ಜೈಪುರ: ರಾಜಸ್ಥಾನದ ಪಠ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರನ್ನು ಭಯೋತ್ಪಾದನೆಯ ಜನಕ ಎಂದು ಬಿಂಬಿಸಿದ್ದು ವಿವಾದಕ್ಕೆ ಕಾರಣವಾಗಿದೆ.
8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬರುವ, 18 ಹಾಗೂ 19ನೇ ಶತಮಾನದಲ್ಲಿ ನಡೆದ ರಾಷ್ಟ್ರೀಯ ಚಳುವಳಿ ಅಧ್ಯಾಯದಲ್ಲಿ ಬಾಲಗಂಗಾಧರ್ ತಿಲಕ್ ಅವರನ್ನು ಭಯೋತ್ಪಾದನೆಯ ಜನಕ ಎಂದು ಬರೆಯಲಾಗಿದೆ. 22ನೇ ಅಧ್ಯಾಯ, ಪುಟ ಸಂಖ್ಯೆ 267 ರಲ್ಲಿ, ತಿಲಕ್ ಅವರು ರಾಷ್ಟ್ರೀಯ ಚಳುವಳಿಗೆ ಮಾರ್ಗದರ್ಶನ ನೀಡಿದ್ದಾರೆ. ಹೀಗಾಗಿ ಅವರನ್ನು ಭಯೋತ್ಪಾದನೆಯ ಜನಕ ಎಂದು ಕರೆಯಲಾಗುತ್ತದೆ ಎನ್ನುವ ಸಾಲುಗಳಿವೆ.
Advertisement
ಈ ಸಾಲುಗಳಲ್ಲದೇ, ತಿಲಕರು ದೇಶದಲ್ಲಿಯೇ ವಿನೂತವಾದ ಜಾಗೃತಿ ಮೂಡಿಸಿದರು. ಜನಸಾಮಾನ್ಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು. ಇದು ಬ್ರಿಟೀಷರ ಕಣ್ಣಿಗೆ ಗುರಿಯಾಗಿತ್ತು ಎಂದು ಪುಸ್ತಕದಲ್ಲಿ ಬರೆಯಲಾಗಿದೆ. ಈ ಪುಸ್ತಕವನ್ನು ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಮಂಡಳಿ (ಆರ್ ಬಿ ಎಸ್ ಇ)ಯಿಂದ ಮಾನ್ಯತೆ ಪಡೆದ ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ವಿತರಿಸಲು ಮಥುರಾ ಮೂಲದ ಮುದ್ರಣ ಸಂಸ್ಥೆ ಮುದ್ರಿಸಿತ್ತು.
Advertisement
ಭಾಷಾಂತರದಿಂದ ಈ ಎಡವಟ್ಟಾಗಿದ್ದು, ನಮ್ಮ ಗಮನಕ್ಕೆ ಬಂದಿದೆ. ಪರಿಷ್ಕøತ ಆವೃತ್ತಿಯಲ್ಲಿ ತಪ್ಪನ್ನು ಸರಿಪಡಿಸಲಾಗಿದೆ ಎಂದು ಪ್ರಕಾಶನ ಸಂಸ್ಥೆಯ ಅಧಿಕಾರಿ ರಾಜ್‍ಪಾಲ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
Advertisement
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿ ತಪ್ಪು ಮಾಡಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಾಜಸ್ಥಾನ ಸರ್ಕಾರಕ್ಕೆ ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ.