ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಒಎಸ್‍ಡಿ (Officer on Special Duty) ಲೋಕೇಶ್ ಶರ್ಮಾ ಅವರು ನಿನ್ನೆ ರಾತ್ರಿ ರಾಜೀನಾಮೆ ಸಲ್ಲಿಸಿದ್ದಾರೆ.
ಪಂಜಾಬ್‍ನಲ್ಲಿ ನಾಯಕತ್ವದ ಬದಲಾವಣೆಗೆ ಕಾಂಗ್ರೆಸ್ ವಿರುದ್ಧ ಪರೋಕ್ಷ ಟೀಕೆ ಮಾಡಿದ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಶರ್ಮಾ ರಾಜೀನಾಮೆ ನೀಡಿದ್ದಾರೆ. ಬಲಿಷ್ಠ ವ್ಯಕ್ತಿಯನ್ನು ಅಸಹಾಯಕರನ್ನಾಗಿಸಿ, ಸಾಧಾರಣ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಏರಿಸಲಾಗಿದೆ ಎಂದು ಶರ್ಮಾ ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಕ್ಷಮೆಯಾಚಿಸಿ ರಾಜಸ್ಥಾನ ಮುಖ್ಯಮಂತ್ರಿಗೆ ವಿಶೇಷ ಕರ್ತವ್ಯದಲ್ಲಿರುವ ಅಧಿಕಾರಿ ಶನಿವಾರ ರಾತ್ರಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗರನ್ನು ಕಾಂಗ್ರೆಸ್ ಸಂಪರ್ಕಿಸುತ್ತಿರುವುದು ನಿಜ: ಯಡಿಯೂರಪ್ಪ
Advertisement
कैप्टन साहब पार्टी के सम्मानित नेता हैं एवं मुझे उम्मीद है कि वो आगे भी पार्टी का हित आगे रखकर ही कार्य करते रहेंगे। pic.twitter.com/4bPmB4T3bP
— Ashok Gehlot (@ashokgehlot51) September 19, 2021
Advertisement
ಅವರು ಪ್ರಬಲರನ್ನು ದುರ್ಬಲರನ್ನಾಗಿಸುತ್ತಾರೆ, ಅವರು ಜನರನ್ನು ಬಲವಂತವಾಗಿ ಒತ್ತಾಯಿಸುತ್ತಾರೆ, ಅಂತಿಮವಾಗಿ ಬೇಲಿಯು ಹೊಲವನ್ನು ಮೇಯುತ್ತದೆ, ಆ ಬೆಳೆಯನ್ನು ಉಳಿಸಲು ಯಾರ ಕೈಲಿ ಸಾಧ್ಯ ಎಂದು ಶರ್ಮಾ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಶ್ವಾನಕ್ಕಾಗಿ ವಿಮಾನದ ಸಂಪೂರ್ಣ ಬ್ಯುಸಿನೆಸ್ ಕ್ಲಾಸಿ ಕ್ಯಾಬಿನ್ ಬುಕ್ ಮಾಡಿದ ಮಾಲೀಕ
Advertisement
मजबूत को मजबूर, मामूली को मग़रूर किया जाए…
बाड़ ही खेत को खाए, उस फसल को कौन बचाए !!
— Lokesh Sharma (@_lokeshsharma) September 18, 2021
Advertisement
ರಾಜೀನಾಮೆ ಪತ್ರದಲ್ಲಿ ಶರ್ಮಾ ಅವರು, ನಾನು 2010 ರಿಂದ ಟ್ವಿಟ್ಟರ್‌ನಲ್ಲಿ ಸಕ್ರಿಯನಾಗಿದ್ದೇನೆ. ಆದರೆ ಪಕ್ಷದ ವ್ಯಾಪ್ತಿಯನ್ನು ಮೀರಿ ಟ್ವೀಟ್ ಮಾಡಿಲ್ಲ ಎಂದು ಹೇಳಿದ್ದಾರೆ.
राजस्थान विवाहों का अनिवार्य रजिस्ट्रीकरण (संशोधन) विधेयक, 2021 बाल विवाह को प्रोत्साहित नही करता बल्कि विवाह पंजीयन होने से सरकारी लाभ व कानूनी अधिकार प्रदत्त करता है…
विधेयक को लेकर भ्रांतियां फैलाई जा रही हैं जबकि वास्तविकता ये है: pic.twitter.com/3uqcGN5VEE
— Lokesh Sharma (@_lokeshsharma) September 18, 2021
ರಾಜಸ್ಥಾನ ಸಿಎಂ ಅವರ ಒಎಸ್‍ಡಿ ಆಗಿ ನೇಮಕವಾದ ಬಳಿಕ ಯಾವುದೇ ರಾಜಕೀಯ ಟ್ವೀಟ್ ಪೋಸ್ಟ್ ಮಾಡಿಲ್ಲ. ಆದರೆ ನನ್ನ ಟ್ವೀಟ್ ನಿಂದ ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ಸರ್ಕಾರಕ್ಕೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದರು.