ಪಾಕ್‌ ಪರ ಬೇಹುಗಾರಿಕೆ – 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ರಾಜಸ್ಥಾನದ ಸರ್ಕಾರಿ ನೌಕರ ಅರೆಸ್ಟ್‌

Public TV
2 Min Read
Pakistan Spy 1

ಜೈಪುರ: ಪಾಕಿಸ್ತಾನದ ಐಎಸ್‌ಐ (Pakistan ISI) ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜಸ್ಥಾನದ ಸರ್ಕಾರಿ ನೌಕರನನ್ನ (Rajasthan Government Employee) ಜೈಸಲ್ಮೇರ್‌ನಲ್ಲಿ ಬಂಧಿಸಲಾಗಿದೆ.

ಬಂಧಿತ ಸರ್ಕಾರಿ ನೌಕರನನ್ನ ಶಕುರ್ ಖಾನ್ ಮಂಗನಿಯಾರ್ ಎಂದು ಗುರುತಿಸಲಾಗಿದೆ. ಜೈಸಲ್ಮೈರ್‌ನಲ್ಲಿರುವ ಕಚೇರಿಯಲ್ಲೇ ಸಿಐಡಿ ಮತ್ತು ಗುಪ್ತಚರ ಸಂಸ್ಥೆಗಳ (Intelligence Department)ತಂಡವು ಜಂಟಿಯಾಗಿ ಬಂಧಿಸಿವೆ. ಇದನ್ನೂ ಓದಿ: ಇಬ್ಬರು ಕನ್ನಡಿಗರು ಸೇರಿ 26 ಮೃತ ಪ್ರವಾಸಿಗರ ನೆನಪಿಗೆ ಪಹಲ್ಗಾಮ್‌ನಲ್ಲಿ ಸ್ಮಾರಕ – ಒಮರ್ ಅಬ್ದುಲ್ಲಾ

india vs pakistan

ರಾಜಸ್ಥಾನದಲ್ಲಿ (Rajasthan) ಸರ್ಕಾರಿ ನೌಕರನಾಗಿದ್ದ ಶಕುರ್ ಖಾನ್ ಗಡಿ ಪ್ರದೇಶದ ಬರೋಡಾ ಗ್ರಾಮದವನು. ಈತನ ಮೇಲೆ ಬಹಳ ದಿನಗಳಿಂದ ನಿಗಾ ಇಡಲಾಗಿತ್ತು ಎನ್ನಲಾಗಿದೆ. ಸದ್ಯ ಹೆಚ್ಚಿನ ವಿಚಾರಣೆಗಾಗಿ ಜೈಪುರಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಎರಡೂ ತನಿಖಾ ತಂಡಗಳು ಜಂಟಿಯಾಗಿಯೇ ವಿಚಾರಣೆ ನಡೆಸಲಿವೆ. ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನೊಂದಿಗೆ (Pakistani High Commission) ಸಂಪರ್ಕದಲ್ಲಿದ್ದ ಅನ್ನೋದು ಪತ್ತೆಯಾಗಿದೆ. ಇದನ್ನೂ ಓದಿ: ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್ ಚಿಟ್

Jyoti malhotra 2

ಅಲ್ಲದೇ ಪಾಕಿಸ್ತಾನಕ್ಕೆ ಸಂಬಂಧಿಸಿದ ಹಲವಾರು ಫೋನ್ ಸಂಖ್ಯೆಗಳು (+92 ರಿಂದ ಪ್ರಾರಂಭವಾಗುವ ಮೊಬೈಲ್ ಸಂಖ್ಯೆಗಳು) ಇತನ ಮೊಬೈಲ್‌ನಲ್ಲಿ ಪತ್ತೆಯಾಗಿದೆ. ಜೊತೆಗೆ ಕಳೆದ ಕೆಲ ವರ್ಷಗಳಲ್ಲಿ 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದಾಗಿ ಶಕುರ್‌ ಖಾನ್‌ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಯುಪಿಯಲ್ಲಿ ರೇಪಿಸ್ಟ್, ಕೊಲೆಗಾರರ ವಿರುದ್ಧ ‘ಆಪರೇಷನ್ ಲಂಗ್ಡಾ’ – 11 ಕ್ರಿಮಿನಲ್ಸ್ ಕಾಲಿಗೆ ಗುಂಡೇಟು

ಪ್ರಮುಖ ಫೈಲ್‌ಗಳೇ ಡಿಲೀಟ್‌
ಇನ್ನೂ ಶಕುರ್‌ ಖಾನ್‌ ಗುಪ್ತಚರ ಅಧಿಕಾರಿಗಳ ಬಲೆಗೆ ಬೀಳುತ್ತಿದ್ದಂತೆ ಮೊಬೈಲ್‌ ಮತ್ತು ಡಿಲಿಟಲ್‌ ಡಿವೈಸ್‌ಗಳಲ್ಲಿದ್ದ ಹಲವಾರು ಪ್ರಮುಖ ಫೈಲ್‌ಗಳನ್ನ ಡಿಲೀಟ್‌ ಮಾಡಲಾಗಿದೆ. ಹೀಗಾಗಿ ಸಧ್ಯಕ್ಕೆ ಆತನ ಮೊಬೈಲ್‌ನಿಂದ ಯಾವುದೇ ಸೂಕ್ಷ್ಮ ಮಾಹಿತಿಗಳು ರವಾನೆಯಾಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ. ಹೊರತುಪಡಿಸಿ ಆತನ ಬ್ಯಾಂಕ್‌ ಖಾತೆ ಮೇಲೂ ನಿಗಾ ವಹಿಸಲಾಗಿದೆ.

ಸದ್ಯ ಯೂಟ್ಯೂಬರ್‌ ಜ್ಯೋತಿಒ ಮಲ್ಹೋತ್ರಾ ಸೇರಿದಂತೆ ಕಳೆದ ಎರಡು ವಾರಗಳಲ್ಲಿ ಒಟ್ಟು ಬಂಧಿತ ಪಾಕಿಸ್ತಾನಿ ಸ್ಪೈಗಳ ಸಂಖ್ಯೆ 16 ದಾಟಿದೆ. ಇದನ್ನೂ ಓದಿ: ರೈತರಿಗೆ ಗುಡ್‌ನ್ಯೂಸ್ – ಕಿಸಾನ್ ಕ್ರೆಡಿಟ್‌ಕಾರ್ಡ್ ಸಾಲದ ಬಡ್ಡಿ ರಿಯಾಯಿತಿ ಮುಂದುವರಿಕೆ

Share This Article