ಬೆಂಗಳೂರು: ಹಿಂದೂ ವ್ಯಕ್ತಿ ಹತ್ಯೆ ಬಗ್ಗೆ ಮಾತನಾಡಲು ಬುದ್ಧಿ ಜೀವಿಗಳ ಬಾಯಿಗೆ ಲಕ್ವಾ ಹೊಡೆದಿದೆಯಾ? ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.
ರಾಜಸ್ಥಾನದಲ್ಲಿ ಹಿಂದೂ ವ್ಯಕ್ತಿಯ ಹತ್ಯೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಧ್ಯಮಗಳಲ್ಲಿ ದೃಶ್ಯ ನೋಡಿದ್ದೇನೆ. ಅಂತಹ ದೃಶ್ಯ ನೋಡಬಾರದು. ಅತ್ಯಂತ ಕ್ರೂರ ಹಾಗೂ ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ. ಅವರು ಮನುಷ್ಯರು ಹೌದೋ ಅಲ್ವೋ ಎಂಬ ಅನುಮಾನ ಶುರುವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಟೈಲರ್ ಕೊಲೆಗಡುಕರನ್ನು ಗುಂಡಿಟ್ಟು ಹತ್ಯೆ ಮಾಡ್ಬೇಕು: ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ
Advertisement
Advertisement
ಈ ರೀತಿಯ ರಾಕ್ಷಸಿ ಪೈಶಾಚಿಕ ಕೃತ್ಯ ಮಾಡುವಂತವರಿಗೆ ಕಠಿಣ ಶಿಕ್ಷೆ ಕೊಡಿಸಲು ಸಾಧ್ಯ ಆಗುತ್ತೆ. ಅದನ್ನು ಯೋಚನೆ ಮಾಡಬೇಕು. ಕಾಂಗ್ರೆಸ್‍ನ ರಾಜಸ್ಥಾನ ಸರ್ಕಾರ ಇದಕ್ಕೆ ಖಂಡಿತವಾಗಿ ಉತ್ತರಕೊಡಬೇಕು. ಈ ವ್ಯಕ್ತಿಗಳು ರಾಜ್ಯದಲ್ಲಿ ಬೆಳೆದಿದ್ದಾರೆ. ಆ ಶಕ್ತಿಗಳನ್ನು ಮಟ್ಟ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದರು.
Advertisement
ಈ ಘಟನೆಯನ್ನ ಖಂಡಿತವಾಗಿ ಇಡೀ ಜನ ಸಮುದಾಯ ಖಂಡಿಸಬೇಕು. ಆಗ ಈ ದ್ರೋಹಿಗಳು ತಲೆ ಎತ್ತದಂತೆ ಆಗುತ್ತೆ. ಇದು ಅತ್ಯಂತ ದುರದೃಷ್ಟಕರ ಸಂಗತಿ. ಮತಾಂಧ ಶಕ್ತಿಗಳು ಧರ್ಮ ಅಂದರೆ ಕೊಲೆ, ರಕ್ತಪಾತ ಎಂದು ಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
ಈ ರೀತಿಯ ತಿಳುವಳಿಕೆಯಿಂದ ಇಡೀ ಜಗತ್ತಿನಲ್ಲಿ ಅವರು ಸುಖವಾಗಿಲ್ಲ. ಜಗತ್ತಿನಲ್ಲಿ ಯಾರಿಗೂ ಸುಖವಾಗಿ ಶಾಂತಿಯಿಂದ ಇರಲು ಬಿಡುತ್ತಿಲ್ಲ. ಎಲ್ಲ ಕಡೆ ಈ ಕೃತ್ಯ ನಡೆಯುತ್ತಿದೆ. ಈ ಮತಾಂಧ ಶಕ್ತಿಗಳು ತಲೆ ಎತ್ತದಂತೆ ಎಲ್ಲ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು.
ಆರೋಪಿಗಳನ್ನು ಎನ್‍ಕೌಂಟರ್ ಮಾಡಿ ಎಂಬ ಮುತಾಲಿಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುತಾಲಿಕ್ ಏನ್ ಹೇಳ್ತಾರೆ ಎಂಬುವುದು ಮುಖ್ಯ ಅಲ್ಲ. ದೇಶದಲ್ಲಿ ಸಂವಿಧಾನ, ಕಾನೂನು, ಶಿಕ್ಷೆ ಎಲ್ಲವೂ ಇದೆ. ಕೊಲೆ ಮಾಡಿದವರು ಈ ಸಂವಿಧಾನ, ಕಾನೂನಿಂದ ಲಾಭ ಇಲ್ಲ ಅಂತ ತಿಳಿದುಕೊಂಡವರು. ನಾವೇ ಶಿಕ್ಷೆ ಕೊಡುವವರು ಅಂತಾನೇ ಹೀಗೆ ಮಾಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಏನ್ ಮಾಡಬೇಕೋ ಅದನ್ನು ಮಾಡ್ತೀವಿ ಎಂದು ತಿಳಿಸಿದರು.
ನಮಗೂ ಸಿಟ್ಟು ಬರುತ್ತೆ, ನೋವು ಆಗುತ್ತೆ. ಇಂತಹ ಮತಾಂಧ ಶಕ್ತಿಗಳಿಗೆ ಮೆಸೇಜ್ ಕೊಡಬೇಕು. ಇದು ಮಾತನಾಡಲಾರದಂತ ದೃಶ್ಯ. ಮೌನವಾಗಿ ಒಂದು ಕ್ಷಣ ಯೋಚನೆ ಮಾಡಬೇಕು. ಮಾತಿನಲ್ಲಿ ಘಟನೆ ಖಂಡಿಸಲು ಆಗಲ್ಲ ಎಂದು ಟೀಕಿಸಿದರು.
ಅಂದು ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಹಣ್ಣು ಒಡೆದಿದ್ದಕ್ಕೆ ವಿರೋಧ ಪಡೆಸಿದವರು, ಇದಕ್ಕೆ ಯಾಕೆ ವಿರೋಧ ಮಾಡಲ್ಲ ಎಂಬ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಬಹಳಷ್ಟು ಬುದ್ಧಿ ಜೀವಿಗಳು ಅಂತಹ ಸಂದರ್ಭದಲ್ಲಿ ಮಾತನಾಡಿದರು. ಈಗ ಅವರ ನಾಲಗೆಗೆ ಲಕ್ವಾ ಹೊಡೆದಿದ್ಯಾ? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಇದೊಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರು: ಕಟೀಲ್
ಈಗ ಎಲ್ಲರೂ ಮಾತನಾಡಬೇಕು. ಇದನ್ನ ಖಂಡಿಸಬೇಕು. ಯಾವುದೋ ಒಂದು ವರ್ಗವನ್ನ ಖಂಡಿಸುವುದು ಇನ್ನೊಂದು ವರ್ಗ ಮಾಡಿದಾಗ ಮೌನವಹಿಸುವುದು ಸರಿಯಲ್ಲ. ಇದು ಸಮಾಜದಲ್ಲಿ ಬಹಳ ಅಪಾಯ. ಇದು ಅಪರಾಧ ಅಲ್ವಾ, ಅಮಾನವೀಯ ಸಂಗತಿ ಅಲ್ವಾ? ಇದಕ್ಕೆ ಏನ್ ಹೇಳ್ತಾರೋ ನೋಡಬೇಕು ಎಂದು ಬುದ್ಧಿ ಜೀವಿಗಳು ಹಾಗೂ ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ತಿರುಗೇಟು ಕೊಟ್ಟರು.
ಘಟನೆ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಖಂಡಿಸೋದು ಸಹಜ. ಎಲ್ಲರೂ ಈ ಘಟನೆ ಖಂಡಿಸಬೇಕು. ಪಕ್ಷ, ಧರ್ಮ ಮೀರಿದಂತಹ ಮಾನವೀಯತೆ ಪ್ರಶ್ನೆ. ಹೀಗಾಗಿ ಎಲ್ಲರೂ ಖಂಡಿಸಬೇಕು ಎಂದು ಕೇಳಿಕೊಂಡರು.