ಬೆಂಗಳೂರು: ಶ್ರೀರಾಮನ ಕುರಿತು ತಪ್ಪಾಗಿ ಮಾತನಾಡಿದ ಸಚಿವ ರಾಜಣ್ಣನ (KN Rajanna) ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಕ್ಷಮೆ ಕೇಳಬೇಕು, ಅಥವಾ ರಾಜಣ್ಣನ ಮೂಲಕ ಕ್ಷಮೆ ಕೇಳಿಸಬೇಕು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ.ಸದಾನಂದಗೌಡ (DV Sadananda Gowda) ಅವರು ಆಗ್ರಹಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರದ ಮುಳಬಾಗಿಲಿನ ಬ್ಯಾನರ್ ಹರಿದರಲ್ಲವೇ? ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ಪ್ರಶ್ನಿಸಿದರು. ಮುಂದೆ ಸಿದ್ದರಾಮಯ್ಯನವರ ಫೋಟೊ ಇರುವ ಬ್ಯಾನರ್‌ಗಳು ಹರಿದುಹೋಗುವ ದಿನ ಬರಲಿದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಗೃಹಜ್ಯೋತಿ ನಿಯಮದಲ್ಲಿ ಬದಲಾವಣೆ – ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯವೇನು?
Advertisement
Advertisement
ರಾಜಣ್ಣ ಅವರಿಗೆ ಕಾಲ ಮಿಂಚಿಲ್ಲ. ಆ ಗೊಂಬೆ ಮುಂದಿನ ದಿನಗಳಲ್ಲಿ ಉರುಳಾಗಿ ಕಾಡಲಿದೆ. ರಾಜಣ್ಣನಿಗೆ ಬೊಂಬೆ ಕಂಡಿತೇ? ಅರಶಿನ ಕಾಮಾಲೆ ರೋಗದವರಿಗೆ ಅರಶಿನವಾಗಿಯೇ ಕಾಣುತ್ತದೆ. ಸಹಕಾರ ಸಚಿವನಾಗಿ ಮಾಡಿದ್ದಾರೆ. ಛೇ, ಸಿದ್ದರಾಮಯ್ಯರಿಂದ ಕೆಟ್ಟ ಕೆಲಸವಿದು. ಸಿದ್ದರಾಮಯ್ಯರ ಓಲೈಕೆ ಮುಂದುವರಿದಿದೆ. ಈ ವ್ಯವಸ್ಥೆಯಿಂದ ಕಾಂಗ್ರೆಸ್ (Congress) 3 ಹೋಳಾಗಲಿದೆ. ಬಹಳ ದಿನ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಫೆಬ್ರವರಿ16 ರಂದು ರಾಜ್ಯ ಬಜೆಟ್
Advertisement
14 ಬಜೆಟ್ ಕೊಟ್ಟ ಸಿದ್ದರಾಮಯ್ಯನವರು ತಮ್ಮ ಸಚಿವರನ್ನು ಹೇಗೆ ತರಬೇತಿ ಮಾಡಿದ್ದಾರೆ ಎಂಬುದು ಕಾಣುತ್ತಿದೆ. ಅಯೋಧ್ಯೆಯಲ್ಲಿ ಇದೇ 22ರಂದು ಶ್ರೀರಾಮನ ಪ್ರಾಣಪ್ರತಿಷ್ಠೆ ವಿಚಾರ ಗಮನಿಸಿ ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟದ ಎಲ್ಲರಿಗೂ ತಲೆ ಕೆಟ್ಟಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಜ.22ರಂದು ಕೇಂದ್ರ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ
Advertisement
ನಾನು ಕೂಡ ಆ ಸ್ಥಾನದಲ್ಲಿ ಇದ್ದವ. ಅಲ್ಲಿ ಕೂತವರು ತಮ್ಮ ಬುದ್ಧಿಯನ್ನು ರಾಜ್ಯದ ಹಿತಾಸಕ್ತಿಗೆ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಒಂದೂವರೆ ತಿಂಗಳಿನಿಂದ ಕಾಂಗ್ರೆಸ್ಸಿಗರ ಹೇಳಿಕೆ ಗಮನಿಸಿದರೆ ಹುಚ್ಚುಚ್ಚು ಮಾತುಗಳು ಕಂಡುಬರುತ್ತವೆ. ಹರಿಪ್ರಸಾದ್ ಅವರ ಗೋಧ್ರಾ ಹೇಳಿಕೆ, ರಾಜಣ್ಣನ ಹೇಳಿಕೆ ಗಮನಿಸಿದ ಜನತೆ ಇನ್ನು ಸುಮ್ಮನೆ ಇರಲಾರರು ಎಂದು ಎಚ್ಚರಿಸಿದರು. ಇದನ್ನೂ ಓದಿ: ಮಠಗಳು ಸಾಮರಸ್ಯ ಬೆಳೆಸುವ ಕೇಂದ್ರವಾಗಲಿ: ಯು.ಟಿ ಖಾದರ್
ರಾಮ ಇಲ್ಲ ಎಂದು ಅಫಿಡವಿಟ್ ಹಾಕಿದ ಈ ಅಯೋಗ್ಯರು ಇಂಥ ಹೇಳಿಕೆ ಕೊಡುವುದು ಅಚ್ಚರಿಯ ವಿಚಾರವಲ್ಲ. ಶ್ರೀರಾಮನ ಬಗ್ಗೆ ಹೀಗೆ ಮಾತನಾಡಿದರೆ ಅದರಿಂದ ಜನರು ಎದ್ದುಬಿಡುವ ಆತಂಕ ಉಂಟಾಗಿದೆ. ಶ್ರೀರಾಮನ ಸಂಬಂಧದ ವಾಲ್ ಪೋಸ್ಟರ್, ಬ್ಯಾನರ್‌ಗಳನ್ನು ಏಜೆಂಟರ ಮೂಲಕ ಹರಿಯುತ್ತಿದ್ದಾರೆ. ಹೈಕೋರ್ಟ್ ವಕೀಲ ಒಬ್ಬರನ್ನು ನ್ಯಾಯಮೂರ್ತಿ ಆಗಲು ಶಿಫಾರಸು ಮಾಡಿದ್ದರು. ಅದು ಬೇಡ ಎಂದು ವಕೀಲರು ಹೇಳಿದ್ದರಂತೆ. ಸಿದ್ದರಾಮಯ್ಯನವರೇ ನೀವು ಇವತ್ತು ಅದೇ ಸ್ಥಾನದಲ್ಲಿ ಇರಬೇಕಿತ್ತು. ಸಿದ್ದರಾಮಯ್ಯನವರ ಪರವಾಗಿ ಕೆಲವರು, ಇನ್ನೂ ಕೆಲವರು ಡಿ.ಕೆ.ಶಿವಕುಮಾರ್ ಪರವಾಗಿ ಕೆಲಸ ಮಾಡುತ್ತಾರೆ. ಇಲ್ಲಿನ ಪರಿಸರದಲ್ಲಿ ಶ್ರೀರಾಮ ಇದ್ದಾನೆ. ಆರಾಧ್ಯ ದೈವ ಶ್ರೀರಾಮನನ್ನು ನೋಡಲು ಎಲ್ಲರೂ ಹೋಗುತ್ತಿದ್ದಾರೆ. ಫಾರೂಕ್ ಅಬ್ದುಲ್ಲ ಅವರಂಥ ವ್ಯಕ್ತಿ ಪ್ರಧಾನಿಯ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜ.19ರಂದು ಬೆಂಗಳೂರಿಗೆ ಮೋದಿ – ಈ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧ