ಬಳ್ಳಾರಿ: ಜಿಲ್ಲೆಯಲ್ಲಿ ನಡೆದ ಬ್ಯಾನರ್ ಗಲಭೆಯಲ್ಲಿ ರಾಜಶೇಖರ್ ಸಾವು ಆಕಸ್ಮಿಕ ಅಲ್ಲ. ಅದೊಂದು ಉದ್ದೇಶಪೂರ್ವಕ ಕೊಲೆ. ಕಾಂಗ್ರೆಸ್ (Congress) ಕಾರ್ಯಕರ್ತ ರಾಜಶೇಖರ್ ಗುರಿಯಾಗಿಸಿ ಗುಂಡು ಹಾರಿಸಲಾಗಿದೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ಆರೋಪಿಸಿದ್ದಾರೆ.
ಬಳ್ಳಾರಿಯಲ್ಲಿ (Ballary) ಮಾತನಾಡಿದ ಅವರು, ರಾಜಶೇಖರ್ ಮೇಲೆ ಗುಂಡು ಹಾರಿಸಿದ ವಿಡಿಯೋ ಈಗಾಗಲೇ ಲಭ್ಯವಾಗಿದೆ. ಅದರಲ್ಲಿ ಗಲಾಟೆ ನಡೆಯುವ ವೇಳೆ ಸತೀಶ್ ರೆಡ್ಡಿ ಗನ್‌ಮ್ಯಾನ್ ರಾಜಶೇಖರ್‌ನನ್ನು ಗುರಿಯಾಗಿಸಿ, ಗುಂಡು ಹಾರಿಸಲಾಗಿದೆ. ಇದೇ ರಾಜಶೇಖರ್ ನಮ್ಮ ಮನೆ ಮೇಲೆ ಕಲ್ಲು ತೂರಿದ್ದ, ಬಾಟಲಿ ಎಸೆದಿದ್ದ. ಆಮೇಲೆ ಪಾಪ ವಾಪಾಸ್ ಹೋಗ್ತಿದ್ದಾಗ, ಫೈರ್ ಮಾಡಿ ಕೊಲೆ ಮಾಡಲಾಗಿದೆ. ಗಲಭೆ ನಡೆದ ದಿನ 7 ರಿಂದ 7:30ರ ಸುಮಾರಿಗೆ ಸತೀಶ್ ರೆಡ್ಡಿ (Satish Reddy) ಬಂದು ಗಲಾಟೆ ಮಾಡ್ತಾನೆ. ಆಮೇಲೆ 9 ಗಂಟೆ ಸುಮಾರಿಗೆ ಭರತ್ ರೆಡ್ಡಿ ಹಾಗೂ ನೂರಾರು ಬೆಂಬಲಿಗರ ಜೊತೆ ಬರ್ತಾನೆ. ಆಗ ಗಲಾಟೆ ನಡೆದು, ರಾಜಶೇಖರ್ ಕೊಲೆಯಾಗಿದೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ:ಬಳ್ಳಾರಿ ಗಲಭೆಗೆ ಭರತ್ ರೆಡ್ಡಿ, ಸತೀಶ್ ರೆಡ್ಡಿ ಕಾರಣ – ಕೂಡಲೇ ಬಂಧಿಸಿ: ಶ್ರೀರಾಮುಲು ಆಗ್ರಹ
ಚಾನಾಳ ಶೇಖರ್ ಹಾಗೂ ರಾಜಶೇಖರ್ ಕೊಲೆ ಮಾಡೋದಕ್ಕೆ ಪ್ಲಾನ್ ನಡೆದಿತ್ತು. ಆದ್ರೆ ಚಾನಾಳ ಶೇಖರ್ ಪಾರಾದ, ರಾಜಶೇಖರ್ ಕೊಲೆಯಾದ. ಈ ಕೊಲೆಗೆ ಭರತ್ ರೆಡ್ಡಿ ನೇರ ಕಾರಣ. ಹೀಗಾಗಿ ಕೂಡಲೇ ನಾರಾ ಭರತ್ ರೆಡ್ಡಿ ಬಂಧಿಸಬೇಕು. ಭರತ್ ರೆಡ್ಡಿ ಗಲಾಟೆ ನಡೆದ ದಿನ ಕುಡಿದ ಅಥವಾ ಗಾಂಜಾ ಅಮಲಿನಲ್ಲಿ ಮಾತನಾಡಿದ ಅನ್ಸುತ್ತೆ. ಕೂಡಲೇ ಪ್ರಕರಣವನ್ನ ಹೈಕೋರ್ಟ್ ನ್ಯಾಯಮೂರ್ತಿ ಅಥವಾ ಸಿಬಿಐ ತನಿಖೆಗೆ ಕೊಡಬೇಕು. ಜ.17ನೇ ತಾರೀಖು ಈ ಕುರಿತು ಪ್ರತಿಭಟನಾ ರ‍್ಯಾಲಿ ನಡೆಸುತ್ತೇವೆ ಎಂದ ಅವರು ಭದ್ರತೆ ಕೇಳಿದ್ರೆ ಡಿಕೆ ಶಿವಕುಮಾರ್ ದುರಹಂಕಾರದ ಮಾತಾಡಿದ್ದಾರೆ. ಮತ್ತೇ ಮಂಗಳವಾರವೂ (ಜ.6) ಜನಾರ್ದನ ರೆಡ್ಡಿ ಅವರಿಗೆ ಅಲ್ಲಿ ಬಿತ್ತಾ, ಇಲ್ಲಿ ಬಿತ್ತಾ ಎಂದು ದುರಹಂಕಾರದ ಮಾತಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

