ಜೈಪುರ: ಒಬ್ಬ ತಾಯಿಗೆ ತನ್ನ ಮಗು ಅವಳನ್ನು ಎಷ್ಟು ಪ್ರೀತಿಸುತ್ತೆ, ಗೌರವಿಸುತ್ತೆ ಎಂಬುದು ದೊಡ್ಡ ಉಡುಗೊರೆಯಾಗಿರುತ್ತೆ. ತನ್ನ ತಾಯಿಯ ಕನಸನ್ನು ಮಕ್ಕಳು ಈಡೇರಿಸಿದರೆ ಆಕೆಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಅದೇ ರೀತಿಯ ಸುದ್ದಿಯೊಂದು ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ. ಇಲ್ಲೊಬ್ಬ ಮಗ ತನ್ನ ತಾಯಿಯ ನಿವೃತ್ತಿ ದಿನ ಹೆಲಿಕಾಪ್ಟರ್ ರೈಡ್ ಕರೆದುಕೊಂಡು ಹೋಗಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ.
ಶಾಲಾ ಶಿಕ್ಷಕಿ ಸುಶೀಲಾ ಚೌಹಾಣ್ ಅವರು ರಾಜಸ್ಥಾನದ ಅಜ್ಮೀರ್‌ನಲ್ಲಿ ಶನಿವಾರ ನಿವೃತ್ತರಾದರು. 33 ವರ್ಷಗಳ ಸೇವೆಯ ನಂತರ, ಪಿಸಂಗನ್‍ನ ಕೇಸರಪುರ ಪ್ರೌಢಶಾಲೆಯಲ್ಲಿ ಸುಶೀಲಾ ಅವರ ಕೆಲಸದ ಕೊನೆಯ ದಿನವಾಗಿತ್ತು. ಈ ನಿವೃತ್ತಿಯ ದಿನವನ್ನು ಸ್ಮರಣೀಯವಾಗಿಸಲು, ಅವರ ಮಗ ಯೋಗೇಶ್ ಚೌಹಾಣ್ ತನ್ನ ತಾಯಿಗಾಗಿ ಹೆಲಿಕಾಪ್ಟರ್ ರೈಡ್ ಬುಕ್ ಮಾಡಿದರು. ಹೆಲಿಕಾಪ್ಟರ್ ಮೂಲಕ ತಾಯಿಯನ್ನು ಶಾಲೆಯಿಂದ ಮನೆಗೆ ಕರೆತರಲು ಯೋಗೇಶ್ ಆಡಳಿತದಿಂದ ವಿಶೇಷ ಅನುಮತಿಯನ್ನೂ ಪಡೆದುಕೊಂಡಿದ್ದರು. ಇದನ್ನೂ ಓದಿ: ನಾನು ಸಂದರ್ಶನ ಕೊಡಲು ಶುರು ಮಾಡಿದ್ರೆ ಭೂಕಂಪವಾಗುತ್ತೆ: ಉದ್ಧವ್‍ಗೆ ಶಿಂಧೆ ಟಾಂಗ್
Rajasthan| A son gifted his mother helicopter ride as a retirement gift in Ajmer
My mother retired as a teacher. I wanted to do something special for her& decided to book her a memorable helicopter ride to reach home. Didn't expect crowd,but feels great:Son Yogesh Chauhan (30.7) pic.twitter.com/adBoBIhOEV
— ANI MP/CG/Rajasthan (@ANI_MP_CG_RJ) July 31, 2022
ಮಗ ಹೇಳಿದ್ದೇನು?
ನನ್ನ ತಾಯಿ ಶಿಕ್ಷಕಿ ಕೆಲಸದಿಂದ ನಿವೃತ್ತಿಯಾಗುತ್ತಿದ್ದರು. ಅದಕ್ಕೆ ನನ್ನ ತಾಯಿಗಾಗಿ ವಿಶೇಷವಾದದ್ದನ್ನು ಮಾಡಬೇಕೆಂದು ಬಯಸಿದ್ದೆ. ಹಾಗಾಗಿ ನನ್ನ ತಾಯಿಯ ಶಾಲೆಯಿಂದ ಮನೆವರೆಗೂ ಹೆಲಿಕಾಪ್ಟರ್ ರೈಡ್ ಬುಕ್ ಮಾಡಬೇಕೆಂದು ನಿರ್ಧರಿಸಿದೆ. ಈ ಹಿನ್ನೆಲೆ ಅದೇ ರೀತಿ ಮಾಡಿದ್ದೇನೆ. ಆದರೆ, ಈ ಸಮಯದಲ್ಲಿ ಇಷ್ಟೊಂದು ಜನರು ಅಲ್ಲಿ ಬರುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಆದರೆ ಇದು ನಮಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು.
ತಾಯಿ ಸಂತಸ
ನನ್ನ ಮಗನ ಈ ಸರ್ಪ್ರೈಸ್ ಉಡುಗೊರೆಯಿಂದ ತುಂಬಾ ಖುಷಿಯಾಗಿದೆ. ನನ್ನ ಮಗ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನಿಗೆ ಒಬ್ಬ ಮಗಳು ಮತ್ತು ಮಗನಿದ್ದಾನೆ. ನನಗೆ ಆಗುತ್ತಿರುವ ಸಂತೋಷವನ್ನು ಪದಗಳಲ್ಲಿ ವಿವರಿಸಲು ಕಷ್ಟ ಎಂದರು. ಇದನ್ನೂ ಓದಿ: ಪತ್ರಾ ಚಾವ್ಲ್ ಭೂ ಹಗರಣ: ಸಂಜಯ್ ರಾವತ್ ನಿವಾಸದ ಮೇಲೆ ಇಡಿ ದಾಳಿ
ಯೋಗೇಶ್ ಕೆಲಸವೇನು?
ಯೋಗೇಶ್ ಚೌಹಾಣ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಪ್ರಸ್ತುತ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿಯ ನಿವೃತ್ತಿಯ ದಿನ ತಮ್ಮ ಸ್ವ-ಗ್ರಾಮಕ್ಕೆ ಬಂದ ಯೋಗೇಶ್ ಈ ಯೋಜನೆಯನ್ನು ಮಾಡಿದ್ದಾರೆ.