ಜೈಪುರ: ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಪುನಾರಚನೆಯಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರದ 15 ಮಂದಿ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Advertisement
ನಿನ್ನೆ ಸಂಪುಟ ಪುನಾರಚನೆ ಹಿನ್ನೆಲೆ ಅಶೋಕ್ ಗೆಹ್ಲೋಟ್ ತಮ್ಮ ಸರ್ಕಾರದ ಎಲ್ಲಾ ಸಚಿವರ ರಾಜೀನಾಮೆಯನ್ನು ಪಡೆದಿದ್ದರು. ಇಂದು 15 ಮಂದಿಯನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಇದನ್ನೂ ಓದಿ: ರಾಜಸ್ಥಾನ : ಎಲ್ಲ ಸಚಿವರಿಂದ ರಾಜೀನಾಮೆ ಪಡೆದ ಗೆಹ್ಲೋಟ್
Advertisement
Advertisement
ಕೆಲದಿನಗಳಿಂದ ಸಚಿನ್ ಪೈಲಟ್ ಬಣ ಸಿಎಂ ತಮ್ಮ ಬಣದ ಶಾಸಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿತ್ತು. ನಂತರ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮತ್ತು ಹಿರಿಯ ನಾಯಕರ ನಡುವೆ ಹಲವು ಸುತ್ತಿನ ಸಭೆಯ ಬಳಿಕ ಸಂಪುಟ ಪುನಾರಚನೆ ಆಗಿದೆ. ಗೆಹ್ಲೋಟ್ ಅವರು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ನಾಯಕರನ್ನು ಭೇಟಿಯಾದ ಬಳಿಕ ಈ ನಿರ್ಧಾರ ಕೈಗೊಂಡು ಇಂದು ಪ್ರಮಾಣ ವಚನ ಕಾರ್ಯಕ್ರಮ ನಡೆದಿದೆ. ಇದನ್ನೂ ಓದಿ: ರಾಜಕೀಯ ನಾಯಕರಿಗೆ ಕೈ ಮುಗಿದ ಜೂನಿಯರ್ ಎನ್‍ಟಿಆರ್
Advertisement
A total of 15 Rajasthan leaders, including 11 cabinet ministers, to take oath as part of the state cabinet reshuffle pic.twitter.com/1crm8Rzfje
— ANI (@ANI) November 20, 2021
ರಾಜಸ್ಥಾನ ಸರ್ಕಾರ ರಚನೆಯಾದ ಬಳಿಕ ತಮ್ಮ ಬೆಂಬಲಿಗರನ್ನು ಗೆಹ್ಲೋಟ್ ಕಡೆಗಣಿಸುತ್ತಿದ್ದಾರೆ ಎಂದು ಸಚಿನ್ ಪೈಲಟ್ ಹೈಕಮಾಂಡ್‍ಗೆ ನಿರಂತರ ದೂರು ನೀಡಿದ್ದರು. ಹೀಗಾಗಿ ಈ ಬಾರಿ ಪುನಾರಚನೆಯಲ್ಲಿ 5 ಮಂದಿ ಸಚಿನ್ ಪೈಲಟ್ ಬೆಂಬಲಿಗರಿಗೆ ಮಂತ್ರಿಸ್ಥಾನ ಕೊಡಲಾಗಿದೆ. 11 ಜನ ಕ್ಯಾಬಿನೆಟ್ ಸಚಿವರು ಸರ್ಕಾರದಲ್ಲಿ ಇದ್ದಾರೆ. ಈ ಹಿಂದೆ ಸಚಿವರಾಗಿದ್ದವರ ಪೈಕಿ 3 ಜನ ಗೋವಿಂದ್ ಸಿಂಗ್ ದೋತಸ್ರಾ, ಹರೀಶ್ ಚೌಧರಿ ಮತ್ತು ರಘು ಶರ್ಮಾ ಅವರನ್ನು ಕೈ ಬಿಟ್ಟು ಉಳಿದಂತೆ ಈ ಹಿಂದೆ ಇದ್ದ ಸಚಿವರಿಗೆ ಮತ್ತೆ ಸಚಿವ ಸ್ಥಾನ ಕೊಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ – ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ