16 ವರ್ಷಗಳಿಂದ ಅಳಿಯನನ್ನೇ ಪ್ರೀತಿಸ್ತಿದ್ದ ಅತ್ತೆ- ಒಟ್ಟಿಗೆ ಇರಲು ಸಾಧ್ಯವಾಗದೇ ಇಬ್ಬರೂ ಆತ್ಮಹತ್ಯೆ

Public TV
1 Min Read
LOVERS 2
ಸಾಂದರ್ಭಿಕ ಚಿತ್ರ

ಜೈಪುರ: ಮದುವೆಯಾದ ನಂತರವೂ 16 ವರ್ಷಗಳಿಂದ ಪ್ರೀತಿಸುತ್ತಿದ್ದ ಅತ್ತೆ ಅಳಿಯ ಇಬ್ಬರೂ ಒಟ್ಟಿಗೆ ಇರಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಾಸ್ಥಾನದ ಬಾರ್ಮರ್ ಗ್ರಾಮದಲ್ಲಿ ನಡೆದಿದೆ.

LOVERS

ಹೋತಾರಾಮ್ (22) ಮತ್ತು ದರಿಯಾ ದೇವಿ (38) ಕೈರವ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾರ್ಮರ್ ರಾಮ್ಸರ್ ರಸ್ತೆಯ ಬಳಿಯ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಉದಯಪುರದ ಹತ್ಯೆ ಖಂಡನೀಯ: ಇದು ದೇಶದ ಕಾನೂನು, ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದು – ಮುಸ್ಲಿಂ ಮಂಡಳಿ

LOVERS 1 1

ಏನಿದು ಅತ್ತೆ-ಅಳಿಯನ ಲವ್‌ಸ್ಟೋರಿ?: ಹೋತಾರಾಮ್ ಹಾಗೂ ದರಿಯಾ ದೇವಿ ಇಬ್ಬರೂ ಸಂಬಂಧದಲ್ಲಿ ಅತ್ತೆ ಮತ್ತು ಅಳಿಯ ಆಗಿದ್ದಾರೆ. ವರ್ಷದ ಹಿಂದೆ ಹೋತಾರಾಮ್ ಖರಾಂತಿಯಾ ಗ್ರಾಮದಲ್ಲಿ ದರಿಯಾ ದೇವಿ ಅವರ ಮಗಳನ್ನು ಮದುವೆಯಾಗಿದ್ದರು. ಆದರೆ ಈ ನಡುವೆ ಅತ್ತೆ -ಅಳಿಯನ ನಡುವೆ ಪ್ರೇಮ ಶುರುವಾಗಿತ್ತು. ಇಬ್ಬರೂ ಒಟ್ಟಿಗೇ ಇರಬೇಕು ಅಂದುಕೊಂಡಿದ್ದರು. ಆದರೆ ಇಬ್ಬರ ಲವ್ ಸ್ಟೋರಿ ಊರಿನ ಜನರಿಗೂ ಗೊತ್ತಾಗಿತ್ತು. ಅವಮಾನದಿಂದಾಗಿ ಇಬ್ಬರೂ ಆತ್ಮಹತ್ಯೆಯ ದಾರಿ ಆಯ್ಕೆ ಮಾಡಿಕೊಂಡರು. ಇದನ್ನೂ ಓದಿ: ಆರೋಗ್ಯ ಕಾರ್ಯಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಘೋರ, ಜಾಮೀನು ರಹಿತ ಅಪರಾಧ – ಹೈಕೋರ್ಟ್

ಪಡಿತರ ಖರೀದಿಸುವ ನೆಪದಲ್ಲಿ ಇಬ್ಬರೂ ಮನೆಬಿಟ್ಟು ಹೋಗಿದ್ದರು. ಇದಾದ ಮರುದಿನವೇ ಅವರು ಶವವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಅಧಿಕಾರಿ ಪರ್ಬತ್ ಸಿಂಗ್ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸಿದ ಬಳಿಕ ಮೃತ ದೇಹಗಳನ್ನು ಹೊರತೆಗೆದು ಬಾರ್ಮರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *