ಜೈಪುರ: ಸುಮಾರಿಗೆ ರಾಜಸ್ಥಾನದ ಜೈಪುರದಲ್ಲಿ (Jaipur Earthquake) ಇಂದು (ಶುಕ್ರವಾರ) ಮುಂಜಾನೆ 4 ಗಂಟೆ ಸುಮಾರಿಗೆ ಪ್ರಬಲ ಭೂಕಂಪನ (Earthquake) ಸಂಭವಿಸಿದೆ. ಭೂಕಂಪನದ ತೀವ್ರತೆಯನ್ನು 4.4 ರಿಕ್ಟರ್ ಮಾಪಕದಲ್ಲಿ ಅಳೆಯಲಾಗಿದೆ. ದೆಹಲಿ-ಎನ್‍ಸಿಆರ್ ನಲ್ಲೂ ಭೂಕಂಪನದ ಅನುಭವವಾಗಿದೆ.
Rajasthan | An earthquake of Magnitude 4.4 strikes Jaipur
(CCTV Visuals)
(Video source – locals) pic.twitter.com/MOudTvT8yF
— ANI (@ANI) July 20, 2023
ಭೂಕಂಪನಗಳನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆಯಾದ ರಾಷ್ಟ್ರೀಯ ಭೂಕಂಪನಶಾಸ್ತ್ರದ ಪ್ರಕಾರ, ಮುಂಜಾನೆ 4:10ಕ್ಕೆ ಮೊದಲ ಬಾರಿ (3.01 ತೀವ್ರತೆ), 4:23ಕ್ಕೆ 2ನೇ ಬಾರಿ (3.4 ತೀವ್ರೆತೆ) ಹಾಗೂ 4:25ಕ್ಕೆ ಮೂರನೇ ಬಾರಿ (4.4 ತೀವ್ರತೆ) ಭೂಮಿ ಕಂಪಿಸಿದೆ. ಜೈಪುರದ ಜನರು ಈ ವೇಳೆ ಗಾಢ ನಿದ್ದೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಇಡೀ ನಗರ ನಡುಗಿದ್ದು, ಜನ ಭಯದಿಂದ ಮನೆಗಳಿಂದ ಹೊರಬಂದಿದ್ದಾರೆ.
ರಾಸ್ಪ್ಬೆರಿ ಶೇಕ್ ಎಂಬ ಖಾಸಗಿ ಭೂಕಂಪನ ಸಂಸ್ಥೆಯ ಪ್ರಕಾರ, ಜೈಪುರದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಇದೆ. ಇದರ ಅನುಭವವು ಸುಮಾರು 35 ಕಿಮೀ ದೂರದಲ್ಲಿರುವ ಬಾಸಿ, 51 ಕಿಮೀ ದೂರದಲ್ಲಿರುವ ಸಂಭಾರ್, 53 ಕಿಮೀ ದೂರದಲ್ಲಿರುವ ಮನೋಹರಪುರ ಮತ್ತು 55 ಕಿಮೀ ದೂರದಲ್ಲಿರುವ ರಿಂಗಾಸ್‍ನಲ್ಲಿಯೂ ಆಗಿದೆ. ಇದರೊಂದಿಗೆ ದೂರದ ದೌಸಾ, ಶಹಪುರ, ನಿವಾಯಿ ಮುಂತಾದ ಪ್ರದೇಶಗಳಲ್ಲಿಯೂ ಕಂಪನದ ಅನುಭವವಾಗಿದೆ. ಸದ್ಯ ಈ ಭೂಕಂಪನದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]