ಜೈಪುರ್: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಲಿ ಅಂತಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚಾದರ್ ಅರ್ಪಿಸಿದ್ದಾರೆ.
ರಾಜಸ್ಥಾನ ಅಜ್ಮೀರ್ ನಲ್ಲಿರುವ 13ನೇ ಶತಮಾನದ ಸೂಫಿ ಸಂತ ಖ್ವಾಜಾ ಮೊಹಿನ್ನುದ್ದಿನ್ ಚಿಷ್ಠಿ ದರ್ಗಾಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ, ಚಾದರ್ ಸಮರ್ಪಿಸಿದ್ದಾರೆ. ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನು ಓದಿ: ಬಿಜೆಪಿ ತೊರೆದ ನಾಯಕರೇ ಕಾಂಗ್ರೆಸ್‍ಗೆ ಅಸ್ತ್ರವಾದ್ರು
Advertisement
Advertisement
ಈ ವೇಳೆ ರಾಜಸ್ಥಾನ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲಟ್ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹಾಜರಿದ್ದರು. ಈ ಮೂಲಕ ರಾಹುಲ್ ಗಾಂಧಿ ವಿಧಾನಸಭೆ ಗೆಲುವಿಗಾಗಿ ದರ್ಗಾ ಮೊರೆ ಹೋಗಿದ್ದು, ಬಳಿಕ ಪುಷ್ಕರ್ ಗೆ ತೆರಳಿ ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನು ಓದಿ: ಬಿಜೆಪಿಯಿಂದ ಮತ್ತೊಬ್ಬ ನಾಯಕ ಕಾಂಗ್ರೆಸ್‍ಗೆ ಜಂಪ್
Advertisement
ರಾಜಸ್ಥಾನ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ನವೆಂಬರ್ 12ರಂದು ಪೂರ್ಣಗೊಂಡಿದ್ದು, ಡಿಸೆಂಬರ್ 7ರಂದು ಮತದಾನ ನಡೆಯಲಿದೆ. ಹೀಗಾಗಿ ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕೆ ಇಳಿದಿದ್ದಾರೆ. ಅಷ್ಟೇ ಅಲ್ಲದೆ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಮಾನವೇಂದ್ರ ಸಿಂಗ್ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ.
Advertisement
#Rajasthan: Visuals of Congress President #RahulGandhi at Ajmer Sharif Dargah pic.twitter.com/pIPqiukOSU
— ANI (@ANI) November 26, 2018
Rajasthan: Congress President Rahul Gandhi offers prayers at Brahma Temple and on the banks of Brahma Sarovar in Pushkar. pic.twitter.com/M8xUlRfDhg
— ANI (@ANI) November 26, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv