ಜೈಪುರ: ಪಾಕಿಸ್ತಾನದ ಐಎಸ್‌ಐ ಮಹಿಳಾ ಅಧಿಕಾರಿಯೊಬ್ಬಳ ಹನಿಟ್ರ್ಯಾಪ್ ಗೆ ಒಳಗಾಗಿ ಭಾರತೀಯ ಸೇನೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಇಬ್ಬರು ಸೈನಿಕರನ್ನು ರಾಜಸ್ಥಾನದಲ್ಲಿ ಸಿಬಿಐ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಈ ಇಬ್ಬರು ಸೈನಿಕರನ್ನು ಮಧ್ಯಪ್ರದೇಶದ ಲ್ಯಾನ್ಸ್ ನಾಯಕ್ ರವಿವರ್ಮಾ ಮತ್ತು ಇನ್ನೊಬ್ಬರನ್ನು ಅಸ್ಸಾಂ ಮೂಲದ ವಿಚಿತಾ ಬೊಹ್ರಾ ಎಂದು ಗುರುತಿಸಲಾಗಿದೆ. ಈ ಇಬ್ಬರು ಸೈನಿಕರು ಪಾಕಿಸ್ತಾನಿ ಐಎಸ್‌ಐ ಅಧಿಕಾರಿಯನ್ನು ಭಾರತೀಯ ಮಹಿಳೆ ಎಂದು ತಿಳಿದು ಭಾರತೀಯ ಸೇನೆಯ ಪ್ರಮುಖ ಮಾಹಿತಿ ಮತ್ತು ಫೋಟೋಗಳನ್ನು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Advertisement
Advertisement
ಪಾಕ್‌ನ ಐಎಸ್‌ಐ ಅಧಿಕಾರಿಯೊಬ್ಬಳು ನಾನು ಪಂಜಾಬ್ ಮೂಲದ ಮಹಿಳೆ ಎಂದು ಹೇಳಿಕೊಂಡು ಪಾಕ್ ನಂಬರಿನಿಂದ ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ ಮೂಲಕ ಈ ಇಬ್ಬರು ಸೈನಿಕರಿಗೆ ಕರೆ ಮಾಡಿದ್ದಾಳೆ. ಪ್ರೋಟೋಕಾಲ್ ಮೂಲಕ ಕರೆ ಮಾಡಿದ ಕಾರಣ ಅದು ಇಂಡಿಯಾ ನಂಬರ್ ರೀತಿ ಕಾಣಿಸಿದೆ. ಇದನ್ನು ನಂಬಿದ ಸೈನಿಕರು ನಮ್ಮ ದೇಶದ ಸೇನೆಯ ಕೆಲ ಪ್ರಮುಖ ಮಾಹಿತಿ ಮತ್ತು ಕೆಲ ಗನ್‌ಗಳ ಫೋಟೋ ಗಳನ್ನು ವಾಟ್ಸಪ್ ಮತ್ತು ಫೇಸ್‌ಬುಕ್ ಮೂಲಕ ಕಳುಹಿಸಿದ್ದಾರೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.
Advertisement
ಸೈನಿಕರು ರಾಜಸ್ಥಾನದ ಪೋಖ್ರಾನ್ ಅಲ್ಲಿ ಕೆಲಸ ಮಾಡುತ್ತಿದ್ದು, ಈ ಜಾಗದಿಂದ ಸೇನಾ ಮಾಹಿತಿಗಳು ಸೋರಿಕೆ ಆಗುತ್ತಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಮಾಹಿತಿಯನ್ನು ಬೆನ್ನತ್ತಿದ ಸಿಬಿಐ ಮತ್ತು ಐಬಿ ತಂಡದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮಾಡಿ ಜೋಧಪುರದ ರೈಲು ನಿಲ್ದಾಣದಲ್ಲಿ ಈ ಇಬ್ಬರು ಸೈನಿಕರನ್ನು ಬಂಧಿಸಿದ್ದಾರೆ.
Advertisement
ಈ ಇಬ್ಬರು ಅಧಿಕಾರಿಗಳು ಹನಿಟ್ರ್ಯಾಪ್ ಗೆ ಒಳಗಾಗಿದ್ದು, ಪಾಕ್ ಅಧಿಕಾರಿಯನ್ನು ಭಾರತೀಯ ಮಹಿಳೆ ಎಂದು ತಿಳಿದು ಮಾಹಿತಿಯನ್ನು ಶೇರ್ ಮಾಡಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜೋಧಪುರದ ರೈಲ್ವೇ ನಿಲ್ದಾಣದಲ್ಲಿ ಊರಿಗೆ ಹೋಗುತ್ತಿದ್ದ ಸೈನಿಕರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಜೈಪುರಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.