ಸಂತೋಷ್ ಮಹಾರಾಜ್ ಫಿಲ್ಮ್ಸ್ ಲಾಂಛನದಲ್ಲಿ ಸಂತೋಷ್ ಹೆಚ್.ರಾಯ್ಕರ್ ನಿರ್ಮಾಣದ ರಾಜಪಥ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ‘ಯು’ ಸರ್ಟಿಫಿಕೇಟ್ ನೀಡಿದೆ.
ಮೂಗೂರು ಸಿದ್ದು ರಚಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ- ಚಂದ್ರ ಓಬಯ್ಯ, ಛಾಯಾಗ್ರಹಣ – ರಘು, ಸಂಕಲನ – ಸಂಜೀವ ರೆಡ್ಡಿ, ಜೇಮ್ಸ್ ಪೆರೆಕಲ್ವಿಲ್ ಹಿನ್ನೆಲೆ ಸಂಗೀತವಿದೆ.
Advertisement
Advertisement
ತಾರಾಗಣದಲ್ಲಿ ಸಂತೋಷ್ ಮಹಾರಾಜ್, ಹೆಚ್.ಆರ್. ಉಮೇಶ್, ನಿತ್ಯಾ, ಸಿಂಧು, ಸುಧೀರ್ ಹೆಚ್ ರಾಯ್ಕರ್, ತೇಜ್‍ಪಾಲ್ ಮಹೇಶ್ ಚಕ್ರವರ್ತಿ, ಆನಂದ್ ಡಿ ಕಳಸ, ರಿಕ್ಷಣ ಪೂಜಾರಿ, ರಂಗ, ಎಸ್.ಎ ಮುತ್ತಗಿ, ಉಮೆಶ್ ಶೆಟ್ಟಿ ಮಂದಾರ್ತಿ, ರಮಾಕಾಂತ್ ಆರ್ಯನ್, ಜೆ.ಕೆ. ರಜು, ಬೇಬಿ ಪರಿಣಿತ, ಬೇಬಿ ಐಶ್ವರ್ಯ ಎಸ್ ರಾಯ್ಕರ್ ಮುಂತಾದವರಿದ್ದಾರೆ.
Advertisement
ಪ್ರತಿಯೊಬ್ಬರಿಗೂ ಪುಟ್ಟ ಪುಟ್ಟ ಕನಸುಗಳಿರುತ್ತೆ. ಆ ಕನಸನ್ನು ನನಸು ಮಾಡಿಕೊಳ್ಳಬೇಕಾದರೆ ಜೀವನದಲ್ಲಿ ತಾಳ್ಮೆ, ನಂಬಿಕೆ ಮುಖ್ಯ. ಹಾಗೇ ಪ್ರೀತಿ ಪ್ರೇಮ, ಸ್ನೇಹವೂ ಅಗತ್ಯ. ಇದರ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದೆ.