ಜೈಪುರ: ಉತ್ತರಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ(BJP) ಗೆಲುವಿಗೆ ಬಹುಜನ ಸಮಾಜ ಪಕ್ಷವೇ(BSP) ಕಾರಣ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 90ರ ದಶಕದಲ್ಲಿ ಬಿಎಸ್‍ಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮಾಡಿದ ದೊಡ್ಡ ತಪ್ಪಾಗಿದೆ. ಆ ಸಮಯದಲ್ಲಿ ಬಿಎಸ್‍ಪಿಗೆ ಮೂರನೇ ಎರಡರಷ್ಟು ಸ್ಥಾನಗಳನ್ನು ನೀಡಲಾಯಿತು. ಇದರಿಂದಾಗಿ ಕಾಂಗ್ರೆಸ್ ಜೂನಿಯರ್ ಪಕ್ಷವಾಯಿತು. ಇದೇ ನಾವು ಮಾಡಿದ ದೊಡ್ಡ ತಪ್ಪಾಗಿದ್ದು, ಇಲ್ಲಿಯವರೆಗೆ ನಮಗೆ ಇದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
Advertisement
Advertisement
ಮಾಯವತಿಯ ಬಿಎಸ್‍ಪಿ ಪಕ್ಷವು ನಮ್ಮನ್ನು ವಂಚಿಸಿದೆ ಮತ್ತು ಬಿಜೆಪಿಯನ್ನು ಬೆಂಬಲಿಸಿದೆ ಎಂದು ವಾಗ್ದಾಳಿ ನಡೆಸಿದರು. ಬಿಎಸ್‍ಪಿ ಪಕ್ಷವು ಉತ್ತರಪ್ರದೇಶದಲ್ಲಿ ಕೇವಲ ಒಂದು ಸೀಟನ್ನು ಗೆಲ್ಲುತ್ತದೆ ಎಂದು ಯಾರೂ ಭಾವಿಸಿರಲಿಲ್ಲ ಎಂದರು. ಇದನ್ನೂ ಓದಿ: 2 ಕೋಟಿ ಸಾಲ ಮಾಡಿರುವ ಸಿದ್ದರಾಮಯ್ಯಗೆ ಭಾರತ ರತ್ನ ನೀಡಲಿ: ಸಾ.ರಾ ಮಹೇಶ್
Advertisement
Advertisement
ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಅವರು ನಡೆಸಿದ ಪ್ರಚಾರವು ಒಂದು ಸಮರ್ಥ ಸಂದೇಶವಾಗಿದೆ. ಚುನಾವಣೆಯಲ್ಲಿ ಸೋಲು ಗೆಲುವು ಬೇರೆ ವಿಷಯ. ಆದರೆ 403 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಅದರಲ್ಲೂ ಶೇ.40ರಷ್ಟು ಮಹಿಳೆಯರಿಗೆ ಟಿಕೆಟ್ ನೀಡಿರುವುದೇ ದೊಡ್ಡ ಸಾಧನೆಯಾಗಿದೆ ಎಂದರು. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ದ – ಚೀನಾದ ಮಿಲಿಟರಿ ನೆರವು ಕೇಳಿದ ರಷ್ಯಾ