ಜೈಪುರ: ಲಂಪಿ ವೈರಸ್‌ನಿಂದಾಗಿ (Lumpy Virus) ರಾಜಸ್ಥಾನದಾದ್ಯಂತ (Rajasthan) ಹಸುಗಳು ಸಾವನ್ನಪ್ಪುತ್ತಿವೆ. ಈ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸಲುವಾಗಿ ಬಿಜೆಪಿ (BJP) ಶಾಸಕರೊಬ್ಬರು (MLA) ಹಸುವಿನೊಂದಿಗೆ (Cow) ವಿಧಾನಸಭೆಗೆ (Assembly) ಆಗಮಿಸಿದ್ದಾರೆ. ಆದರೆ ಹಸು ವಿಧಾನಸೌಧದ ಆವರಣವನ್ನು ಪ್ರವೇಶಿಸುತ್ತಿದ್ದಂತೆಯೇ ಪರಾರಿಯಾಗಿದೆ.
ಬಿಜೆಪಿ ಶಾಸಕ ಸುರೇಶ್ ಸಿಂಗ್ ರಾವತ್ ಅವರು ಸೋಮವಾರ ರಾಜಸ್ಥಾನ ವಿಧಾನಸಭೆಗೆ ಹಸುವಿನೊಂದಿಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಮಾಧ್ಯಮದವರು ಅಡ್ಡಗಟ್ಟಿ ಮಾತನಾಡಿಸಿದ್ದಾರೆ. ಈ ವೇಳೆ ಅವರು ಕೈಯಲ್ಲಿ ಕೋಲೊಂದನ್ನು ಹಿಡಿದುಕೊಂಡು, ಹಸುಗಳು ಲಂಪಿ ವೈರಸ್‌ನಿಂದ ಬಳಲುತ್ತಿವೆ. ಆದರೆ ರಾಜ್ಯ ಸರ್ಕಾರ ಗಾಢ ನಿದ್ರೆಯಲ್ಲಿದೆ. ಹಸುಗಳಿಗೆ ಮಾರಕವಾಗಿರುವ ಕಾಯಿಲೆಯತ್ತ ಗಮನ ಸೆಳೆಯಲು ನಾನು ಹಸುವನ್ನು ವಿಧಾನಸೌಧಕ್ಕೆ ತಂದಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೋಲ್ಡ್ ರಿಕವರಿಗೆ ಬಂದ ತಮಿಳುನಾಡು ಪೊಲೀಸರು ಚಿಕ್ಕಬಳ್ಳಾಪುರದಲ್ಲಿ ಲಾಕ್
Advertisement
What happened when Bjp mla from Pushkar reached Rajasthan assembly with a cow???????????? pic.twitter.com/I7UHaxjqQ6
— Surbhi✨ (@SurrbhiM) September 20, 2022
Advertisement
ಈ ವೇಳೆ ಹಸು ತನಗೆ ಕಟ್ಟಿದ್ದ ಹಗ್ಗವನ್ನು ಎಳೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದೆ. ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Advertisement
ಪಶುಸಂಗೋಪನಾ ಇಲಾಖೆಯ ಅಂಕಿಅಂಶಗಳ ಪ್ರಕಾರ ಸೋಮವಾರದ ವರೆಗೆ ರಾಜಸ್ಥಾನದಲ್ಲಿ 59,027 ಜಾನುವಾರುಗಳು ಚರ್ಮದ ಕಾಯಿಲೆಯಿಂದ ಸಾವನ್ನಪ್ಪಿವೆ ಮತ್ತು 13,02,907 ಬಾಧಿತವಾಗಿವೆ. ಇದನ್ನೂ ಓದಿ: 24.5 ಕಿ.ಮೀ ಮೈಲೇಜ್ ನೀಡ್ತಿದ್ದ ಮಾರುತಿ 800ಸಿಸಿ ಎಂಜಿನ್‌ಗೆ ಗುಡ್ ಬೈ