ಬೆಂಗಳೂರು: ಅಂಬರೀಶ್ ನನ್ನ ಆತ್ಮೀಯ ಗೆಳೆಯ ಅವನ ಅಗಲಿಕೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ದು:ಖವನ್ನು ಹೊರಹಾಕಿದ್ದಾರೆ.
ಕಂಠೀರವ ಸ್ಟೇಡಿಯಂನಲ್ಲಿ ಅಂಬರೀಶ್ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿಗೆ ಯಾವಾಗಲೂ ಬಂದರೂ ನಾನು ಅಂಬರೀಶ್ ಮನೆಯಲ್ಲಿ ಊಟಮಾಡಿಯೇ ಹೋಗುತ್ತಿದ್ದೆ. ಇತ್ತೀಚೆಗೆ ನಾಲ್ಕೈದು ಬಾರಿ ಬೆಂಗಳೂರಿಗೆ ಬಂದಾಗ ಅವನ ಮನೆಗೆ ಹೋಗಲು ಆಗಿರಲಿಲ್ಲ ಎಂದು ತಿಳಿಸಿದರು.
Advertisement
ಒಂದು ವಾರದ ಹಿಂದೆ ನನ್ನ ಅಣ್ಣನ ಮಗಳ ಮದುವೆಗೆ ಬೆಂಗಳೂರಿಗೆ ಬಂದಿದ್ದೆ. ಆಗ ಅಂಬರೀಶ್ಗೆ ಫೋನ್ ಮಾಡಿದಾಗ ಈ ಬಾರಿ ನಿನ್ನ ಮನೆಗೆ ಬರಲು ಆಗೋದಿಲ್ಲ ಮತ್ತೊಮ್ಮೆ ಬೆಂಗಳೂರಿಗೆ ಬಂದಾಗ ಬರುತ್ತೇನೆ ಎಂದು ಹೇಳಿದ್ದಕ್ಕೆ ಮತ್ತೆ ಬಂದಾಗ ಮನೆಗೆ ಬರಲಿಲ್ಲ ಅಂದ್ರೆ ಸಾಯಿಸಿ ಬಿಡ್ತೀನಿ ಅಂತಾ ಅಂಬಿ ಹೇಳಿದ್ದ ಎಂದು ತಿಳಿಸಿದರು.
Advertisement
ನಾವಿಬ್ಬರು ಆತ್ಮೀಯ ಸ್ನೇಹಿತರು. ನನಗೂ ಅಂಬರೀಶ್ಗೂ ಅವಿನಾಭಾವ ಸಂಬಂಧವಿದೆ. ಅಂಬರೀಶ್ ನಮ್ಮನ್ನೆಲ್ಲಾ ಬಿಟ್ಟು ಹೋಗಿರುವುದು ಬಹಳ ದು:ಖವಾಗುತ್ತಿದೆ ಎಂದು ರಜನಿಕಾಂತ್ ಸಂತಾಪ ವ್ಯಕ್ತಪಡಿಸಿದರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv