ನವದೆಹಲಿ: ರಾಜಸ್ಥಾನ (Rajasthan) ಜನತೆ ಪ್ರತಿಬಾರಿಯಂತೆ ಈ ಬಾರಿಯೂ ಸರ್ಕಾರವನ್ನು ಬದಲಾಯಿಸುವುದು ನಿಶ್ಚಿತ. ಚುನಾವಣೋತ್ತರ ಸಮೀಕ್ಷೆಗಳು (Exit Poll) ಈ ಬಾರಿ ಕಾಂಗ್ರೆಸ್ (Congress) ಸೋಲಲಿದೆ ಎಂದು ಹೇಳಿವೆ.
ಸಿಎಂ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಮಧ್ಯೆ ಸಂಘರ್ಷದಿಂದಾಗಿ ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿವೆ. ಒಟ್ಟು 199 ಸ್ಥಾನಗಳಿರುವ ರಾಜಸ್ಥಾನದಲ್ಲಿ ಸರಳ ಬಹುಮತಕ್ಕೆ 100 ಸ್ಥಾನಗಳ ಅಗತ್ಯವಿದೆ.
Advertisement
Advertisement
ಯಾವ ಸಮೀಕ್ಷೆ ಏನು ಹೇಳಿವೆ?
ಜನ್‌ಕೀ ಬಾತ್: ಬಿಜೆಪಿ 100-122, ಕಾಂಗ್ರೆಸ್ 62-85
ಟೈಮ್ಸ್ ನೌ: ಬಿಜೆಪಿ 108-128, ಕಾಂಗ್ರೆಸ್ 56-72
ಪೂಲ್‌ಸ್ಟಾರ್ಟ್ : ಬಿಜೆಪಿ 100-110, ಕಾಂಗ್ರೆಸ್ 90-100
ಇಂಡಿಯಾ ಟುಡೇ: ಬಿಜೆಪಿ 80-100, ಕಾಂಗ್ರೆಸ್ 86-106, ಬಿಎಸ್‌ಪಿ 1-2
Advertisement
2018ರ ಚುನಾವಣೆಯಲ್ಲಿ ಕಾಂಗ್ರೆಸ್ 100, ಬಿಜೆಪಿ 73, ಬಿಎಸ್‌ಪಿ 6, ಆರ್‌ಎಲ್‌ಪಿ 3, ಪಕ್ಷೇತರ ಅಭ್ಯರ್ಥಿಗಳ ಪೈಕಿ 13 ಮಂದಿ ಜಯಗಳಿಸಿದ್ದರು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ – ಬಿಜೆಪಿಯಿಂದ ಟಫ್ ಸ್ಪರ್ಧೆ
Advertisement
ಕಾಂಗ್ರೆಸ್ ಅಧಿಕಾರ ಹಿಡಿದ ಬಳಿಕ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಪಿಸಿಸಿ ಆಧ್ಯಕ್ಷರಾಗಿದ್ದ ಸಚಿನ್ ಪೈಲಟ್ ಹಾಗೂ ಸಿಎಂ ಗೆಹ್ಲೋಟ್ ನಡುವೆ ಅಧಿಕಾರಕ್ಕಾಗಿ ಶೀತಲ ಸಮರ ನಡೆಯುತ್ತಲೇ ಇತ್ತು. ಸರ್ಕಾರದ ವಿರುದ್ಧವೇ ಸಚಿನ್ ಪೈಲಟ್ ಧರಣಿ ನಡೆಸಿದ್ದರು. ಈ ಕಿತ್ತಾಟದ ಪರಿಣಾಮ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಹಿಡಿಯಲಿದೆ ಎಂದು ಸಮೀಕ್ಷೆಗಳು ಹೇಳಿವೆ.