ಜೈಪುರ: 10 ದಿನಗಳ ಹಿಂದೆ ರಾಜಸ್ಥಾನದ (Rajasthan) ಕೋಟ್‌ಪುಟ್ಲಿಯಲ್ಲಿ (Kotputli) 700 ಅಡಿ ಆಳದ ಬೋರ್‌ವೆಲ್‌ಗೆ (Borewell) ಬಿದ್ದಿದ್ದ ಮೂರು ವರ್ಷದ ಬಾಲಕಿ ಬುಧವಾರ ಮೃತಪಟ್ಟಿದ್ದಾಳೆ.
ಚೇತನಾ (3) ಮೃತ ಬಾಲಕಿ. 10 ದಿನಗಳ ಸತತ ಕಾರ್ಯಾಚರಣೆಯ ಬಳಿಕ ಬಾಲಕಿಯನ್ನು ಬೋರ್‌ವೆಲ್‌ನಿಂದ ಹೊರತೆಗೆದು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟುಹೊತ್ತಿಗಾಗಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದರು. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾದ ಸಚಿನ್ ಗುತ್ತಿಗೆದಾರನಲ್ವಾ? ಕೇಸ್ ಮುಚ್ಚಿ ಹಾಕಲು ಸರ್ಕಾರದಿಂದ ಸಂಚು?
Advertisement
ಡಿಸೆಂಬರ್ 23ರಂದು ಮಧ್ಯಾಹ್ನ ಹೊರಗೆ ಆಟವಾಡುತ್ತಿದ್ದ ಸಂದರ್ಭ ಚೇತನಾ ಬೋರ್‌ವೆಲ್‌ಗೆ ಬಿದ್ದಿದ್ದಳು. ಸುಮಾರು 10 ನಿಮಿಷಗಳ ನಂತರ ಆಕೆಯ ಕೂಗು ಕೇಳಿದ ಮನೆಯವರು ಬಂದು ನೋಡಿದಾಗ ಬೋರ್‌ವೆಲ್‌ನಲ್ಲಿ ಬಾಲಕಿ ಸಿಲುಕಿರುವುದು ಕಂಡುಬಂದಿದೆ. ತಕ್ಷಣವೇ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆಗಳು, ವೈದ್ಯಕೀಯ ತಂಡದೊಂದಿಗೆ ಆಗಮಿಸಿ ಬಾಲಕಿಯನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದ್ದವು. ಇದನ್ನೂ ಓದಿ: ವರ್ಷದ ಮೊದಲ ದಿನ: 2 ಲಕ್ಷ ಜನರಿಂದ ಅಯೋಧ್ಯೆ ರಾಮನ ದರ್ಶನ!
Advertisement
Advertisement
ಕಾರ್ಯಾಚರಣೆ ವೇಳೆ ಪೈಪ್ ಮೂಲಕ ಬಾಲಕಿಗೆ ಆಮ್ಲಜನಕವನ್ನು ಪೂರೈಸಲಾಗಿತ್ತು. ಇದಕ್ಕೂ ಮೊದಲು ಹಗ್ಗಕ್ಕೆ ಜೋಡಿಸಲಾದ ಕಬ್ಬಿಣದ ರಿಂಗ್ ಬಳಸಿ ಬಾಲಕಿಯನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಕಾರ್ಯಾಚರಣೆಯನ್ನು ಚುರುಕುಗೊಳಿಸಲು, 50 ಟನ್ ಸಾಮರ್ಥ್ಯದ ಯಂತ್ರವನ್ನು ಬದಲಿಸಿ 100 ಟನ್ ಸಾಮರ್ಥ್ಯದ ಕ್ರೇನ್ ಅನ್ನು ಗುರುವಾರ ತರಲಾಯಿತು. ಶುಕ್ರವಾರ ಈ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದಾದ ಬಳಿಕ ಬಾಲಕಿಗೆ ಆಹಾರ ಮತ್ತು ಆಮ್ಲಜನಕವನ್ನು ಒದಗಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಆಕೆಯ ಸ್ಥಿತಿ ಹದಗೆಟ್ಟಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದೊಡ್ಡ ಜಯ| ಮುಂಬೈ ದಾಳಿಕೋರನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಕೋರ್ಟ್ ಆದೇಶ
Advertisement