ಬೆಂಗಳೂರು: ನಿಮ್ಮ ಜೊತೆ ನಾವಿದ್ದೀವಿ, ಬನ್ನಿ ನಿಮ್ಮ ಕ್ಷೇತ್ರದ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಕೇಳುವವರಿಲ್ಲ. ಮೈತ್ರಿ ಸರ್ಕಾರದಲ್ಲಿ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ ನಮಗೆ ಸಂಬಂಧವಿಲ್ಲ ಎಂಬಂತೆ ನಡೆದುಕೊಂಡು ಹೋಗುತ್ತಿದೆ. ಈ ಸರ್ಕಾರ ಎಷ್ಟು ದಿನ ಇರುತ್ತದೆ ಎಂದು ದಿನಾ ಬೆಳಗ್ಗೆ ಆದರೆ ಸಾರ್ವಜನಿಕರಲ್ಲಿ ಗೊಂದಲವಿದೆ ಎಂದು ಅತೃಪ್ತ ಶಾಸಕ ಮುನಿರತ್ನ ತಿಳಿಸಿದ್ದಾರೆ.
Advertisement
ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಎಂದರೆ ಎರಡೂ ಪಕ್ಷದವರು ಹೊಂದುಕೊಂಡು ಹೋಗುವುದು ಅವರವರ ಕರ್ತವ್ಯವಾಗಿದೆ. ಈಗ 115 ಜನ ನಮ್ಮವರು ಎಂದು ಜೆಡಿಎಸ್ ನವರು ಮತ್ತು ಕಾಂಗ್ರೆಸ್ ನವರು ಭಾವಿಸಬೇಕು. ಆದರೆ ಕಾಂಗ್ರೆಸ್ 87 ಮಾತ್ರ ನಮ್ಮವರು, ಜೆಡಿಎಸ್‍ನವರು 37 ಜನ ಮಾತ್ರ ನಮ್ಮವರು ಅಂದುಕೊಳ್ಳುತ್ತಿದ್ದಾರೆ. ಇವರ ಮಧ್ಯೆ ಅಭಿವೃದ್ಧಿ ಬಗ್ಗೆ ಯಾರನ್ನು ಕೇಳಬೇಕು ಎಂದು ಪ್ರಶ್ನೆ ಮಾಡಿದ ಅವರು ಸುಮಾರು 13 ತಿಂಗಳಿಂದ ಒಂದು ಕೆಲಸವನ್ನು ಸಹ ಸರ್ಕಾರ ಮಾಡಿಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Advertisement
Advertisement
ನಮ್ಮ ಭಾಗದಲ್ಲಿ ಮೆಟ್ರೋಗೆ ಅನುಕೂಲ ಇಲ್ಲ. ಹೀಗಾಗಿ ನನಗೆ ಒಂದು ಲಿಂಕ್ ಕೊಡಿ ಎಂದು ಕೇಳಿದ್ದೆ. ಇದು ಬಹಳ ದೊಡ್ಡ ಕೆಲಸವೇನು ಅಲ್ಲ. ಇಂದು ನಾವು ಮೆಟ್ರೋಗೆ ಬಹಳಷ್ಟು ಹಣವನ್ನು ಕೊಡುತ್ತಿದ್ದೇವೆ. ಇದು ನನ್ನ ಒಂದು ಕ್ಷೇತ್ರಕ್ಕೆ ಮಾತ್ರ ಅನುಕೂಲವಲ್ಲ. ಇದರಿಂದ ಐದು ಕ್ಷೇತ್ರಗಳಿಗೆ ಅನುಕೂಲವಾಗುತ್ತದೆ ಎಂದರು.
Advertisement
ಗೊರಗುಂಟೆಪಾಳ್ಯ, ಬೆಂಗಳೂರಿಗೆ ಅತೀ ಹೆಚ್ಚು ವಾಹನ ಬರುವ ಪ್ರದೇಶವಾಗಿದೆ. ಅರ್ಧ ಬೆಂಗಳೂರಿನಲ್ಲಿ ಟ್ರಾಫಿಕ್ ಇದೆ. ಅಲ್ಲಿ ಸಿಗ್ನಲ್ ಫ್ರಿ ಕಾರ್ ಡಾರ್ ಮಾಡಬೇಕು, ಜೊತೆ ಅಂಡರ್ ಪಾಸ್ ಮಾಡಬೇಕು. ಇದರ ಬಗ್ಗೆ ಮಾತನಾಡಬೇಕು ಮೀಟಿಂಗ್ ಕರೆಯಿರಿ ಎಂದಿದ್ದೆ. ಆದರೆ ಯಾರು ಕೂಡ ಗಮನ ಹರಿಸಿಲ್ಲ. ಇದಕ್ಕೆ ಸಂಬಂಧ ಪಟ್ಟಂತೆ ನಾನು ರೇವಣ್ಣ ಅವರನ್ನು ಭೇಟಿ ಮಾಡಿದ್ದೆ. ಈ ಬಗ್ಗೆ ಸಿಎಂ, ಡಿಸಿಎಂ ಗಮನಕ್ಕೆ ತಂದರೂ ಗಮನ ಹರಿಸಿಲ್ಲ. ಬೆಂಗಳೂರಿಗೆ 24 ಸಾವಿರ ಕೋಟಿ ಕೊಡುತ್ತೇನೆ ಎನ್ನುತ್ತಾರೆ. 24 ಸಾವಿರವನ್ನು ಎಲ್ಲಿ, ಯಾವ ಕ್ಷೇತ್ರಕ್ಕೆ ಕೊಟ್ಟಿದ್ದೀರಿ ಒಂದು ಗೊತ್ತಿಲ್ಲ ಎಂದು ಗರಂ ಆದರು.
ಬೆಂಗಳೂರಿಗೆ ಸಂಬಂಧಿಸಿದಂತೆ ರೇವಣ್ಣ ಅವರು 24 ಸಾವಿರ ಕೊಟ್ಟು ಡಿಪಿಆರ್ ಮಾಡಿದ್ದಾರೆ. ಆದರೆ ರೇವಣ್ಣ ಅವರನ್ನು ಕೇಳಿದ್ರೆ ನಮಗೆ ಕೆಲಸ ಆಗುತ್ತಿಲ್ಲ ಎಂದು ಹೇಳುತ್ತಾರೆ. ಹಾಗಿದ್ರೆ ನಾವು ಯಾರನ್ನು ಕೇಳಬೇಕು. ರೇವಣ್ಣ ಅವರು ಹೊಳೆನರಸೀಪುರಕ್ಕೋ ಅಥವಾ ಹಾಸನಕ್ಕೆ ಅನುಕೂಲ ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ. ಅವರವರ ಕ್ಷೇತ್ರ ಹಾಗೂ ಜಿಲ್ಲೆಯನ್ನು ಅಭಿವೃದ್ಧಿ ಮಾಡಿಕೊಳ್ಳಲಿ. ಕೊನೆ ಪಕ್ಷ ಬನ್ನಿ ಒಂದು ದಿನ ಮಾತಾಡೋಣ ಎಂದು ಇಂದಿನವರೆಗೂ ಕರೆದಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ಡಿಸಿಎಂ ವಿರುದ್ಧ ಕಿಡಿ:
ಉಪಮುಖ್ಯಮಂತ್ರಿಯವರನ್ನು ಕೇಳೋಣ ಅಂದ್ರೆ ಅವರಿಗೆ ಯಾವ ಅಧಿಕಾರನೂ ಇಲ್ಲ. ಅವರಿಗೆ ಝೀರೋ ಟ್ರಾಫಿಕ್ ಬಿಟ್ಟರೆ ಅವರಿಗೆ ಯಾವುದೇ ಅಧಿಕಾರವಿಲ್ಲ. ಆದರೆ ಹೆಸರಿಗೆ ಮಾತ್ರ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಅವರು ತಮ್ಮ ಅಧಿಕಾರವನ್ನು ಯಾವುದಕ್ಕೂ ಬಳಸಿಕೊಂಡಿಲ್ಲ. ಈ ಎಲ್ಲಾ ವಿಚಾರಗಳು ಬೇಸರ ತರಿಸಿದೆ. ಹೀಗಾಗಿ ಇನ್ನು ಮುಂದೆ ರಾಜ್ಯಕ್ಕೆ ಒಳ್ಳೆಯದಾಗಬೇಕು ಅಂದರೆ ಒಂದು ಪಕ್ಷಕ್ಕೆ ಮತ ಕೊಟ್ಟು ಗೆಲ್ಲಿಸಿ, ರಾಜ್ಯವನ್ನು ಅಭಿವೃದ್ಧಿ ಪಡಿಸೋಕೆ ಚಿಂತನೆ ಮಾಡಬೇಕು ಅಂದರು.