ಜೈಪುರ: ಸಾಮಾನ್ಯವಾಗಿ ಹೊಸದಾಗಿ ಮದುವೆಯಾದ ವಧು, ವರನ ಜೊತೆಗೆ ಐಷಾರಾಮಿ ಕಾರಿನಲ್ಲಿ ಅತ್ತೆ ಮನೆಗೆ ಆಗಮಿಸುವುದನ್ನು ನಾವು ನೋಡಿರುತ್ತೇವೆ. ಆದರೆ ರಾಜಸ್ಥಾನದ ಬಾರ್ಮರ್‌ನಲ್ಲಿ ವಧು ತನ್ನ ಅತ್ತೆ ಮನೆಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದಿದ್ದಾರೆ.
Advertisement
ಹೌದು, ಬಾರ್ಮರ್ ಜಿಲ್ಲೆಯ ದಲಿತ ಕುಟುಂಬವೊಂದು ತಮ್ಮ ಸೊಸೆಯನ್ನು ಮೊದಲ ಬಾರಿಗೆ ಮನೆಗೆ ಕರೆತರಲು ಖಾಸಗಿ ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ಪಡೆದಿದೆ. ಡಿಸೆಂಬರ್ 14 ರಂದು ಬಾರ್ಮರ್ ಜಿಲ್ಲೆಯ ಗಡಿಯ ಸಮೀಪವಿರುವ ಬಿಧಾನಿಯನ್ ಕಿ ಧನಿಯಲ್ಲಿ ಧಿಯಾ ಅವರನ್ನು ತರುಣ್ ಮೇಘವಾಲ್ ವಿವಾಹವಾದರು. ಮರುದಿನ ನವ ದಂಪತಿ ಹೆಲಿಕಾಪ್ಟರ್‍ನಲ್ಲಿ ಬಾರ್ಮರ್ ನಗರದ ಜಸೇಧರ್ ಧಾಮ್‍ಗೆ ತೆರಳಿದ್ದಾರೆ. ಇದನ್ನು ಕಂಡು ಗ್ರಾಮದ ಜನರು ಆಶ್ಚರ್ಯಕ್ಕೊಳಗಾಗಿದ್ದು, ಈ ದೃಶ್ಯ ನೋಡಲು ಮುಗಿಬಿದ್ದಿದ್ದರು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರನ್ನು ಕರೆಸಬೇಕಾಗಿತ್ತು. ಇದನ್ನೂ ಓದಿ: ತುಂಬಾ ಜನರು ನನ್ನನ್ನ ಜೈಲಿಗೆ ಕಳುಹಿಸಲು ಸಿದ್ಧರಿದ್ದಾರೆ: ರಮೇಶ್ ಕುಮಾರ್
Advertisement
Advertisement
ಮದುವೆ ಸಮಾರಂಭದ ವೇಳೆ ದಲಿತ ವರರು ಕುದುರೆ ಸವಾರಿ ಮಾಡಿದರೆ ಥಳಿಸುವುದಾಗಿ ಬೆದರಿಕೆಯೊಡ್ಡಿದ್ದರಿಂದ ಈ ಕುಟುಂಬ ವಿಶೇಷವಾಗಿ ಆಲೋಚಿಸಿ ಹೆಲಿಕಾಪ್ಟರ್‌ನನ್ನೇ ಬಾಡಿಗೆ ಪಡೆದು ವಧುವನ್ನು ತಮ್ಮ ಮನೆಗೆ ಸ್ವಾಗತಿಸಿದ್ದಾರೆ. ಸೊಸೆಯನ್ನು ಹೆಲಿಕಾಪ್ಟರ್ ಮೂಲಕ ಬರಮಾಡಿಕೊಳ್ಳಬೇಕು ಎಂಬ ಕನಸ್ಸುನ್ನು ಹೊಂದಿದ್ದ ಅತ್ತೆ 1ಲಕ್ಷ ರೂ. ಹೆಲಿಕಾಪ್ಟರ್ ಬುಕ್ ಮಾಡಿ ಸೊಸೆಯನ್ನು ಮನೆಗೆ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಇಸ್ಲಾಮಾಬಾದ್‍ನಲ್ಲಿ 3 ದಿನ ಮೊಬೈಲ್ ಸೇವೆ ಸ್ಥಗಿತ