿಕ್ ತ್ಯಾಗಿ 4 ಓವರ್ ಎಸೆದು 29 ರನ್ ನೀಡಿ 2 ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಪಂದ್ಯದ ಜಯದೊಂದಿಗೆ ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ 8 ಅಂಕ ಪಡೆದು 5ನೇ ಸ್ಥಾನಕ್ಕೆ ಜಿಗಿದಿದೆ.  ಇದನ್ನೂ ಓದಿ: ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇದ್ದಾರೆ, ಪ್ರಸಾರ ಮಾಡಬೇಡಿ – ಅಫ್ಘಾನಿಸ್ಥಾನದಲ್ಲಿ ಐಪಿಎಲ್ ಬ್ಯಾನ್

Rajasthan Royals

ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ 9 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಎವಿನ್ ಲೂಯಿಸ್ 36 ರನ್(21 ಎಸೆತ, 7 ಬೌಂಡರಿ, 1 ಸಿಕ್ಸರ್) ಯಶಸ್ವಿ ಜೈಸ್ವಾಲ್ 49 ರನ್(36 ಎಸೆತ, 6 ಬೌಂಡರಿ, 2 ಸಿಕ್ಸರ್) ಮಹಿಪಾಲ್ 43 ರನ್(17 ಎಸೆತ, 2 ಬೌಂಡರಿ, 4 ಸಿಕ್ಸರ್) ಹೊಡೆದು ಔಟಾದರು.

ಪಂಜಾಬ್ ಪರ ಅರ್ಶ್‍ದೀಪ್ ಸಿಂಗ್ 4 ಓವರ್ ಎಸೆದು 32 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಮೊಹಮ್ಮದ್ ಶಮಿ 3, ಇಶಾನ್ ಪೊರೆಲ್ 1, ಹರ್ಪಿತ್ ಬ್ರಾರ್ 1 ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *