ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಪ್ತ ಸಚಿವರೊಬ್ಬರು ರಾಜ್ಯದ ಅಧಿಕಾರಶಾಹಿಯ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ ಹಾಗೂ ರಾಜೀನಾಮೆಗೆ ಕೋರಿದ್ದಾರೆ.
ರಾಜಸ್ಥಾನದ ಸಚಿವ ಅಶೋಕ್ ಚಂದ್ನಾ ಗೆಹ್ಲೋಟ್ ಅವರಿಗೆ ತಮ್ಮನ್ನು ಸಚಿವ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಹಾಗೂ ಅವರ ಪ್ರಧಾನ ಕಾರ್ಯದರ್ಶಿ ಕುಲದೀಪ್ ರಾಂಕಾ ಅವರಿಗೆ ಎಲ್ಲಾ ಇಲಾಖೆಗಳ ಅಧಿಕಾರಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ.
Advertisement
Advertisement
ಚಂದ್ನಾ ಅವರು ರಾಜಸ್ಥಾನದ ಕ್ರೀಡೆ ಹಾಗೂ ಯುವ ವ್ಯವಹಾರಗಳು, ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಉದ್ಯಮಶೀಲತೆ, ವಿಪತ್ತು ನಿರ್ವಹಣೆ ಹಾಗೂ ಪರಿಹಾರ ಸಚಿವರಾಗಿದ್ದಾರೆ. ಆದರೆ ಇದೀಗ ಚಂದ್ನಾ ರಾಜೀನಾಮೆಗೆ ಕೋರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಂಕಿಪಾಕ್ಸ್ ಆತಂಕ – ಬೆಂಗಳೂರಿನಲ್ಲಿ ಹೈ ಅಲರ್ಟ್
Advertisement
ಈ ಬಗ್ಗೆ ಟ್ವೀಟ್‌ನಲ್ಲಿ ಬರೆದಿರುವ ಚಂದ್ನಾ, ಮುಖ್ಯಮಂತ್ರಿಗಳೇ, ನನ್ನನ್ನು ಈ ಕ್ರೂರ ಸಚಿವ ಸ್ಥಾನದಿಂದ ಮುಕ್ತಗೊಳಿಸಿ. ನನ್ನ ಎಲ್ಲಾ ಇಲಾಖೆಗಳ ಉಸ್ತುವಾರಿಯನ್ನು ಕುಲದೀಪ್ ರಂಕಾ ಅವರಿಗೆ ನೀಡಿ. ಏಕೆಂದರೆ ಅವರೇ ಈ ಎಲ್ಲಾ ಇಲಾಖೆಗಳ ಸಚಿವರಾಗಿದ್ದಾರೆ ಎಂದು ತಿಳಿಸಿದ್ದಾರೆ.
Advertisement
माननीय मुख्यमंत्री जी मेरा आपसे व्यक्तिगत अनुरोध है की मुझे इस ज़लालत भरे मंत्री पद से मुक्त कर मेरे सभी विभागों का चार्ज श्री कुलदीप रांका जी को दे दिया जाए, क्योंकि वैसे भी वो ही सभी विभागों के मंत्री है।
धन्यवाद
— Ashok Chandna (@AshokChandnaINC) May 26, 2022
ಇತ್ತೀಚೆಗೆ ರಾಜಸ್ಥಾನದ ಬುಡಕಟ್ಟು ನಾಯಕ ಹಾಗೂ ಶಾಸಕ ಗಣೇಶ್ ಘೋಗ್ರಾ ಭೂ ಪತ್ರ ವಿತರಣೆ ಕುರಿತು ರಾಜ್ಯದ ಅಧಿಕಾರಶಾಹಿಯೊಂದಿಗೆ ವಾಗ್ದಾಳಿ ನಡೆಸಿದ್ದರು. ವಿಧಾನಸಭೆಯಲ್ಲಿ ಡುಂಗರ್‌ಪುರದ ಪ್ರತಿನಿಧಿಯಾಗಿರುವ ರಾಜ್ಯದ ಯುವ ಕಾಂಗ್ರೆಸ್ ಘೋಗ್ರಾ ಆಡಳಿತ ಪಕ್ಷದ ಶಾಸಕರಾಗಿದ್ದರೂ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ದೂರು ನೀಡಿ, ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: ಅಜ್ಮೀರ್ ದರ್ಗಾ ದೇವಾಲಯವಾಗಿತ್ತು – ಸಮೀಕ್ಷೆಗೆ ಹಿಂದೂ ಸಂಘಟನೆ ಆಗ್ರಹ
ಇದೀಗ ಚಂದ್ನಾ ಅಧಿಕಾರಶಾಹಿ ವಿರುದ್ಧ ವಾಗ್ದಾಳಿ ನಡೆಸಿ, ರಾಜೀನಾಮೆಗೆ ಕೋರಿದ್ದಾರೆ. ರಾಜಸ್ಥಾನದ ಸಣ್ಣದೊಂದು ರಾಜಕೀಯ ಪ್ರಕ್ಷುಬ್ಧತೆ ಪಕ್ಷದ ಕಳವಳಕ್ಕೆ ಕಾರಣವಾಗಿದೆ.