ರಜನಿಕಾಂತ್ (Rajanikanth) ನಟನೆಯ ‘ವೆಟ್ಟೈಯಾನ್’ (Vettaiyan) ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ನಟಿ ಮಂಜು ವಾರಿಯರ್ ಜೊತೆ ಸಖತ್ ಆಗಿ ತಲೈವಾ ಹೆಜ್ಜೆ ಹಾಕಿದ್ದಾರೆ. ‘ಜೈಲರ್’ ಸಿನಿಮಾದ ಬಳಿಕ ಮತ್ತೊಂದು ಡ್ಯಾನ್ಸ್ ನಂಬರ್ ಹಾಡಿನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
‘ವೆಟ್ಟೈಯಾನ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದರ ನಡುವೆ ಕಲರ್‌ಫುಲ್ ಹಾಡಿನಲ್ಲಿ ತಲೈವಾ ಮಿಂಚಿದ್ದಾರೆ. 73ನೇ ವಯಸ್ಸಿನಲ್ಲೂ ಡ್ಯಾನ್ಸ್‌ನಲ್ಲಿ ಹಿಂದೆ ಬೀಳದೇ ರಜನಿಕಾಂತ್ ಅವರು ಮಂಜು ವಾರಿಯರ್ ಜೊತೆ ಸಖತ್ ಆಗಿಯೇ ಹೆಜ್ಜೆ ಹಾಕಿದ್ದಾರೆ. ‘ಮನಸಿಲಾಯೋ’ ಎಂಬ ಹಾಡಿನಲ್ಲಿ ತಮಿಳು ಮತ್ತು ಮಲಯಾಳಂ ಸಾಹಿತ್ಯ ಒಳಗೊಂಡಿದೆ. ಈ ಸಾಂಗ್ ಫ್ಯಾನ್ಸ್‌ಗೆ ಇಷ್ಟವಾಗಿದೆ.
View this post on Instagram
ತಲೈವಾ ಮತ್ತು ಮಂಜು ವಾರಿಯರ್ ಜೊತೆ ಗೆಸ್ಟ್ ಆಗಿ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಕೂಡ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ಅವರು ಚಿತ್ರಕ್ಕೆ ಕಂಪೋಸ್ ಮಾಡಿದ ಹಾಡುಗೆಳೆಲ್ಲಾ ಹಿಟ್ ಆಗಿದೆ. ಈ ಹಾಡಿಗೂ ಕೂಡ ಈಗ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ಒಂದು ಅವಕಾಶ ಕಳೆದು ಹೋದರೆ, ನೂರಾರು ಅವಕಾಶಗಳು ಬರುತ್ತವೆ: ಕಾಸ್ಟಿಂಗ್ ಕೌಚ್ ಬಗ್ಗೆ ಸನ್ನಿ ಲಿಯೋನ್ ಪ್ರತಿಕ್ರಿಯೆ
ಇನ್ನೂ ‘ವೆಟ್ಟೈಯಾನ್’ ಚಿತ್ರ ಅಕ್ಟೋಬರ್ 10ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಟಿ.ಜೆ ಜ್ಞಾನ್‌ವೇಲ್ ನಿರ್ದೇಶನ ಮಾಡಿದ್ದಾರೆ. ‘ಜೈಲರ್’ ಸಿನಿಮಾದಂತೆ ‘ವೆಟ್ಟೈಯಾನ್’ ಕೂಡ ಸಕ್ಸಸ್ ಲಿಸ್ಟ್‌ಗೆ ಸೇರುತ್ತಾ? ಕಾದುನೋಡಬೇಕಿದೆ. ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.